ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಅರೆಸ್ಟ್

By Suvarna News  |  First Published Oct 26, 2020, 2:05 PM IST

ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಅರೆಸ್ಟ್ ಆಗಿದ್ದಾರೆ. ಕಾರಣ..?


ಮೈಸೂರು (ಅ.26): ಮೈಸೂರಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಈ ಬಾರಿ ಸರಳ ದಸರಾ ಆಚರಣೆ ಮಾಡಲಾಗುತ್ತಿದೆ. ಇತ್ತ ಅರಮನೆ ಪ್ರವೇಶಕ್ಕೆ ಯತ್ನಿಸಿದ ವಾಟಾಳ್ ನಾಗರಾಜ್  ಅವರನ್ನು ಅರೆಸ್ಟ್ ಮಾಡಲಾಗಿದೆ. 

ಅರಮನೆ ಪ್ರವೇಶಕ್ಕೆ ಮುಂದಾದಾಗ ನಾಗರಾಜ್ ಅವರನ್ನು ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ.  

Tap to resize

Latest Videos

ಸರ್ವಾಲಂಕಾರ ಭೂಷಿತೆಯಾಗಿ ರಾರಾಜಿಸುತ್ತಿರುವ ನಾಡದೇವತೆ; ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಿ .

ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ವಾಟಾಳ್ ಅದ್ದೂರಿ ದಸರಾ ಆಚರಣೆಯಾಗಬೇಕೆಂದು ಆಗ್ರಹಿಸಿದ್ದರು.  ಅದ್ದೂರಿ ಆಚರಣೆ ಮಾಡದಿದ್ದಲ್ಲಿ  ತಾವೇ ಸಾರೋಟಿನಲ್ಲಿ ಚಾಮುಂಡಿ ಮೆರವಣಿಗೆ ಮಾಡೋದಾಗಿ ಎಚ್ಚರಿಕೆ ನೀಡಿದ್ದರು. 

ವಾಟಾಳ್ ಕಾರು ಅಡ್ಡಗಟ್ಟಿದ ಪೊಲೀಸರು ಅರಮನೆ ಪ್ರವೇಶಕ್ಕೆ ಮುಂದಾದ ವೇಳೆ ಅರೆಸ್ಟ್ ಮಾಡಿದ್ದಾರೆ. ಮೈಸೂರಿನ ದೊಡ್ಡ ಗಡಿಯಾರ ರಸ್ತೆಯಲ್ಲಿ ಘಟನೆ ನಡೆದಿದೆ. 

click me!