ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.11 ರಿಂದ 17ರವರೆಗೆ ಸಾಗರದಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ರಾಷ್ಟ್ರಧ್ವಜ ಹಾರಾಡಲು ಸಜ್ಜುಗೊಂಡಿವೆ!
ಸಾಗರ (ಜು.24): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.11 ರಿಂದ 17ರವರೆಗೆ ಪ್ರತಿ ಮನೆಯ ಮೇಲೂ ರಾಷ್ಟ್ರ ಧ್ವಜ ಹಾರಿಸುವ ಹರ್ ಘರ್ ತಿರಂಗ್ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಪಟ್ಟಣದ ಗಾಂಧಿ ಮೈದಾನದಲ್ಲಿ ಶನಿವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಹಾಲಪ್ಪ ಮಾತನಾಡಿ, ತಾಲೂಕಿನಲ್ಲಿ ಸುಮಾರು 50 ಸಾವಿರ ಮನೆಗಳಿದ್ದು, ಅದರಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ರಾಷ್ಟ್ರಧ್ವಜ ಹಾರುವಂತೆ ಮಾಡಲು ಸಜ್ಜಾಗಿದ್ದೇವೆ. ಪಟ್ಟಣದ 12 ಸಾವಿರ ಮನೆಗಳಲ್ಲಿ 6 ಸಾವಿರ ಮನೆಗಳ ಮೇಲೆ ಬಾವುಟ ಹಾರಿಸುವ ಜವಾಬ್ದಾರಿಯನ್ನು ಎಲ್ಲ ವಾರ್ಡ್‌ನ ಪ್ರಮುಖರಿಗೆ ನೀಡಲಾಗಿದೆ. ಅವರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಹಕಾರ ಬಾವುಟ ಹಾರಿಸಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ತಾಲೂಕು ಪಂಚಾಯಿತಿಯ ನಿರ್ದೇಶನದ ಮೇರೆಗೆ ಗ್ರಾಮ ಪಂಚಾಯಿತಿ ಮತ್ತು ಎಲ್ಲ ಶಾಲೆ -ಕಾಲೇಜುಗಳ ಸಹಕಾರದೊಂದಿಗೆ ಸುಮಾರು 25 ಸಾವಿರ ಮನೆಗಳಲ್ಲಿ ಬಾವುಟ ಹಾರಿಸುವ ಕಾರ್ಯ ಮಾಡಲಿದ್ದೇವೆ ಎಂದು ತಿಳಿಸಿದರು.
ಎಲ್ಲಿಯೂ ದೋಷವಾಗದಂತೆ ಕ್ರಮ:
ಈಗಿನಿಂದಲೇ ಬಾವುಟ ಸಿದ್ಧಗೊಳಿಸಿ, ಅದನ್ನು ಮನೆಯ ಮೇಲೆ ಕಟ್ಟುವುದಕ್ಕೆ ಪೂರಕವಾಗಿ ಬೇಕಿರುವ ಕೋಲು ಕೂಡ ಅಳವಡಿಸಿಕೊಡುವ ಕೆಲಸದ ಕುರಿತು ಚರ್ಚಿಸಲಾಗಿದೆ. ಕಾರಣ ರಾಷ್ಟ್ರಧ್ವಜ ನಮ್ಮ ಅಭಿಮಾನ ಮತ್ತು ದೇಶ ಭಕ್ತಿಯ ಸಂಕೇತ. ಅದಕ್ಕೆ ಎಲ್ಲಿಯೂ ದೋಷಗಳಾಗಬಾರದು, ಹಾಗಾಗಿ ಸರಿಯಾದ ನಿಯಮವನ್ನು ಅನುಸರಿಸಿ ಧ್ವಜವನ್ನು ಸಿದ್ಧಗೊಳಿಸುವ ಕೆಲಸವನ್ನು ವಿವಿಧ ಇಲಾಖೆಯ ಸಹಕಾರದೊಂದಿಗೆ ಮಾಡಲಾಗುವುದು. ಅದಕ್ಕಾಗಿಯೇ ಕಾರ್ಯಾಗಾರವನ್ನು ಕೂಡ ಮಾಡಲಾಗುವುದು ಎಂದು ಹೇಳಿದರು.
3 ದಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ: ಪ್ರಧಾನಿ ಮೋದಿ
ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಸ್ವಾತಂತ್ರ್ಯದ 75 ನೇ ವರ್ಷದ ಸಂಭ್ರಮವನ್ನು ಇಡೀ ರಾಷ್ಟ್ರ ಆಚರಿಸಿ ಅನುಭವಿಸಬೇಕು ಎನ್ನುವ ಕಾರಣಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ್ ಕಾರ್ಯಕ್ರಮದ ಕಲ್ಪನೆ ಬಿತ್ತಿದ್ದಾರೆ. ನಮ್ಮ ಅಕ್ಕ-ಪಕ್ಕದ ಕೆಲ ದೇಶಗಳು ಬಿಕ್ಕಟ್ಟು ಅನುಭವಿಸುತ್ತಿರುವುದನ್ನು ಗಮನಿಸಿದಾಗ, ಅಂತಹ ಬಿಕ್ಕಟ್ಟುಗಳನ್ನು ಎದುರಿಸುವ ಶಕ್ತಿ ಭಾರತಕ್ಕಿದೆ ಎನ್ನುವುದನ್ನು ಸಾಬೀತು ಪಡೆಸಿದ್ದಾರೆ. ಇದಕ್ಕೆ ಕಾರಣವಾಗಿರುವುದು ರಾಷ್ಟಾ್ರಭಿಮಾನದ ಏಕತೆಯ ಭಾವ. ಅದು ಇನ್ನಷ್ಟುಜಾಗೃತವಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಸಂಭ್ರಮ ನಡೆಯಲಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ ಡೇಟ್ ಫಿಕ್ಸ್: ಶಶೀಲ್ ನಮೋಶಿ
ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಹರ್ ಘರ್ ತಿರಂಗ್ ಕಾರ್ಯಕ್ರಮದ ಮಾಹಿತಿಯನ್ನು ಸಭೆಗೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿಯ ಸಿದ್ಧತೆ ಕುರಿತು ಇಒ ಪುಷ್ಪಾ ಕಮ್ಮಾರ್, ನಗರಸಭೆ ವ್ಯಾಪ್ತಿಯ ಸಿದ್ಧತೆ ಕುರಿತು ಆಯುಕ್ತ ರಾಜು ಡಿ. ಬಣಕರ್ ತಿಳಿಸಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್ ಸೇರಿದಂತೆ ನಗರಸಭೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.