ಬದುವಿನಲ್ಲಿ ಹುಲ್ಲು ಇದ್ದರೆ ಶಂಖದ ಹುಳು ನಿಯಂತ್ರಣ

By Kannadaprabha News  |  First Published Jul 24, 2022, 4:32 PM IST

ಬದುವಿನಲ್ಲಿ ಹುಲ್ಲಿನ ಇದ್ದರೆ ಶಂಖದ ಹುಳು ನಿಯಂತ್ರಿಸಬಹುದು ಎಂದು ಲಬುರಗಿ ಜಂಟಿ ಕೃಷಿ ನಿರ್ದೇಶಕ ಜಂಟಿ ಕೃಷಿ ನಿರ್ದೇಕ ಸುಗೂರ ರೈತರಿಗೆ ಸಲಹೆ ನೀಡಿದರು.


ಆಳಂದ (ಜು.24): ಸತತ ಮಳೆಯಿಂದಾದ ಬೆಳೆಹಾನಿ ಹಾಗೂ ಶಂಖದ ಹುಳಬಾಧೆ ಹಿನ್ನೆಲೆಯಲ್ಲಿ ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ಅವರ ನೇತೃತ್ವದಲ್ಲಿ ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ ಒಳಗೊಂಡ ಪ್ರತ್ಯೇಕ ಅಧಿಕಾರಿಗಳ ತಂಡವು ರೈತರ ಹೊಲಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ. ಜಂಟಿ ಕೃಷಿ ನಿರ್ದೇಕ ಸುಗೂರ ಅವರ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳು ಖಜೂರಿ ಹೋಬಳಿಯಲ್ಲಿನ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ, ಸೋಯಾಬಿನ್‌ ಬೆಳೆಗೆ ಬಾಧಿಸುತ್ತರುವ ಶಂಖದ ಹುಳುಗಳ ಕಾಟವನ್ನು ವೀಕ್ಷಿಸಿ ನಿಯಂತ್ರಣಕ್ಕೆ ಅನುಸರಿಸುವ ಸೂಕ್ತ ಕ್ರಮ ಸಲಹೆ ಮಾರ್ಗದರ್ಶನ ನೀಡಿದರು.

ಈ ಬಾರಿ ಸತತ ಮಳೆಯಿಂದ ಶಂಕುದ ಹುಳ ಬಾಧೆ ಉಂಟಾಗಿದ್ದರಿಂದ ಇವುಗಳ ನಿಯಂತ್ರಣ ಮಾಡಲು ರೈತರಿಗೆ ಸಾಧ್ಯವಾಗಿಲ್ಲ. ಆದರೆ, ಈಗೆನಾದರು ಕಂಡುಬಂದಲ್ಲಿ ಮಿಟಾಲ್‌ಡಿಹೈಡ್‌ ಅಥವಾ ಸ್ನೇಹಲ್‌ಕಿಲ್‌ ಬಳಸಿ ನಿಯಂತ್ರಣ ಕೈಗೊಳ್ಳಲು ಅವರು ಸೂಚಿಸಿದರು.

Tap to resize

Latest Videos

ರಾಮನಗರ: ಹಣ್ಣುಗಳ ರಾಜನಿಗೆ ಆರಂಭದಲ್ಲೇ ಕೀಟಬಾಧೆ, ರೈತರಲ್ಲಿ ಆತಂಕ

ರೈತರಿಂದ ಬೆಳೆಯ ಕುರಿತು ಮಾಹಿತಿ ಪಡೆದುಕೊಂಡ ಅವರು, ಪ್ರಸಕ್ತ ಪರಿಸ್ಥಿತಿಯಲ್ಲಿ ಈಗಾಗಲೇ ಶಂಖದ ಹುಳ ಬಾಧಿತ ಹೊಲದಲ್ಲಿ ಜು.18ರಿಂದ ಮಳೆಯ ಕಡಿಮೆ ಆಗಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಹುಳಗಳ ಬಾಧೆ ಕಂಡುಬಂದಿರುವುದಿಲ್ಲ. ಆದರೆ, ಮಳೆಯ ಬೀಳುವ ಸಂದರ್ಭದಲ್ಲಿ ಹುಳಗಳು ಕಂಡುಬಂದಿವೆæ ಎಂದು ರೈತರು ಹೇಳಿಕೊಂಡರು. ಕೃಷಿ ಅಧಿಕಾರಿ ಬನಸಿದ್ಧಪ್ಪ ಬಿರಾದಾರ, ಸಹಾಯಕ ಕೃಷಿ ಅಧಿಕಾರಿ ವಿಲಾಸ್‌ ಹಾಜರಿದ್ದರು.

ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ ಅವರು ಆಳಂದ ವಲಯದ ಹೊಸಳ್ಳಿ, ಮುನ್ನಹಳ್ಳಿ. ಸಲಗರ ಮತ್ತು ತಡಕಲ್‌ ಗ್ರಾಮಗಳ ಹೊಲಗÜಳಿಗೆ ಭೇಟಿ ನೀಡಿ ಶಂಖದ ಹುಳ ಬಾಧೆ ನಿರ್ವಹಣೆ ಹಾಗೂ ಮಳೆಯಿಂದಾದ ಬೆಳೆ ಏರುಪೇರನ್ನು ವೀಕ್ಷಿಸಿದರು. ತಡಕಲ್‌ ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಗ್ರಾಮದ ರೈತರೊಂದಿಗೆ ಚರ್ಚಿಸಿದ ಮಲ್ಲಿಕಾರ್ಜುನ ಅವರು ಶಂಖದ ಹುಳದ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಛೀ..ಕಂಬಳಿ ಹುಳದಲ್ಲೂ ಚಾಕೊಲೇಟ್‌ ಮಾಡ್ತಾರಂತೆ !

ರೈತರು ಹೊಲಗಳಲ್ಲಿ ಕಳೆ ನಾಶಕ ಔಷಧಿಯ ಬಳಕೆ ಹೆಚ್ಚುತ್ತಿದ್ದು, ಬಂದಾರಿಯ ಮೇಲಿನ ಹುಲ್ಲನ್ನು ಗಿಡವನ್ನು ನಾಶ ಮಾಡಿದರೆ ಬಂದಾರಿಯಲ್ಲಿರುವ ಶಂಖದ ಹುಳಗಳು ಹೊಲದಲ್ಲಿ ಬಂದು ಬೆಳೆಗೆ ಹಾನಿಮಾಡುತ್ತಿವೆ. ಹೀಗಾಗಿ ಬಂದಾರಿಯಲ್ಲಿ ಹುಲ್ಲು ಗಿಡ, ಗಂಟಿ ಇರುವಂತೆ ನೋಡಿಕೊಳ್ಳಬೇಕು. ಬಂದಾರಿಗೆ ಕಳೆನಾಶಕ ಔಷಧಿ ಸಿಂಪರಿಸಬಾರದು. ಆಳವಾದ ಮಣ್ಣಿದ್ದ ಪ್ರದೇಶದಲ್ಲಿ ಸೋಯಾಭಿನ್‌ ಬೆಳೆದರೆ ಈ ಹುಳದ ಬಾಧೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಸಲಹೆ ನೀಡಿ ಮಾಹಿತಿ ಕಲೆಹಾಕಿದರು.

ಪರಿಹಾರಕ್ಕಾಗಿ ಕಾಯುತ್ತಿದ್ದಾರೆ:

ಜುಲೈ 1ರಂದು ಆರಂಭಗೊಂಡ ಮಳೆ ದಿನಬಿಟ್ಟು ದಿನ ಸುರಿದು ಕೊನೆಗೆ ಸತತವಾಗು ಸುಮಾರು 10 ದಿನಗಳ ಕಾಲ ಜಿಟಿ, ಜಿಟಿ ಹಾಗೂ ರಬಸದ ಮಳೆಯಿಂದಾಗಿ ಈ ಮೊದಲು ಬಿತ್ತನೆಯಾದ ಬೆಳೆಗೆ ತೊಂದರೆಯಾದರೆ ಬಾಕಿ ಉಳಿದ್ದ ಹೊಲಗಳ ಬಿತ್ತನೆಗೆ ಅಡ್ಡಿಯಾಗಿತ್ತು. ಸತತ ಮಳೆಯಿಂದಾಗಿ ಬಹುತೇಕ ಕಡೆ ಬೆಳೆ ನಷ್ಟವಾಗು ಮುರುಬಿತ್ತನೆ ನಡೆಯುತ್ತಿದೆ. ಆದರೆ ಸರ್ಕಾರಿ ಲೆಕ್ಕದಲ್ಲಿ ಬಿತ್ತನೆಯ ಹೊಲದ ಶೇ 30ರಷ್ಟುಹಾನಿಯಾದರೆ ಮಾತ್ರ ಪರಿಗಣಿಸಿ ಪರಿಹಾರಕ್ಕೆ ಸೀಪಾರಸ್ಸು ಮಾಡಲಾಗುತ್ತಿದೆ. ವಾಸ್ತವ್ಯದಲ್ಲಿ ರೈತರ ಹಾನಿಯಾದರು ಪರಿಗಣನೆಗೆ ಬಾರದಂತಾಗಿರುವುದು ರೈತರ ಜೇಬಿಗೆ ಕತ್ತರಿ ಬಿದ್ದುಕೊಂಡಿದೆ. ಅಲ್ಲದೆ ಸಕಾಲಕ್ಕೆ ಬೆಳೆ ಕೈ ಬಾರದೆ ಆರ್ಥಿಕ ನಷ್ಟದಲ್ಲಿ ದಿನದೊಡುವಂತೆ ಮಾಡಿದೆ.

click me!