ಕಲ್ಯಾಣ ಕರ್ನಾಟಕ ಉತ್ಸವ: ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿದ ಸಿಎಂ ಸಿದ್ದರಾಮಯ್ಯ

By Girish Goudar  |  First Published Sep 17, 2024, 9:45 AM IST

ಬಸವೇಶ್ವರರ ಸಾಮಾಜಿಕ ಕ್ರಾಂತಿಯನ್ನು ಕಂಡ ನೆಲವಿದು ಬಸವಣ್ಣನವರ ನುಡಿದಂತೆ ನಡೆ ಎನ್ನುವ ವಾಕ್ಯದಂತೆ ನಮ್ಮ ಸರ್ಕಾರ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಜನ ನಾಲ್ಕು ಮಹತ್ವದ ಹೋರಾಟ ಮಾಡಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟ, ಹೈದ್ರಾಬಾದ್‌ ‌ಕರ್ನಾಟಕ ವಿಮೋಚನಾ ಹೋರಾಟ, ಕನ್ನಡ ಭಾಷಿಕರು ಒಗ್ಗೂಡುವ ಹೋರಾಟ ಮತ್ತು ಆರ್ಟಿಕಲ್ 371 ಜೆ ರಚನೆಗಾಗಿ ಹೋರಾಟ: ಸಿಎಂ ಸಿದ್ದರಾಮಯ್ಯ


ಕಲಬುರಗಿ(ಸೆ.17):  ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವಾಗಿ ಉತ್ಸವದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಇಂದು(ಮಂಗಳವಾರ) ನಗರದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. 

ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸ ನೆನಪಿಸಿ, ಹೋರಾಟಗಾರರ ತ್ಯಾಗ, ಬಲಿದಾನವನ್ನ ಸ್ಮರಿಸಿದ್ದಾರೆ. 

Tap to resize

Latest Videos

undefined

ನನ್ನನ್ನು ರಾಜಕೀಯವಾಗಿ ಮುಗಿಸ್ತೇನೆ ಅನ್ನೋದು ಮೂರ್ಖತನ: ಎಚ್‌ಡಿಕೆ, ಬಿಎಸ್‌ವೈಗೆ ಸಿದ್ದು ಟಾಂಗ್‌

ಬಸವೇಶ್ವರರ ಸಾಮಾಜಿಕ ಕ್ರಾಂತಿಯನ್ನು ಕಂಡ ನೆಲವಿದು ಬಸವಣ್ಣನವರ ನುಡಿದಂತೆ ನಡೆ ಎನ್ನುವ ವಾಕ್ಯದಂತೆ ನಮ್ಮ ಸರ್ಕಾರ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಜನ ನಾಲ್ಕು ಮಹತ್ವದ ಹೋರಾಟ ಮಾಡಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟ, ಹೈದ್ರಾಬಾದ್‌ ‌ಕರ್ನಾಟಕ ವಿಮೋಚನಾ ಹೋರಾಟ, ಕನ್ನಡ ಭಾಷಿಕರು ಒಗ್ಗೂಡುವ ಹೋರಾಟ ಮತ್ತು ಆರ್ಟಿಕಲ್ 371 ಜೆ ರಚನೆಗಾಗಿ ಹೋರಾಟ. ಆರ್ಟಿಕಲ್ 371 ಜೆ ರಚನೆ ಹೋರಾಟವನ್ನು ಸ್ವಾತಂತ್ರ್ಯ ಹಾಗೂ ವಿಮೋಚನಾ ಹೋರಾಟಕ್ಕೆ ಹೋಲಿಸಿ ಹೊಸ ತಲೆಮಾರು ಇವುಗಳನ್ನು ಎಂದಿಗೂ ಮರೆಯಬಾರದು ಎಂದು ಸಿದ್ದರಾಮಯ್ಯ ಅವರು ಕಿವಿ ಮಾತು ಹೇಳಿದ್ದಾರೆ. 

ಈ ಸಂದರ್ಭದಲ್ಲಿ ಗೃಹ ಸಚಿವ ಜಿ ಪರಮೇಶ್ವರ, ಸಚಿವರಾ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್,  KKRDB ಅಧ್ಯಕ್ಷ ಡಾ. ಅಜಯಸಿಂಗ್, ಡಿಸಿ, ಎಸ್ಪಿ, ಪೊಲೀಸ್ ಕಮೀಷನರ್ ಸೇರಿ ಶಾಸಕರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು

click me!