ಹಾಲಪ್ಪ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು..ದೂರು ದಾಖಲು

Published : Feb 05, 2019, 08:51 PM ISTUpdated : Feb 05, 2019, 08:57 PM IST
ಹಾಲಪ್ಪ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು..ದೂರು ದಾಖಲು

ಸಾರಾಂಶ

ಸೋಶಿಯಲ್ ಮೀಡಿಯಾನೇ ಹಾಗೆ. ಯಾರದ್ದು ಯಾವ ಕಾರಣಕ್ಕೆ ನಕಲಿ ಖಾತೆ ಸೃಷ್ಟಿ ಮಾಡುತ್ತಾರೆ ಎಂದು ಹೇಳಲು  ಸಾಧ್ಯವಿಲ್ಲ. ಸಾಗರ ಶಾಸಕ ಹರತಾಳು ಹಾಲಪ್ಪ ಹೆಸರಿನಲ್ಲಿ ಫೆಸ್‌ ಬುಕ್‌ನಲ್ಲೊಂದು ನಕಲಿ ಖಾತೆ ನ ತೆರೆದುಕೊಂಡಿದ್ದು ಹಾಲಪ್ಪ ದೂರು ನೀಡಿದ್ದಾರೆ.

ಶಿವಮೊಗ್ಗ[ಫೆ.05]  ಶಾಸಕ ಹಾಲಪ್ಪ ಹೆಸರಿನಲ್ಲಿ ನಕಲಿ ಫೇಸ್‌ ಬುಕ್  ಖಾತೆಯನ್ನು ಕಿಡಿಗೇಡಿಗಳು ತೆರೆದಿದ್ದಾರೆ.  ಪೋಲೀಸರಿಗೆ ಹಾಲಪ್ಪ ದೂರು ನೀಡಿದ್ದಾರೆ.

ಅಶ್ಲೀಲ ಫೋಟೋಗಳನ್ನು ಈ ಖಾತೆ ಮೂಲಕ  ರವಾನಿಸಲಾಗಿದೆ. ಹಾಲಪ್ಪ ಅವರ ಭಾವಚಿತ್ರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನಕಲಿ ಖಾತೆ ಸೃಷ್ಟಿಸಿದ ಅನಾಮಧೇಯ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ, ಶಾಸಕ ಹಾಲಪ್ಪ ಸಾಗರ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೇಸ್‌ಬುಕ್‌ ಬಳಕೆದಾರರೇ ಗಮನಿಸಿ : ನಿಮ್ಮ ಅಕೌಂಟ್ ರದ್ದಾಗಬಹುದು

ಯಡಿಯೂರಪ್ಪ ಅವರ ವಿರುದ್ಧವೇ ಸ್ಪರ್ಧೆ ಮಾಡಲು ಸಿದ್ಧ ಎಂದು ಬಿಂಬಿಸಲಾಗಿದೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ಹಿಂದೆ ನಕಲಿ ಖಾತೆಗಳು ತೆರೆದುಕೊಳ್ಳುತ್ತಿದ್ದವು. ಈಗ ರಾಜಕಾರಣಿಗಳ ಹೆಸರಿನಲ್ಲಿಯೂ ತೆರೆದುಕೊಳ್ಳಲು ಆರಂಭವಾಗಿದೆ.

PREV
click me!

Recommended Stories

ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!
ಮಕ್ಕಳಿಗೆ ಪಾಠ ಹೇಳಿಕೊಟ್ಟ ಶಾಲಾ ಕೊಠಡಿಯಲ್ಲೇ ನೇಣಿಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ!