9ರಂದು ತಿಪಟೂರಲ್ಲಿ ಹಲಸಿನ ಹಬ್ಬ: ಗುರು ಸಿರಿಗಂಧ

By Kannadaprabha News  |  First Published Jul 5, 2023, 8:12 AM IST

ಸೊಗಡು ಜನಪದ ಹೆಜ್ಜೆ ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಿಪಟೂರು ಹಲಸಿನ ಹಬ್ಬ ಎಂಬ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮವನ್ನು ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಜು.9ರ ಭಾನುವಾರ ಬೆಳಗ್ಗೆ 9ಗಂಟೆಗೆ ಆಯೋಜಿಸಲಾಗಿದೆ ಎಂದು ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಗುರು ಸಿರಿಗಂಧ ತಿಳಿಸಿದರು


 ತಿಪಟೂರು :  ಸೊಗಡು ಜನಪದ ಹೆಜ್ಜೆ ಹಾಗೂ ಹಲವು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಿಪಟೂರು ಹಲಸಿನ ಹಬ್ಬ ಎಂಬ ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮವನ್ನು ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಜು.9ರ ಭಾನುವಾರ ಬೆಳಗ್ಗೆ 9ಗಂಟೆಗೆ ಆಯೋಜಿಸಲಾಗಿದೆ ಎಂದು ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಗುರು ಸಿರಿಗಂಧ ತಿಳಿಸಿದರು.

ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಗಡು ಹೆಜ್ಜೆಯು ಹಲವಾರು ವರ್ಷಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈ ವರ್ಷ ವಿಶೇಷವಾಗಿ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದೇವೆ. ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಹಲಸಿನ ಅಡುಗೆ ಸ್ಪರ್ಧೆ, ನಾ ಕಂಡ ಹಲಸು, ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ, ಉತ್ತಮ ಹಲಸಿನ ಪ್ರದರ್ಶನ ಮತ್ತು ಸ್ಪರ್ಧೆ, ತೂಕದ ಹಲಸಿನ ಪ್ರದರ್ಶನ ಹಾಗೂ ಸ್ಪರ್ಧೆ ಹೀಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಗುವುದು. ಸ್ಪರ್ಧಿಗಳು ಅಂದು ಬೆಳಗ್ಗೆ 11ಗಂಟೆಯೊಳಗೆ ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬೇಕು. ನುರಿತವರಿಂದ ಹಲಸಿನ ವಿವಿಧ ಖಾದ್ಯ ತಯಾರಿ ಪ್ರಾತ್ಯಕ್ಷಿಕೆ, ಅನುಭವಿಗಳಿಂದ ಹಲಸಿನ ಮಹೋತ್ಸವದ ಉಪನ್ಯಾಸ ನಡೆಯಲಿದೆ. ಹಲಸು ಬೆಳೆದ ರೈತರು, ಹಣ್ಣು ಪ್ರಿಯರು, ಮೌಲ್ಯವರ್ಧನೆ ಮಾಡುವವರು ಗ್ರಾಹಕರಿಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು ಇದರೊಂದಿಗೆ ಹಲಸು ಹಲಸಿನ ಖಾದ್ಯ ಮತ್ತು ಸಸಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಲಸು ಪ್ರಿಯರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 8217032421, 9844243901, 9964202624 ಸಂಪರ್ಕಿಸಬಹುದೆಂದು ತಿಳಿಸಿದರು.

Tap to resize

Latest Videos

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಯೋಗೀಶ್ವರಸ್ವಾಮಿ, ರಾಜಣ್ಣ ಬಸ್ತೀಹಳ್ಳಿ, ಮಹಿಳಾ ಸಂಘದ ಪ್ರಭಾವಿಶ್ವನಾಥ್‌, ಕಸಾಪ ಕಾರ್ಯದರ್ಶಿ ಮಂಜಪ್ಪ, ಮುಖಂಡರಾದ ಚಿದಾನಂದ್‌, ಸುರೇಶ್‌, ಯೋಗಾನಂದ್‌ ಮತ್ತಿತರರಿದ್ದರು.

‘ಹಲಸು ಹೊರಗೆ ಒರಟು, ಒಳಗೆ ಸಿಹಿ’

ಪರಿಸರ ಪ್ರೇಮಿ ಗುಂಗುರಮಳೆ ಮುರಳೀಧರ್‌ ಮಾತನಾಡಿ, ಮಕ್ಕಳು ಫಾಸ್ಟ್‌ಫುಡ್‌ನತ್ತ ಒಲವು ಬೆಳೆಸಿಕೊಂಡಿರುವ ಪರಿಣಾಮ ಹಲಸಿನ ಹಣ್ಣು ಸೇರಿದಂತೆ ವಿವಿಧ ಜಾತಿಯ ಹಣ್ಣುಗಳ ಬಗ್ಗೆ ಮಾಹಿತಿಯೆ ಇಲ್ಲದಂತಾಗಿದೆ. ಹೊರಗೆ ಒರಟು, ಒಳಗೆ ಸಿಹಿ ಎಂಬಂತೆ ಹಲಸನ್ನು ಬಿಡಿಸಿ ತಿನ್ನುವುದೇ ಒಂದು ಸಾಹಸವಾಗಿದ್ದು ಇದರಿಂದ ಹಣ್ಣು ಇಷ್ಟವಾದರೂ ಬಿಡಿಸಿ ತಿನ್ನಬೇಕೆಂಬ ಕಾರಣಕ್ಕೆ ಈ ಹಣ್ಣನ್ನು ತಿನ್ನುವವರು ಕಡಿಮೆಯಾಗುತ್ತಿದ್ದಾರೆ. ಆದ್ದರಿಂದ ಹಲಸಿನ ವಿಶೇಷತೆ, ಮಹತ್ವ ಹಾಗೂ ಆರೋಗ್ಯಕ್ಕೆ ಎಷ್ಟುಪ್ರಯೋಜನಕಾರಿ ಎಂಬ ಬಗ್ಗೆ ತಿಳಿಸಿಕೊಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

click me!