ದಸರಾ ದಿನ ಮನೆಗೆ ಬಂದ ಬೃಹತ್ ಗಾತ್ರದ ಕೋಬ್ರಾ

By Suvarna NewsFirst Published Oct 26, 2020, 4:05 PM IST
Highlights

ದಸರಾ ಹಬ್ಬದ ದಿನವೇ ಬೃಹತ್ ಗಾತ್ರದ ಹಾವೊಂದು ಪತ್ತೆಯಾಗಿದೆ...

ಕೊಡಗು (ಅ.26): ದಸರಾ ಹಬ್ಬದ ದಿನ ಮನೆಯಂಗಳಕ್ಕೆ ಬುಸ್ ಬುಸ್ ನಾಗಪ್ಪ ಬಂದಿದ್ದಾನೆ. 

ಕೊಡಗಿನ ಕುಶಾಲನಗರದ ಶ್ರೀಧರ್ ಎಂಬುವವರ ಮನೆಯಂಗಳಕ್ಕೆ  ನಾಗರಹಾವು ಬಂದಿದ್ದು, ಹಾವನ್ನು ಸೆರೆ ಹಿಡಿಯಲಾಗಿದೆ. 
 
ಮನೆಯಂಗಳದಲ್ಲಿದ್ದ ಹಾವನ್ನು ಉರಗ ತಜ್ಞ ಶಾಜಿ ಸೆರೆ ಹಿಡಿದಿದ್ದಾರೆ. ಸುಮಾರು 6 ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯಲಾಗಿದೆ. 

ಈ ದ್ವೀಪಕ್ಕೆ ಹೋದವರು ಬದುಕಿ ಬರೋ ಚಾನ್ಸೇ ಇಲ್ಲ! ...
 
ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿರುವ  ಶ್ರೀಧರ್ ಅವರ ಮನೆಯ ಮುಂದೆ ಬಂದ ವೇಳೆ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. 

ಕೊಡಗಿನಲ್ಲಿ ಈ ಹಿಂದೆಯೂ ಕೂಡ ಅನೇಕ ಬಾರಿ ಬೃಹತ್ ಗಾತ್ರದ ಹಾವುಗಳು ಪತ್ತೆಯಾಗಿದ್ದವು. ಮನೆಯ ಒಳಗೂ  ಸಹ ಹಾವುಗಳು ಪ್ರತ್ಯಕ್ಷವಾಗುವುದು ಇಲ್ಲಿ ಸಾಮಾನ್ಯ ವಿಚಾರವಾಗಿದೆ.

click me!