ಎಚ್‌ಡಿಕೆಗೆ ನಾನು ಯಾರು ಗೊತ್ತಿಲ್ಲ, ಕಾಂಗ್ರೆಸ್‌ ಸೇರುವೆ ಎಂದ ಜೆಡಿಎಸ್ ಶಾಸಕ

By Kannadaprabha News  |  First Published Sep 5, 2021, 11:09 AM IST
  • ಜೆಡಿಎಸ್‌ನಲ್ಲಿ ಇರುವ ನನ್ನ ಬಗ್ಗೆಯೇ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ತಿಳಿದಿಲ್ಲ
  • ನಾನು ಕಾಂಗ್ರೆಸ್‌ ಸೇರ್ತಾ ಇದ್ದೇನೆ ಎಂದು ಹೇಳಿದ ಜೆಡಿಎಸ್ ಶಾಸಕ 

ತುರುವೇಕೆರೆ (ಸೆ.05): ನಾನು ಜೆಡಿಎಸ್‌ನಲ್ಲಿ ಇದ್ದಾಗಲೇ ‘ಬೆಮಲ್‌ ಕಾಂತರಾಜ್‌ ಯಾರು’ ಅಂತ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ ಮೇಲೆ ನಾನು ಅವರಿಗೆ ಗೊತ್ತಿಲ್ಲ ಅಂತ ತಾನೇ ಅರ್ಥ. ಹಾಗಾಗಿ ನಾನು ಕಾಂಗ್ರೆಸ್‌ ಸೇರ್ತಾ ಇದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಬೆಮಲ್‌ ಕಾಂತರಾಜ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತಾರು ವರ್ಷಗಳ ಕಾಲ ನಾನು ಜೆಡಿಎಸ್‌ನಲ್ಲಿ ಇದ್ದಿದ್ದು, ಪಕ್ಷ ಸಂಘಟನೆ ಮಾಡಿದ್ದು, ನಾನು ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾಗಿರುವುದು ಸಹ ಕುಮಾರಸ್ವಾಮಿಯವರಿಗೆ ಗೊತ್ತಿಲ್ಲ ಅಂದ ಮೇಲೆ ನಾನ್ಯಾಕೆ ಜೆಡಿಎಸ್‌ನಲ್ಲಿರಬೇಕು ಎಂದು ಪ್ರಶ್ನಿಸಿದರು.

Tap to resize

Latest Videos

ಕಾಂಗ್ರೆಸ್‌ಗೆ ಬಾಯ್,JDSಗೆ ಹಾಯ್ ಎಂದ ಮಾಜಿ ಸಂಸದರ ಪುತ್ರ

ಜೆಡಿಎಸ್‌ನಿಂದಲೇ ವಿಧಾನಸಭೆಗೆ ಸ್ಪರ್ಧಿಸಬೇಕೆಂಬ ಇಚ್ಛೆಯಿತ್ತು. ಜೆಡಿಎಸ್‌ ವರಿಷ್ಠರ ಗಮನಕ್ಕೂ ತಂದಿದ್ದೆ. ಆದರೆ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಮಲ್‌ ಕಾಂತರಾಜ್‌ ಯಾರು? ನನಗೆ ಗೊತ್ತೇ ಇಲ್ಲ ಅಂತ ಹೇಳಿದ ಮೇಲಷ್ಟೇ ತಾವು ಬೇರೆ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದೇನೆ ಎಂದರು.

click me!