Kalaburagi: ಚಿಂಚೋಳಿ ಮಾದರಿ ತಾಲೂಕಿಗೆ ಬದ್ಧ: ಸಂಸದ ಉಮೇಶ ಜಾಧವ್‌

By Govindaraj S  |  First Published Dec 30, 2022, 9:55 PM IST

ಜಿಲ್ಲೆಯ ಅತೀ ಹಿಂದುಳಿದ ಪ್ರದೇಶವೆಂದು ಒಳಗಾಗಿದ್ದ ತಾಲೂಕಿನಲ್ಲಿ ಸಾಕಷ್ಟು  ಅಭಿವೃದ್ಧಿ ಕೆಲಸಗಳಾಗುತ್ತಿರುವುದರಿಂದ ಒಂದು ಮೈಲುಗಲ್ಲು ಮುಟ್ಟಿದ್ದೇವೆ ಎಂದು ಸಂಸದ ಉಮೇಶ ಜಾಧವ್‌ ಹೇಳಿದರು.


ಚಿಂಚೋಳಿ (ಡಿ.30): ಜಿಲ್ಲೆಯ ಅತೀ ಹಿಂದುಳಿದ ಪ್ರದೇಶವೆಂದು ಒಳಗಾಗಿದ್ದ ತಾಲೂಕಿನಲ್ಲಿ ಸಾಕಷ್ಟು  ಅಭಿವೃದ್ಧಿ ಕೆಲಸಗಳಾಗುತ್ತಿರುವುದರಿಂದ ಒಂದು ಮೈಲುಗಲ್ಲು ಮುಟ್ಟಿದ್ದೇವೆ ಎಂದು ಸಂಸದ ಉಮೇಶ ಜಾಧವ್‌ ಹೇಳಿದರು. ಪಟ್ಟಣದ ಹೊರವಲಯದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರ ನಿ. ವಿಜಯಪುರ ಸಿದ್ಧಸಿರಿ ಇಥೆನಾಲ್‌ ಹಾಗೂ ಪವರ್‌ ವಿಭಾಗದಲ್ಲಿ ಪ್ರಾರಂಭಿಸಲಾದ ಸಿದ್ಧಸಿರಿ ಎಸ್‌. ಮಾರ್ಚ್‌ ಮತ್ತು ಉಪಹಾರ ಗೃಹ ಉದ್ಘಾಟಿಸಿ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದಲೂ ಕಲಬುರಗಿ ಜಿಲ್ಲೆಯಲ್ಲಿ ರಾಜಕೀಯ ಶಕ್ತಿ ಬಲಿಷ್ಠವಾಗಿದ್ದರು ಹಿಂದುಳಿದ ಮೀಸಲು ಮತಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾರೂ ಗಮನಹರಿಸಿರಲಿಲ್ಲ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರು ಚಿಂಚೋಳಿ ಮತಕ್ಷೇತಕ್ಕೆ 2019ರಲ್ಲಿ ನಡೆದ ಉಪ ಚುನಾವಣೆಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಕೋವಿಡ್‌ ಕಾರಣದಿಂದ ಸಕ್ಕರೆ ಕಾರ್ಖಾನೆ ಪ್ರಾರಂಭಗೊಳ್ಳಲಿಲ್ಲ. ಇದೀಗ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಕೋರಿಕೆಗೆ ಸ್ಪಂದಿಸಿದ್ದರಿಂದ ಇಗ ಸಕ್ಕರೆ ಕಾರಖಾನೆ ಇಥೆನಾಲ್‌ ಪವರ್‌ ಘಟಕ ಪ್ರಾರಂಭಗೊಳ್ಳುತ್ತಿದೆ ಎಂದರು.

Latest Videos

undefined

Bagalkote: ಬಸ್‌ ಇಲ್ಲದೇ ಪರದಾಡುತ್ತಿರುವ ವಿದ್ಯಾರ್ಥಿಗಳು

ಚಿಂಚೋಳಿ ಸಕ್ಕರೆ ಕಾರ್ಖಾನೆಯಲ್ಲಿ ಜ.18ರಂದು ಇಥೆನಾಲ್‌ ಘಟಕ ಪ್ರಾರಂಭಗೊಳ್ಳಲಿದ್ದು ಇದು ದೇಶದಲ್ಲಿಯೇ ಅತಿ ದೊಡ್ಡ ಪ್ಲಾಂಟ್‌ ಆಗಿರಲಿದೆ. ಪವರ್‌ ಪ್ಲಾಂಟ್‌ನಲ್ಲಿ 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ನಮ್ಮ ತಾಲೂಕಿನ ಜನರು ವ್ಯಾಪಾರ ವಹಿವಾಟಿಗಾಗಿ ತೆಲಂಗಾಣದ ಜಹಿರಾಬಾದ ಮತ್ತು ತಾಂಡೂರಿಗೆ ಹೋಗುತ್ತಾರೆ ಇಲ್ಲಿಯೇ ಉತ್ತಮ ಗುಣಮಟ್ಟದ ಸಾಮಗ್ರಿಗಳು ದಿನಸಿ ಆಹಾರ ಧಾನ್ಯಗಳು ಸಿಗುವುದರಿಂದ ಜನರಿಗೆ ಅನುಕೂಲವಾಗಲಿದೆ. ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಸಂಸದರ ಕೊಡುಗೆ ಶೂನ್ಯ ಎಂದು ಟೀಕಿಸಿದ ಪ್ರತಿಪಕ್ಷದ ಮುಖಂಡರಿಗೆ ತಿರುಗೇಟು ನೀಡಿದ ಜಾಧವ್‌ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಉಸ್ತುವಾರಿ ಸಚಿವರಿಗೆ, ಸಂಸದರಿಗೆ ಪತ್ರ ಬರೆದುಕೊಟಿದ್ದೇನೆ. ಆದರೆ ನನಗೆ ಯಾರೂ ವಿಶ್ವಾಸ ಕೊಡಲಿಲ್ಲ ಇದರಿಂದಾಗಿ ನಾನು ಕಾಂಗ್ರೆಸ್‌ ತ್ಯಜಿಸಿದ್ದೇನೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಕಲಬುರಗಿ ಮತ್ತು ಚಿಂಚೋಳಿ ತಾಲೂಕಿನಲ್ಲಿ ಕೇಂದ್ರ ಸರಕಾರದ ಜಲಜೀವನ ಮಿಶನ ಯೋಜನೆ ಅಡಿಯಲ್ಲಿ ಹರ ಘರ ಜಲ ಯೋಜನೆ ಅಡಿಯಲ್ಲಿ 240 ಕೋಟಿ ರು. ಅನುದಾನ ಮಂಜೂರಿಗೊಳಿಸಿದ್ದಾರೆ. ಕಾಗಿಣಾ ನದಿಯ 1.62 ಟಿಎಂಸಿ ನೀರು ಬಳಸಿಕೊಳ್ಳಲು ಜಲಜೀವನ ಯೋಜನೆ ಪ್ರಾರಂಭಿಸಲಾಗುತ್ತಿದ್ದು ಇದರಿಂದ ಎಲ್ಲ ಗ್ರಾಮ ತಾಂಡಾಗಳಿಗೆ ಶುದ್ಧ ನೀರು ಪೂರೈಕೆ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನಗಳು ಲ್ಯಾಡಿಂಗ್‌ ಆಗಲಿರುವುದರಿಂದ ಇನ್ನು ಮುಂದೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ. ಮುಂಬೈ, ದೆಹಲಿ,ಬೆಂಗಳೂರು, ಹೈದ್ರಾಬಾದ್‌, ತಿರುಪತಿ, ಪುಣೆ ಇನ್ನಿತರ ನಗರ ಪ್ರದೇಶಗಳಿಗೆ ವಿಮಾನ ಹಾರಾಟ ಆಗಲಿದೆ. ಕಲಬುರಗಿಯಲ್ಲಿ ಪೈಲೆಟ್‌ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ಕುರಿತಿ ವಿಮಾನಯಾನ ಖಾತೆ ಸಚಿವರಿಗೆ ಭೇಟಿ ಮಾಡಿ ಮಾತುಕತೆ ನಡೆಸಲಾಗಿದ್ದು, ಅವರು ಭರವಸೆ ನೀಡಿದ್ದಾರೆ ಎಂದರು. ಸಿದ್ಧಸಿರಿ ಕಾರ್ಯನಿರ್ವಾಹಕ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಿದ್ಧಸಿರಿ ಇಥೆನಾಲ್‌ ಪವರ್‌ ಘಟಕವು ದೇಶದಲ್ಲಿಯೇ 1000 ಕೆಎಲ್‌ಪಿಡಿ ಇಥೆನಾಲ್‌ ಉತ್ಪಾದನೆ ಮಾಡಲಿದೆ ಎಂದರು.

ರಾಜ್ಯದ ಸಾಲ 5.4ಲಕ್ಷ ಕೋಟಿಗೆ ಹೆಚ್ಚಳ: ಕೃಷ್ಣ ಬೈರೇಗೌಡ ಆತಂಕ

ಡಾ. ವಿಶ್ವನಾಥ ಪವಾರ, ನ್ಯಾಯವಾದಿ ಶಿವಶರಣಪ್ಪ ಜಾಪಟ್ಟಿಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ತಹಸೀಲ್ದಾರ ಅಂಜುಮ ತಬಸುಮ, ಚಿತ್ರಶೇಖರ ಪಾಟೀಲ, ಮಧುಸೂಧನ ಯಲಗುದ್ರಿ, ಸಂಗನಬಸವ ನಾಡಗೌಡ, ಜಗದೀಶ ಕ್ಷತ್ರಿ, ಬಸಯ್ಯ ಹಿರೇಮಠ, ಸಂಗನಬಸಪ್ಪ ಸಜ್ಜನ, ಉಮೇಶ, ಶಿವಕುಮಾರ ಭೀಮು ಕುಳಗೇರಿ, ವಿಶ್ವನಾಥ, ವಿಲಾಸ ಸಿಂಧೆ, ಉಮೇಶ ಹರವಾಳ, ಆಕಾಶ ಗುತ್ತೆದಾರ, ವಿಜಯಕುಮಾರ ಡೋಣಿ, ವಿಜಯಕುಮಾರ ಇನ್ನಿತರಿದ್ದರು.

click me!