
ಶಿವಮೊಗ್ಗ,[ಫೆ.07]: ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿರುದ್ದ ಸಾಗರದ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಸಾಗರದ ನಿವಾಸಿ ಮಹಾಬಲೇಶ್ವರ ಎಂಬುವರ ಪರ ವಕೀಲರಾದ ಪ್ರವೀಣ್ ಅವರು ಪ್ರೊ.ಭಗವಾನ್ ವಿರುದ್ದ ಈಪಿಸಿ ಸೆಕ್ಷನ್ 200, 153(ಎ),95(ಎ),499, 500, ಅಡಿ ದೂರು ದಾಖಲಿಸಿದ್ದಾರೆ.
ಪ್ರೊ.ಭಗವಾನ್ ನವರು ಬರೆದಿರುವ ರಾಮ ಮಂದಿರ ಏಕೆ ಬೇಡ? ಪುಸ್ತಕದಲ್ಲಿ ವೇದ, ದೇವರ ಸ್ಮೃತಿ ಮೊದಲಾದ ಭಕ್ತಿ ಶ್ರಧ್ದೆಗಳ ಬಗ್ಗೆನೂ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ.
ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ಶ್ರೀರಾಮನ ಬಗ್ಗೆ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಆಗುತ್ತಾನೆ ಇರುತ್ತಾರೆ.
ಯಾವುದೇ ಕಾರಣಕ್ಕೂ ಇನ್ನೊಂದು ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಗೃಹ ಬಂಧನ ವಿಧಿಸಲಾಗಿತ್ತು
ಆದ್ರೆ ಅದ್ಯಾವುದೇ ಕಿಮ್ಮತ್ತು ನೀಡದ ಭಗವಾನ್ ಪದೇ-ಪದೇ ತಮ್ಮ ನಾಲಿಗೆ ಹರಿಬಿಡ್ತಾನೆ ಇರುತ್ತಾರೆ.