* ಧಾರವಾಡದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ
* ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಅನಾವರಣ
* ಬೊಮ್ಮಾಯಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ, (ಮೇ.15) : ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಇಂದು(ಭಾನುವಾರ) ಸಿಎಂ ಬಸವರಾಜ ಬೊಮ್ಮಾಯಿ ಅವರು ಬಸವೇಶ್ವರರ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಿದರು..ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಥ್ ಕೋಟ್ಟಿದ್ದರು..
ಇನ್ನು ದೇವಸ್ಥಾನಲ್ಲಿ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಮನ್ ಮ್ಯಾನ್ ಸಿಎಂ ಆಗಿದ್ದಾರೆ. ಹಿಂದೆ ಸಿಎಂಗಳು ಬಂದ್ರೆ ಜನರನ್ನಹತ್ತಿರ ಬಿಡ್ತಾ ಇರಲಿಲ್ಲಾ, ಸದ್ಯ ಬಸವರಾಜ ಬೊಮ್ಮಾಯಿ ಸಿಎಂ ಆದಾಗಿನಿಂದಲೂ ಜನರ ಹತ್ರ ಹೋಗ್ತಾ ಇದಾರೆ. ಅವರು ಕಾಮನ್ ಮ್ಯಾನ್ ಸಿಎ. ಆಗಿ ಕೆಲಸವನ್ನ ಮಾಡುತ್ತಿದ್ದಾರೆ ಎಂದ ಹಾಡಿಹೊಗಳಿದರು.
undefined
ಹುಬ್ಬಳ್ಳಿಯ ಏರ್ಪೋರ್ಟ್‌ಗೆ ಬೆಲ್ಜಿಯಂ ಶಫರ್ಡ್ ಶ್ವಾನಗಳ ಕಾವಲು
ಧಾರವಾಡದ ಬಸವೇಶ್ವರರ ಕಂಚಿನ ಪುತ್ತಳಿಯನ್ನ ಅನಾವರ ಮಾಡಿರುವ ಸೌಭಾಗ್ಯ ನಮಗೆ ಸಿಕ್ಕಿದೆ. ದೇಶದಲ್ಲಿ ಪ್ರಧಾನಿ ಮೋದಿ ಅವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ...ಜಗತ್ತಿನಲ್ಲಿ ಬಿಜೆಪಿ ಸರಕಾರವೂ ಒಳ್ಳೆಯ ಕೆಲಸವನ್ನ ಮಾಡುತ್ತಿದೆ..ಬೇರೆ ಬೇರೆ ದೇಶಗಳು ಭಾರತ ದೇಶವನ್ನ ಹೊಗಳುತ್ತಿದೆ...ಉಕ್ರೆನ್ ನಿಂದ 21, ಸಾವಿರ ವಿದ್ಯಾರ್ಥಿಗಳನ್ನ ಸುರಕ್ಷಿತ ವಾಗಿ ತರುವುದರಲ್ಲಿ ಮೋದಿ ಸರಕಾರ ಕೆಲಸ ಮಾಡುತ್ತಿದೆ...ಇನ್ನು 2023 ರೊಳಗೆ ರಾಜ್ಯದಲ್ಲಿ ಡಬಲ್ ಲೈನ್ ರೆಲ್ವೆ ಲೈನನ್ನ ಪೂರ್ಣ ಗೊಳಿಸುತ್ತೆವೆ, ಧಾರವಾಡ ಮತ್ತು ಬೆಂಗಳೂರು ಮಧ್ಯ ಒಂದೆ ಮಾತರಂ ಟ್ರೆನ್ಮ ಆರಂಭ ಮಾಡುತ್ತೆವೆ,..ರಾಜ್ಯದ ಅಭಿವೃದ್ಧಿ ಮಾಡುತ್ತೆವೆ ದೇಶದ ಆದ್ಯಾತ್ಮಕ ಕೆಲಸದ ಜೊತೆಗೆ ಅಭಿವೃದ್ಧಿ ಗಳಿಗಾಗಿ ಕೇಂದ್ರ, ರಾಜ್ಯ ಸರಕಾರ ಶ್ರಮ ಪಡುತ್ತೆವೆ ನಾವೆಲ್ಲ ಕಾಮನ್ ಮ್ಯಾನ್ ಸಿಎಂಗೆ ಸಾಥ್ ಕೊಡಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ವೇದಿಕೆಯ ಸಭೆಯನ್ನುದ್ದೆಶಿಸಿ ಮಾತನಾಡಿದರು..
ಬಸವೇಶ್ವರರ ಕಂಚಿನ ಪುತ್ತಳಿ ನ್ನ ಅನಾವರಣ ಮಾಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಸವೇಶ್ವರ ತತ್ವಗಳ ಬಗ್ಗೆ ಹಾಡಿ ಬೊಗಳಿದರು..ನರೇಂದ್ರ ಮೋದಿ ಅವರಿಗೆ ಹತ್ರ ಇರುವ ಸಚಿವ ಅಂದ್ರೆ ಪ್ರಹ್ಲಾದ್ ಜೋಶಿ, ಅದು ಎಲ್ಲರಿಗೂ ಗೊತ್ತಿದೆ. ಬಸವಣ್ಣಣ್ಣವರನ್ನ ನಾಶ ಮಾಡಬೇಕು ಎಂದು ಎಲ್ಲ ಶರಣರೂ ಬಿಟ್ಟು ಹೋಗಿದ್ರು..ಆದ್ರೆ ಕಲ್ಯಾಣ ಕ್ರಾಂತಿ ನಾಶ ಮಾಡಬೇಕು ಅಂತ ಇದ್ರು. ಆದರೆ ಕಲ್ಯಾಣ ಕ್ರಾಂತಿ ಎತ್ತರಕ್ಕೆ ಬೆಳೆದು ಹೊಯ್ತು..ಸಮಾನ ವ್ಯವಸ್ಥೆಯನ್ನ ತರಬೇಕು ಎಂದು ಬಸವಣ್ಣನವರ ಪ್ರಯತ್ನ ಮಾಡಿದ್ದರು..ಬಸವಣ್ಣ ಅವರ ವಿಚಾರಗಳು ಪ್ರಸ್ತುತವಾಗಿವೆ..900 ವರ್ಷ ಇತಿಹಾಸ ನೋಡಿದರೆ ನಾವು ಇನ್ನು ವಿಚಾರ ಮಾಡಬೇಕಿದೆ..ಅವರ ತತ್ವಗಳನ್ನ ಪಾಲನೆ ಮಾಡಬೇಕಿದೆ.ನಾವೂ ಇನ್ನು ಬಸವಣ್ಣ ಅವರ ತತ್ವಗಳನ್ನ ಪಾಲನೆ ಮಾಡ್ತಾ ಇಲ್ಲ, ನಾವೂ ಆತ್ಮಾಲೋಕನೆ ಮಾಡಬೇಕು ಕಾಯಕ ಮತ್ತು ದಾಸೋಹದ ಮಾಡಬೇಕು ಎಂದು ಬಸವಣ್ಣನವರು ಹೇಳಿದ್ದರು ಎಂದು ತಿಳಿಸಿದರು.
ಮಹಿಳೆಯಿಂದ ತರಾಟೆ
ಸಿಎಂ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿ ಆಗಮಿಸುವಾಗ ನರೇಂದ್ರ ಟೋಲ್ ಬಳಿ ಒಂದು ಘಂಟೆಗಳವರೆಗೆ ಸಾರ್ವಜನಿಕರ ವಾಹನವನ್ನ ಪೋಲಿಸರು ತಡೆದಿದ್ರು..ಇದಕ್ಕೆ ಮಹಿಳೆಯೊಬ್ಬಳು ಪೋಲಿಸ್ ಪೇದೆ ಸಯ್ಯdf ಎಂಬುವರನ್ನ ತರಾಟೆಗೆ ತೆಗೆದುಕ್ಕೋಂಡರು..ಸಿಎಂ ಬಂದ್ರೆ ನಮಗ್ಯಾಕೆ ತೊಂದ್ರೆ ಕೊಡ್ತಿರಿ ನೀವು ಎಂದು ಪೋಲಿಸರಿಗೆ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ...
ಒಂದೆ ಕಾರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮತ್ತು ಶಾಸಕ ಅರವಿಂದ ಬೆಲ್ಲದ್ ಆಗಮಿಸಿದ್ರು. ವಿಶೇಷ ಅಂದರೆ ಸಿಎಂ ಕಾರ್‌ನ ಪ್ರಂಟ್ ಸೀಟಿನಲ್ಲಿ ಶಾಸಕ ಅರವಿಂದ ಬೆಲ್ಲದ್ ಕುಳಿತುಕ್ಕೊಂಡಿದ್ರು..ಇನ್ನು ಬೆಲ್ಲದ್ ಅವರ ಹಿಂದಿನ ಸೀಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕುಳತಿಕ್ಕೊಂಡು ಬಂದಿದ್ದಾರೆ..ಒಟ್ಟಿನಲ್ಲಿ ಅರವಿಂದ ಬೆಲ್ಲದ್ ಅವರು ಹಿಡಿತವನ್ನ ಸಾಧಿಸಲು ಮುಂದಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದವು..
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ ಬೆಲ್ಲದ್, ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ, ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್ ಭಾಗಿಯಾಗಿದ್ದರು...