ದಾವಣಗೆರೆ: ಸಚಿವ ಮಲ್ಲಿಕಾರ್ಜುನ್‌ ತೇಜೋವಧೆ ಯತ್ನ; ಸಿಇಎನ್‌ ಠಾಣೆಗೆ ದೂರು

By Kannadaprabha NewsFirst Published Aug 17, 2023, 9:21 PM IST
Highlights

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ತಮ್ಮ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ನಡೆಸಿದ್ದ ಸಂವಾದದ ವೇಳೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ ಆಡಿದ್ದ ಮಾತನ್ನು ಎಸ್ಸೆಸ್ಸೆಂ ಅನುಮತಿ ಇಲ್ಲದೇ, ಫೇಸ್‌ಬುಕ್‌ ಪೋಸ್ಟ್‌ ಅಪ್‌ಲೋಡ್‌ ಮಾಡಿದ ವಿಜಯಕುಮಾರ ಹಿರೇಮಠ ವಿರುದ್ಧ ಕ್ರಮ ಕೈಗೊಳ್ಳಲು ದೂರುದಾರ ಬೂದಾಳ್‌ ಬಾಬು ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

ದಾವಣಗೆರೆ(ಆ.17):  ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ರ ಫೇಸ್‌ಬುಕ್‌ನ ಪೋಸ್ಟ್‌ವೊಂದನ್ನು ಅನುಮತಿ ಇಲ್ಲದೇ ತೇಜೋವಧೆಗಾಗಿ ಅಪ್‌ಲೋಡ್‌ ಮಾಡಿದ ವಿಜಯಕುಮಾರ ಹಿರೇಮಠ ವಿರುದ್ಧ ಕಾಂಗ್ರೆಸ್‌ ಮುಖಂಡ ಶ್ರೀನಾಥ ಬಾಬು(ಬೂದಾಳ್‌ ಬಾಬು) ಇಲ್ಲಿನ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ತಮ್ಮ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ನಡೆಸಿದ್ದ ಸಂವಾದದ ವೇಳೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ ಆಡಿದ್ದ ಮಾತನ್ನು ಎಸ್ಸೆಸ್ಸೆಂ ಅನುಮತಿ ಇಲ್ಲದೇ, ಫೇಸ್‌ಬುಕ್‌ ಪೋಸ್ಟ್‌ ಅಪ್‌ಲೋಡ್‌ ಮಾಡಿದ ವಿಜಯಕುಮಾರ ಹಿರೇಮಠ ವಿರುದ್ಧ ಕ್ರಮ ಕೈಗೊಳ್ಳಲು ದೂರುದಾರ ಬೂದಾಳ್‌ ಬಾಬು ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

News Hour: ಜಾತಿ ನಿಂದನೆ ಪ್ರಕರಣ, ಸಚಿವರ ವಿರುದ್ಧ ಕೇಸ್‌ ಹಾಕೋಕೆ ಬೆದರಿದರಾ ಪೊಲೀಸರು?

ಚುನಾವಣೆ ಪೂರ್ವದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ನಡೆಸಿದ್ದ ಸಂವಾದದಲ್ಲಿ ಎಸ್ಸೆಸ್‌ ಮಲ್ಲಿಕಾರ್ಜುನ ಆಡಿದ್ದ ಪದವೊಂದು ಇಟ್ಟುಕೊಂಡು, ತೇಜೋವಧೆ ಮಾಡಲೆಂದೇ ವಿಜಯಕುಮಾರ ಪೋಸ್ಟ್‌ ಅಪ್‌ಲೋಡ್‌ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರುದಾರರು ಒತ್ತಾಯಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ, ಹೊಲಸು ಮಾಡಬೇಡಿ ಎಂಬ ಪದ ಬಳಸಿದ್ದೇನೆ ಹೊರತು, ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವಂತೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿದ್ದಾರೆಂದು ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಬೂದಾಳ್‌ ಬಾಬು ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನರ ತೇಜೋವಧೆಗೆ ಪೋಸ್ಟ್‌ ಶೇರ್‌ ಮಾಡಿದ್ದಾರೆಂದು ವಿಜಯಕುಮಾರ ಹಿರೇಮಠ ವಿರುದ್ಧ ಆರೋಪಿಸಿದ್ದಾರೆ.

click me!