Complaint Against Home Minister : ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

By Suvarna NewsFirst Published Dec 4, 2021, 3:17 PM IST
Highlights
  • ಲಂಚ ತಿನ್ಕೊಂಡು ಬಿದ್ದಿರ್ತಾರೆ ನಾಯಿ ಹಂಗೆ. ಎಂಜಲು ಕಾಸಿಗಾಗಿ ಆಸೆ ಪಡುತ್ತಾರೆಂದು ಪೊಲೀಸರ ಬಗ್ಗೆ ಮಾತನಾಡಿದ  ಗೃಹ ಸಚಿವ  ಆರಗ 
  • ಗೃಹ ಸಚಿವ  ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

 ಚಿಕ್ಕಮಗಳೂರು (ಡಿ.04) :  ಲಂಚ (Bribe) ತಿನ್ಕೊಂಡು ಬಿದ್ದಿರ್ತಾರೆ ನಾಯಿ ಹಂಗೆ ಎಂಜಲು ಕಾಸಿಗಾಗಿ ಆಸೆ ಪಡುತ್ತಾರೆಂದು ಪೊಲೀಸರ ಬಗ್ಗೆ ಮಾತನಾಡಿದ  ಗೃಹ ಸಚಿವ  ಆರಗ ಜ್ಞಾನೇಂದ್ರ (Home Minister Araga Jnanendra) ವಿರುದ್ಧ ದೂರು ದಾಖಲಿಸಲಾಗಿದೆ.  ಚಿಕ್ಕಮಗಳೂರು (chikkamagaluru) ಜಿಲ್ಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ (Police Station) ಸಚಿವರ ವಿರುದ್ಧ ದೂರು ದಾಖಲಾಗಿದೆ.  ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಇಂದು ದೂರು ದಾಖಲು ಮಾಡಿದ್ದಾರೆ. ಗೃಹ ಸಚಿವರ ಹೇಳಿಕೆಯಿಂದ ಸಾರ್ವಜನಿಕರಿಗೆ (Publics) ಪೊಲೀಸರ ಮೇಲೆ ಗೌರವ ಕಡಿಮೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಮಾಜದ ಶಾಂತಿ, ಮಕ್ಕಳು, ಮಹಿಳೆಯರ ರಕ್ಷಣೆಯಲ್ಲಿ ಪೊಲೀಸರದ್ದು ಪ್ರಮುಖ ಪಾತ್ರವಾಗಿದ್ದು ಹಗಲಿರುಳೆನ್ನದೆ ಪೊಲೀಸರು (Police) ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆ. ಅಂತಹ ಪೊಲೀಸರನ್ನ ನಾಯಿಗೆ (Dog) ಹೋಲಿಸಿರುವುದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ರೈತ ಮುಖಂಡ ನವೀನ್ ಕುರುವಾನೆ ಎಂಬುವರು ತಮ್ಮ ಬೆಂಬಲಿಗರೊಂದಿಗೆ ತೆರಳಿ ಕೊಪ್ಪ (Koppa) ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕೆಲಸ ಮಾಡಲು ಆಗದಿದ್ದಲ್ಲಿ  ಸಮವಸ್ತ್ರ ಬಿಚ್ಚಿಟ್ಟು ಮನೆಗೆ ಹೋಗಿ ಎಂದು ಮಾತನಾಡಿರುವುದು, ಪೊಲೀಸರು ಭ್ರಷ್ಟರೆನ್ನುವಂತೆ ಹೇಳಿಕೆ ನೀಡಿದ್ದು ಸಾರ್ವಜನಿಕರ ಮನಸಲ್ಲಿ ಪೊಲೀಸರ ಬಗ್ಗೆ ಇರುವ ನಂಬಿಕೆಯನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಸೂಕ್ತ ಕ್ರಮ  ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಗೃಹ ಸಚಿವರು ಹೇಳಿದ್ದೇನು?

ಶಿವಮೊಗ್ಗ :  ‘ಈ ರೀತಿ ದನ ರೆಗ್ಯುಲರ್ ಕಳ್ಳ ಸಾಗಾಣಿಕೆ ಮಾಡುವವರು ಯಾರೆಂದು ನಿಮ್ಮವರಿಗೆ ಗೊತ್ತಿರುತ್ತೆ. ಲಂಚ (Bribe) ತಿನ್ಕೊಂಡು ಅವರ ಜೊತೆ ಬಿದ್ದಿರ್ತಾರೆ ನಾಯಿ ಹಂಗೆ. ಎಂಜಲು ಕಾಸಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಯೋಗ್ಯತೆ ಇಲ್ಲ ದಿದ್ದರೆ ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ ಮನೆ ಕಡೆ.’ - ಅಕ್ರಮ ಗೋ ಸಾಗಣೆ ಮತ್ತು ಗೋ ಕಳ್ಳರು ಹೆಚ್ಚುತ್ತಿರುವ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು (Senior Police Officer ) ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga jnanendra) ತರಾಟೆಗೆ ತೆಗೆದುಕೊಂಡ ಪರಿಯಿದು. 

ಗೃಹ ಸಚಿವರ ಕ್ಷೇತ್ರದಲ್ಲಿ ಗೋ ಕಳ್ಳರನ್ನು ತಡೆಯಲು ಬಂದ ಹಿಂದೂಪರ ಸಂಘಟನೆಯ ಇಬ್ಬರು ಕಾರ್ಯಕರ್ತರ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಇಲಾಖೆಯ ವಿರುದ್ಧ ಕೆಂಡಾ ಮಂಡಲವಾಗಿರುವ ವೀಡಿಯೋ ಇದೀಗ ವೈರಲ್ ಆಗಿದೆ. ‘ಈ ರೀತಿ ದನ ರೆಗ್ಯುಲರ್ ಕಳ್ಳ ಸಾಗಾಣಿಕೆ ಮಾಡುವವರು ಯಾರೆಂದು ನಿಮ್ಮವರಿಗೆ ಗೊತ್ತಿರುತ್ತೆ. 

ಲಂಚ ತಿನ್ಕೊಂಡು ಅವರ ಜೊತೆ ಬಿದ್ದಿರ್ತಾರೆ ನಾಯಿ (Dog) ಹಂಗೆ. ಪೊಲೀಸರಿಗೊಂದು (police) ಆತ್ಮ ಗೌರವ ಬೇಕಲ್ಲವಾ? ನಾನು ಗೃಹ ಸಚಿವನಾಗಿ(Home Minister) ಇರಬೇಕೋ ಬೇಡವೋ? ನಿಮ್ಮದು ಚಿಕ್ಕಮಗಳೂರು (Chikkamagaluru) ಜಿಲ್ಲೆ, ನನ್ನದು ಶಿವಮೊಗ್ಗ ಜಿಲ್ಲೆ(Shivamogga). ಕೆಟ್ಟು ಹಾಳಾಗಿ ಹೋಗಿದ್ದಾರೆ ಎಲ್ಲ ಪೊಲೀಸ್ರು. ಇಲಾಖೆ ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತಿದೆ. ಸಂಬಳದಲ್ಲಿ ಬದುಕಲು ಆಗದ ಸ್ಥಿತಿಯೇನೂ ಇಲ್ಲ. ಆದರೂ ಎಂಜಲು ಕಾಸಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. 

ಯೋಗ್ಯತೆ ಇಲ್ಲದಿದ್ದರೆ ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ ಮನೆ ಕಡೆ.’ ‘ಕೊಟ್ಟಿಗೆ ಬಂದು ತಲವಾರು ತೋರಿಸಿ ಜಾನುವಾರು ಹೊತ್ತೊಯ್ಯುತ್ತಾರೆ ಎಂದರೆ ಹೇಗೆ?’  ಹೀಗೆ ಆಕ್ರೋಶ ಭರಿತವಾಗಿ ಮಾತುಗಳನ್ನು ಆಡಿದ್ದಾರೆ. ಗೃಹ ಸಚಿವರು ಎಲ್ಲಿ ಈ ಮಾತು ಆಡಿದ್ದಾರೆ, ಯಾರ ಜೊತೆ ಮಾತನ್ನಾಡಿದ್ದಾರೆ ಎಂದು ಗೊತ್ತಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ(Thirthahalli) ಬೆಂಬಲಿಗರ, ಮುಖಂಡರ ಜೊತೆ ಕಚೇರಿಯಲ್ಲಿ ಈ ಮಾತು ಆಡಿದ್ದಾರೆ ಎನ್ನಲಾಗಿದೆ.

 ನಾಲ್ಕು ದಿನಗಳ ಹಿಂದೆ ತೀರ್ಥಹಳ್ಳಿಯ ಕುಡು ಮಲ್ಲಿಗೆ ಸಮೀಪ ಪಿಕಪ್ ವಾಹನವೊಂದರಲ್ಲಿ ಗೋವುಗಳನ್ನು ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದು ಹಿಂದೂಪರ ಸಂಘಟನೆ ಸೋದರರಿಬ್ಬರು ಈ ಕಳ್ಳರ ವಾಹನ (Vehicle) ಚೇಸ್ ಮಾಡಿ ತಡೆಯಲೆತ್ನಿಸಿದ್ದರು. ಈ ವೇಳೆಯಲ್ಲಿ ಇಬ್ಬರು ಕಳ್ಳರು ಇವರ ಬೈಕ್ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದ ಗಾಯಾಳುಗಳನ್ನು ಸಚಿವರಾದ ಆರಗ ಜ್ಞಾನೇಂದ್ರ ಮತ್ತು ಕೆ.ಎಸ್.ಈಶ್ವರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. 

click me!