ನಲ್ಲಿ ನೀರು ಬಂದು 20 ದಿನ ಕಳೀತು, ಬೆಟಗೇರಿಯಲ್ಲಿ ನೀರಿಗಾಗಿ ಹಾಹಾಕಾರ

By Suvarna NewsFirst Published May 15, 2022, 12:20 PM IST
Highlights

* ಗದಗ ಬೆಟಗೇರಿಯಲ್ಲಿ ಯಾವ ಸದಸ್ಯರಿಗರ ಶಕ್ತಿ ಇದೆಯೊ ಅವರ ವಾರ್ಡ್‌ಗೆ ನೀರು
* ನಗರಸಭೆ ಅಧ್ಯಕ್ಷರ ವಾರ್ಡ್ ನಲ್ಲೇ ನೀರಿಗಾಗಿ ಹಾಹಕಾರ..!
* ಅಧಿಕಾರಿಗಳಿಗೆ,ಜನ ಪ್ರತಿನಿಧಿಗಳಿಗೆ ಜನರಿಂದ ಕ್ಲಾಸ್..!

ವರದಿ: ಗಿರೀಶ್ ಕಮ್ಮಾರ ಏಷ್ಯಾನೆಟ್ ಸುವರ್ಣ ನ್ಯೂಸ್

ಗದಗ, (ಮೇ.15):
ಬೆಟಗೇರಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.. ಬೇಸಿಗೆ ಆರಂಭವಾಗ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಅಂತ ಜನ ಎಚ್ಚರಿಸ್ತಾನೇ ಬಂದಿದ್ರು..  ಅಧಿಕಾರಿಗಳಿಗೆ ಮನವಿ ಮಾಡ್ತಾನೆ ಬಂದಿದ್ರು.. ಹೀಗಿದ್ರೂ ಸ್ಪಂದನೆ ಸಿಕ್ಕಿರಲಿಲ್ಲ.. ವಿಪರ್ಯಾಸ ಅಂದ್ರೆ ನಗರಸಭೆ ಅಧ್ಯಕ್ಷರ ವಾರ್ಡ್ ನಲ್ಲೇ ನೀರಿಗಾಗಿ ಜನ ಪರದಾಡ್ತಿದಾರೆ.. 

ನೀರು ಬಂದು ಬರೋಬ್ಬರಿ 20 ದಿನ ಕಳೀತು.. 50 ರೂಪಾಯಿ ದುಡಿಯುವ ಜನರು 300 ರೂಪಾಯಿ ಕೊಟ್ಟು ಟ್ಯಾಂಕರ್ ನೀರು ಹಾಕಿಸ್ಬೇಕು.. ಹೀಗಾಗಿ ಸಮಸ್ಯೆ ಬಗೆ ಹರಿಸಿ ಅಂತಾ‌ ಜನ ಮನವಿ ಮಾಡಿದ್ದಾರೆ. ನೆರೆದಿದ್ದ ಜನರ ಮನವೊಲಿಸ್ತಿರೋ ಅಧಿಕಾರಿಗಳು, ಜನ ಪ್ರತಿನಿಧಿಗಳು..  ನೀರಿಗಾಗಿ ಇಲ್ಲಿ ಅಕ್ಷರಶಃ ಮಾತಿನ ದಂಗಲ್ ನಡೆದಿತ್ತು..  

Gadag: ಮುಸ್ಲಿಂ ಬಾಬಾನಿಂದ ಲಿಂಗಪೂಜೆ.. ಹಿಂದೂ ದೇವರ ಆರಾಧನೆ!

ಸರಿಯಾಗಿ ನೀರು ಬಿಡದ ಅಧಿಕಾರಿಗಳಿಗೆ, ವಾರ್ಡ್ ಸಮಸ್ಯೆಗೆ ಸ್ಪಂದಿಸದ ಸದಸ್ಯರಿಗೆ ಜನ ತರಾಟೆಗೆ ತೆಗೆದುಕೊಂಡಿದ್ರು‌.  ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಅವರ ವಾರ್ಡ್ ನಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. 20 ದಿನಕ್ಕೊಮ್ಮೆ ನೀರು ಬರುತ್ತೆ..ರಾತ್ರಿ ಹೊತ್ತು 1 ಗಂಟೆಗೆ ಇಲ್ಲ, ಎರಡು ಗಂಟೆಗೆ ನೀರು ಸಪ್ಲೈ ಮಾಡ್ಲಾಗುತ್ತಂತೆ. ದಿನ ಬಳಕೆಗೆ ನೀರು ಸಾಕಾಗ್ತಿಲ್ಲ. ಹೀಗಾಗಿ ತಿಂಗಳಿಗೆ ಎಂಟು ಟ್ಯಾಂಕರ್ ಗಳನ್ನ ಮನೆಗೆ ತರೆಸಿಕೊಳ್ಳಲಾಗ್ತಿದೆ.. ಒಂದು ಟ್ಯಾಂಕರ್ ನೀರು ಸರಬರಾಜು ಆಗೋದಕ್ಕೆ 350 ರೂಪಾಯಿ ವ್ಯಯ ಮಾಡ್ಬೇಕು.. ತಿಂಗಳಿಗೆ ಏನಿಲ್ಲ ಅಂದ್ರೂ 2 ರಿಂದ ಮೂರು ಸಾವಿರ ರೂಪಾಯಿ ಹಣ ಖರ್ಚು ಆಗುತ್ತೆ.. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸ್ಬೇಕು ಅಂತಾ ಜನ ಕೇಳಿಕೊಳ್ತಿದಾರೆ..

ವಾರ್ಡ್ ನಂಬರ್35 ರಲ್ಲೇ ಓವರ್ ಹೆಡ್ ಟ್ಯಾಂಕ್ ಇದೆ.. ವಾರ್ಡ್ ನಂಬರ್ 34,35 ವ್ಯಾಪ್ತಿಯ ಸಿದ್ದರಾಮೇಶ್ವರ ನಗರ, ಹುಡ್ಕೊ ಕಾಲನಿ ಸೇರಿದಂತೆ ಐದು ಬಡಾವಣೆಗೆ ಇಲ್ಲಿದ್ಲೆ ನೀರು ಸರಬರಾಜು ಆಗುತ್ತೆ‌.. ಆದ್ರೆ, ನಿರ್ವಹಣೆ ಇಲ್ಲದ ಕಾರಣ ಸಮರ್ಪಕ ನೀರು ಜನರಿಗೆ ಸಿಕ್ತಿಲ್ಲ.. ಹೀಗಾಗಿ ಅಧಿಕಾರಿಗಳ ಮುತ್ತಿಗೆ ಹಾಕಿದ್ದ ಜನರು, ನೀರು ಬಿಡುವಂತೆ ಗಲಾಟೆ ಮಾಡಿದ್ರು .. ಆದಷ್ಟು ಬೇಗ ಸ್ಪಂದಿಸ್ಬೇಕು.. ಜೊತೆಗೆ ಕುಡಿಯುವ ನೀರನ್ನ ಆದಷ್ಟು ಬೇಗ ಒದಗಿಸುವಂತೆ ಒತ್ತಾಯಿಸಿದ್ರು.. ಈ ಬಗ್ಗೆ ವಾಟರ್ ಸಪ್ಲೈ ಪ್ರೊಜೆಕ್ಟ್ ಮ್ಯಾನೇಜರ್ ವಿಶ್ವೇಶ್ವರಯ್ಯ ಅವರನ್ನ ಕೇಳಿದ್ರೆ, ರಾಜಕಿಯ ಇಚ್ಛಾ ಶಕ್ತಿಯ ಕೊರತೆಯಿಂದ ಗದಗ ಬೆಟಗೇರಿಗೆ ನೀರು ಸಿಕ್ತಿಲ್ಲ.. ಶಕ್ತಿವಂತ ಸದಸ್ಯರು ನೀರು ಪಡೆದುಕೊಳ್ರಿದ್ದಾರೆ.. ಸಮಸ್ಯೆ ಇದೆ ಬಗೆಹರಿಸ್ತೀವಿ ಅಂತಾ ಹೇಳ್ತಿದಾರೆ.. 

ಕೇವಲ ಒಂದು ವಾರ್ಡ್ ನ ಸಮಸ್ಯೆ ಇದಲ್ಲ‌. ಗದಗ ಬೆಟಗೇರಿಯ ಬಹುತೇಕ ವಾರ್ಡ್ ಗಳಿಗೆ ಸಮರ್ಪಕ ನೀರು ಸಿಗ್ತಿಲ್ಲ.. ರಾಜಕೀಯ ಗುದ್ದಾಟದಲ್ಲಿ ಜನ ಸಾಮಾನ್ಯರು ತೊಂದ್ರೆ ಅನುಭವಿಸುವಂತಾಗಿದೆ.. ಎರಡು ದಿನಕ್ಕೊಮ್ಮೆಯಾದ್ರೂ ವಾರ್ಡ್ ಗಳಿಗೆ ನೀರು ಸಿಗುವಂತಾಗ್ಲಿ.. ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿ.. 

click me!