Raichur: ತುಂಗಭದ್ರಾ ಕಾಲುವೆ ನೀರಿಗಾಗಿ ರಕ್ತದಲ್ಲಿ ಸಿಎಂಗೆ ಪತ್ರ ಬರೆದು ರೈತರಿಂದ ಹೋರಾಟ

By Suvarna NewsFirst Published Dec 30, 2022, 9:12 PM IST
Highlights

ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ಹಿಂಗಾರು ಬೆಳೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ‌ನಡೆಸಿದರು‌‌.  ಸಿರವಾರ‌ದ ಕೆಳಭಾಗಕ್ಕೆ ‌ನೀರು ಬಿಡುವಂತೆ ರಾಜ್ಯ ಹೆದ್ದಾರಿ ಬಂದ್ ಮಾಡಿದರು. 

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಡಿ.30): ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ಹಿಂಗಾರು ಬೆಳೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ‌ನಡೆಸಿದರು‌‌. ರಾಯಚೂರು ಜಿಲ್ಲೆ ಮಾನ್ವಿ ಕ್ರಾಸ್ ನಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ, ರೈತರು ಟೈರ್ ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘಟನೆ ಹಾಗೂ ವಿವಿಧ ಪಕ್ಷಗಳ ಮುಖಂಡರು ಹಾಗೂ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ರೈತರಿಂದ ನೀರಿಗಾಗಿ 15 ದಿನಗಳಿಂದ ಪ್ರತಿಭಟನೆ: ಪ್ರತಿ ವರ್ಷವೂ ತುಂಗಭದ್ರಾ  ಎಡದಂತೆ ನೀರಿಗಾಗಿ ರೈತರು ‌ಹೋರಾಟ ಮಾಡಿದ್ರೂ ಕೊನೆಯ ಭಾಗದ ರೈತರಿಗೆ ಮಾತ್ರ ನೀರು ಸಿಗುತ್ತಿಲ. ಈ ವರ್ಷವೂ ಕಳೆದ 15 ದಿನಗಳಿಂದ ರೈತರು ‌ನೀರಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದ್ರೂ ಕಾಲುವೆಗೆ ನೀರು ಬಂದಿಲ್ಲ. ರೈತರು ಪ್ರತಿಭಟನೆ ಮಾಡಿದರು, ಜಿಲ್ಲಾ ಆಡಳಿತ ಸಮರ್ಪಕವಾಗಿ ನೀರು ನಿರ್ವಹಣಾ ಮಾಡುವಲ್ಲಿ ವಿಫಲವಾಗಿದೆ.  ರೈತರ ಬಗ್ಗೆ ಕಾಳಜಿ ಇಲ್ಲ, ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

144 ಇದ್ರೂ ಕಾಲುವೆಯಿಂದ ನೀರು ಕಳ್ಳತನ: ತುಂಗಭದ್ರಾ ಕಾಲುವೆಯ ನೀರು ಕಳ್ಳತನ ತಡೆಗಾಗಿ ರಾಯಚೂರು ಜಿಲ್ಲಾಡಳಿತ ಕಾಲುವೆ ಸುತ್ತಮುತ್ತ 144 ಜಾರಿ ಮಾಡಿದೆ.  ಕಲಂ 144 ಜಾರಿಯಲ್ಲಿ ಇದ್ದರು, ಕೆಳಭಾಗಕ್ಕೆ ನಿಗದಿತ ಗೇಜ್ ನೀಡಿಲ್ಲ, ಹಿಂಗಾರು ಬೆಳೆಗಳು ಒಣಗಿವೆ. ಇದರಿಂದ ರೈತರು ನಷ್ಟ ಅನುಭವಿಸಿಬೇಕಾಗಿದೆ, ಮೇಲ್ಭಾಗದಲ್ಲಿ ರಾಜಕೀಯ ನಾಯಕರು ಗೇಜ್ ಎತ್ತಿಕೊಂಡು ಹೋಗಿ ಅಕ್ರಮ ನೀರಾವರಿ ಮಾಡಿದ್ದಾರೆ. ಕಲಂ 144 ನಿಯಮ ಇದ್ರೂ ಇಲ್ಲದಂತೆ ಆಗಿದೆ‌. 144 ಕಾಲುವೆ ಸುತ್ತಮುತ್ತ ನೆಪ ಮಾತ್ರಕ್ಕೆ ಜಾರಿ ಮಾಡಿದ್ದು, ನೀರಾವರಿ ಅಧಿಕಾರಿಗಳು, ಪೋಲಿಸ್, ಕಂದಾಯ ಅಧಿಕಾರಿಗಳು ಕೆಲಸ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ರು.

ರೈತರ ಪ್ರತಿಭಟನೆಯಿಂದ ಸಾರ್ವಜನಿಕರು ಪರದಾಟ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ನೀರು ಬರುತ್ತಿಲ್ಲ, ನೀರು ಹರಿಸಬೇಕೆಂದು ರೈತರು ಸಿರವಾರ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸಿರವಾರ ‌ಪಟ್ಟಣದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ  ಸರಕಾರಿ ಬಸ್ ಸೇರಿದಂತೆ ಎಲ್ಲಾ ವಾಹನಗಳ ಓಡಾಟ ಬಂದ್ ಮಾಡುವುದರಿಂದ ಪ್ರಯಾಣಿಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪರದಾಟ ನಡೆಸಿದರು.

Koppal News: ಬೇಸಗೆ ಬೆಳೆಗೆ ನಿತ್ಯ 250 ಕ್ಯುಸೆಕ್‌ ನೀರು ನೀಡುವಂತೆ ರೈತರು ಪಟ್ಟು

ಪ್ರತಿಭಟನೆಕಾರರಿಗೆ ಎಡಿಸಿ ಭರವಸೆ: ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ನೀರಿಗಾಗಿ ಪ್ರತಿಭಟನೆ‌ ನಡೆಸಿದರು. ಪ್ರತಿಭಟನೆ ‌ಸ್ಥಳಕ್ಕೆ ಆಗಮಿಸಿದ ಅಪರ್ ಜಿಲ್ಲಾಧಿಕಾರಿ ದುರಗೇಶ ಭೇಟಿ ನೀಡಿ ಎರಡು ದಿನಗಳಲ್ಲಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವುದಾಗಿ ಭರವಸೆ ‌ನೀಡಿದ್ರು‌. ಇದೇ ವೇಳೆ ಕೆಲ ರೈತರು ‌ಅಧಿಕಾರಿಗಳ ಭರವಸೆ ಕೇಳಿ ಕೇಳಿ ಸಾಕಾಗಿದೆ. ತಕ್ಷಣವೇ ನೀರು ಹರಿಸಬೇಕು, ನೀರು ಬರುವವರೆಗೂ ನಿಮ್ಮನ್ನು ಬಿಡುವುದಿಲ್ಲ ಎಂದು ಪಟ್ಟುಹಿಡಿದು ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದರು, ನಂತರ ಫೋನ್  ಮೂಲಕ ಜಿಲ್ಲಾಧಿಕಾರಿಗಳಿಗೆ ಮಾತನಾಡಿ ಡಿ.31ರಂದು ಬೆಳಿಗ್ಗೆ 10ಕ್ಕೆ ನೀರು ಸರಬರಾಜು ಮಾಡುವ ಭರವಸೆ ನೀಡಿದರು.

ಮಸ್ಕಿ: ನೀರಿನ ಗೇಜ್‌ ಹೆಚ್ಚಿಸುವಂತೆ ರೈತರಿಂದ ಧರಣಿ

ನೀರಿಗಾಗಿ ರೈತರಿಂದ ಸಿಎಂಗೆ ರಕ್ತದಲ್ಲಿ ಪತ್ರ: ತುಂಗಭದ್ರಾ ಕಾಲುವೆಯ ಕೆಳಭಾಗದ ರೈತರಿಗೆ ‌ನೀರು ಹರಿಸಬೇಕು ಎಂದು ಒತ್ತಾಯಿಸಿ, ಕೆಲ ರೈತರು ತಮ್ಮ ರಕ್ತದಲ್ಲಿ ಸಿಎ‌ಂಗೆ ಪತ್ರ ಬರೆದು ಸರ್ಕಾರದ ವಿರುದ್ಧ ‌ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಪ್ರತಿಭಟನೆ ವೇಳೆ ಸಿರವಾರ ‌ಮತ್ತು ಮಾನ್ವಿ ತಾಲೂಕಿನ ವಿವಿಧ ಪಕ್ಷಗಳ ಮುಖಂಡರು, ರೈತ ಸಂಘಟನೆ ಹೋರಾಟಗಾರರು ಸೇರಿದಂತೆ ನೂರಾರು ಜನರು ಭಾಗವಹಿಸಿದರು.

click me!