2023ರ ಚುಣಾವಣೆಗೆ 6 ತಿಂಗಳ ಮುನ್ನವೇ ನಾನಾ ನೀನಾ ಅನ್ನೋ ಅನ್ನೋ ಜಿದ್ದಾಜಿದ್ದಿ ಧಾರವಾಡ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪರ್ಧೆ ಮಾಡುವ ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ಸದ್ಯ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಸೆ.18): 2023ರ ಚುಣಾವಣೆಗೆ 6 ತಿಂಗಳ ಮುನ್ನವೇ ನಾನಾ ನೀನಾ ಅನ್ನೋ ಅನ್ನೋ ಜಿದ್ದಾಜಿದ್ದಿ ಧಾರವಾಡ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಇನ್ನು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪರ್ಧೆ ಮಾಡುವ ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ಸದ್ಯ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ. ಗ್ರಾಮೀಣ ಕ್ಷೆತ್ರದಲ್ಲಿ ಎರಡು ಬಣವಾಗಿ ಕಾಂಗ್ರೆಸ್ ಒಡೆದು ಹೋಗಿದೆ.ಇನ್ನು ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಯೋಗೀಶ್ ಗೌಡ ಕೊಲೆ ಕೇಸ್ ನಲ್ಲಿ ಸದ್ಯ ಧಾರವಾಡ ಜಿಲ್ಲೆಗೆ ಎಂಟ್ರಿ ಆಗದ ಪರಿಸ್ಥಿತಿಯಲ್ಲಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ನಾನೇ ಆಕಾಂಕ್ಷಿ ನಾನು ಧಾರವಾಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆನೆ ಎಂದು ಬಹಿರಂಗವಾಗಿ ಹೇಳಿಕ್ಕೊಂಡಿದ್ದಾರೆ. ಮಾಜಿ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲಿಲಾ ಕುಲಕರ್ಣಿ ಕ್ಷೆತ್ರದಲ್ಲಿ ಒಂದು ಕಡೆ ಸದ್ಯ ಪಿಲ್ಡಿಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ವಿನಯ ಕುಲಕರ್ಣಿ ಅವರು ಮತ್ತೆ ಕ್ಷೆತ್ರಕ್ಕೆ ಬರ್ತಾರೆ ಅವರ ಗುಡ್ ವಿಲ್ ಜೊತೆ ನಾವು ಇದ್ದೇವೆ. ಕ್ಷೆತ್ರದಲ್ಲಿ ವಿನಯ ಕುಲಕರ್ಣಿ ಪರ ಜನರು ಇದಾರೆ ವಿನಯ ಕುಲಕರ್ಣಿ ಬರ್ತಾರೆ ಗೆಲ್ತಾರೆ ಅನ್ನೊ ವಿಶ್ವಾಸ ನಮಗಿದೆ ವಿನಯ ಕುಲಕರ್ಣಿ ಅವರು ಬರ್ತಾರೆ ಅವರೆ ಅಭ್ಯರ್ಥಿಯಾಗ್ತಾರೆ ಎಂದ ಶಿವಲಿಲಾ ಕುಲಕರ್ಣಿ ಅವರು ಒಂದು ಕಡೆ ಗ್ರಾಮೀಣ ಕ್ಷೆತ್ರದಲ್ಲಿ ಪುಲ್ ಆ್ಯಕ್ಟಿವ್ ಆಗಿ ಕ್ಷೆತ್ರದಲ್ಲಿ ತಿರುಗಾಡುತ್ತಿದ್ದಾರೆ.
ಇನ್ನು ಮತ್ತೊಂದಡೆ ಅಲ್ಪಸಂಖ್ಯಾತರ ಮುಖಂಡ ಇಸ್ಮಾಯಿಲ್ ತಮಾಟಗಾರ ಕ್ಷೆತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ತಮಾಟಗಾರ ಮಾತ್ರ
ನಾನೆ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕ್ಕೊಂಡಿದ್ದಾರೆ ನೂರಕ್ಕೆ ನೂರು ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಕಳೆದ 20 ವರ್ಷದಿಂದ ಆಕಾಂಕ್ಷಿ ಇರಲಿಲ್ಲ ನಾನು ಧಾರವಾಡ ಗ್ರಾಮೀಣ ಕ್ಷೆತ್ರದ ಆಕಾಂಕ್ಷಿಯಾಗಿದ್ದೆನೆ.
ಪಕ್ಷ ವಿನಯ ಕುಲಕರ್ಣಿ, ಇಸ್ಮಾಯಿಲ್ ತಮಾಟಗಾರ ಬಗ್ಗೆ ವಿಚಾರ ಮಾಡಲ್ಲ ಕ್ಷೆತ್ರದಲ್ಲಿ ಆಗು ಹೋಗುಗಳ ಬಗ್ಗೆ ಪಕ್ಷ ವಿಚಾರ ಮಾಡುತ್ತೆ ನಾನು ಸಾಯೋವರೆಗೂ ಗ್ರಾಮೀಣ ಕ್ಷೆತ್ರದಿಂದ ಸ್ಪರ್ದೆ ಮಾಡುತ್ತೆನೆ. ನಾನು ಕ್ಷೆತ್ರದಲ್ಲಿ ಪ್ರಚಾರ ಮಾಡುತ್ತಿದ್ದೆನೆ ಎಂದು ಇಸ್ಮಾಯಿಲ್ ತಮಾಟಗಾರ ಅವರು ಧಾರವಾಡ ಗ್ರಾಮಿಣ ಕ್ಷೆತ್ರದಲ್ಲಿ ಪ್ರಚಾರವನ್ನ ಶುರು ಮಾಡಿದ್ದಾರೆ.
ಯಾತ್ರಿ ನಿವಾಸ ಉದ್ಘಾಟನೆಗೆ ಬಂದ ಸಚಿವ ಜೋಶಿಗೆ ಶಾಕ್ ಕೊಟ್ಟ ವಿನಯ್ ಕುಲಕರ್ಣಿ ಬೆಂಬಲಿಗರು
ಇನ್ನು ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ನಾನಾ ನೀನಾ ಅನ್ನೋ ಪ್ರಶ್ನೆ ಉದ್ಭವ ವಾಗಿದೆ. ಈ ಕಡೆ ವಿನಯ ಕುಲಕರ್ಣಿ ಅವರು ಡಿಕೇಶಿವಕುಮಾರ, ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದಾರೆ. ಇಗಾಗಲೆ ವಿನಯ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಇನ್ನು ಇಸ್ಲಾಯಿಲ್ ತಮಾಟಗಾರ ಜಮೀರ್ ಅಹ್ಮದ್ ಅವರ ಆಪ್ತನಾಗಿ ಗುರುತಿಸಿ ಕ್ಕೊಂಡಿದ್ದಾರೆ.
Dharwad ಕಾಂಗ್ರೆಸ್‌ನಲ್ಲಿ ಜೀವ ಬೆದರಿಕೆ: ಪ್ರಕರಣ ವಿಚಾರಣೆಯಾದ್ರೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ!
ಗ್ರಾಮೀಣ ಕ್ಷೆತ್ರದಲ್ಲಿ ಇಬ್ಬರು ಲಿಡರ್ ಗಳು ಪುಲ್ ಆ್ಯಕ್ಟಿವ್ ಆಗಿದ್ದಾರೆ. ಇನ್ನು ಈ ಭಾರಿ 2023 ರ ಧಾರವಾಡ ಗ್ರಾಮೀಣ ಕ್ಷೆತ್ರದಲ್ಲಿ ಕಾಂಗ್ರೆಸ್ ನಲ್ಲಿ ಸದ್ಯ ಬಿರುಕು ಬಿಟ್ಟಿದೆ. ಒಂದೆ ಟಿಕೆಟ್ ಗಾಗಿ ಇಬ್ಬರು ನಾಯಕರುಗಳ ಪುಲ್ ಪೈಪೋಟಿ ನಡೆದಿದೆ. ಇನ್ನು ಇದನ್ನ ಡಿಕೆಶಿ, ಸಿದ್ದರಾಮಯ್ಯ ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕ್ಷೆತ್ರಕ್ಕೆ ವಿನಯ ಕುಲಕರ್ಣಿ ಬರ್ತಾರೆ ಇಲ್ಲವೋ ಎಂಬ ಆತಂಕದಲ್ಲಿ ಕ್ಷೆತ್ರದ ಜನರು ಇದ್ದಾರೆ.