ಬೆಂಗ್ಳೂರನ್ನು ಅಂತಾರಾಷ್ಟ್ರೀಯ ಸ್ಮಾರ್ಟ್‌ ಸಿಟಿ ಮಾಡ್ತೀವಿ: ಸಿಎಂ ಬೊಮ್ಮಾಯಿ

Published : Apr 19, 2022, 06:35 AM IST
ಬೆಂಗ್ಳೂರನ್ನು ಅಂತಾರಾಷ್ಟ್ರೀಯ ಸ್ಮಾರ್ಟ್‌ ಸಿಟಿ ಮಾಡ್ತೀವಿ: ಸಿಎಂ ಬೊಮ್ಮಾಯಿ

ಸಾರಾಂಶ

*   ರಾಜಧಾನಿ ಅಭಿವೃದ್ಧಿ ಸರ್ಕಾರ ಬದ್ಧ *  ಒಂದು ವರ್ಷದಲ್ಲಿ ಬೆಂಗಳೂರಿನ ಚಿತ್ರವಣವೇ ಬದಲು *  ಮಾಸ್ತಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಸಿಎಂ ಘೋಷಣೆ  

ಬೆಂಗಳೂರು(ಏ.19): ರಾಜ್ಯ ಸರ್ಕಾರ ಬೆಂಗಳೂರಿನ(Bengaluru) ಅಭಿವೃದ್ಧಿಗೆ ಬದ್ಧವಾಗಿದ್ದು ಅಂತಾರಾಷ್ಟ್ರೀಯ ಸ್ಮಾರ್ಟ್‌ ಸಿಟಿ ಮಾಡಬೇಕೆನ್ನುವ ದೊಡ್ಡ ಗುರಿ ಹೊಂದಿದೆ. ಈ ನಗರವನ್ನು ಅಂತಾರಾಷ್ಟ್ರೀಯ ಬ್ರಾಂಡ್‌ ನೇಮ್‌ ಆಗಿ ಮಾಡಿ ಆರ್ಥಿಕತೆಗೆ ದೊಡ್ಡ ಇಂಬು ಕೊಡುವ ಗುರಿ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು.

ಸೋಮವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳ ವಾರ್ಡ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಸ್ತಿ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

Bengaluru: ರಸ್ತೆ ಅಗೆದವರೇ ಇನ್ಮುಂದೆ ರಿಪೀರಿ ಮಾಡ್ಬೇಕು..!

ಮೆಟ್ರೋ(Metro), ಸಬ್‌ಅರ್ಬನ್‌ ರೈಲು, ಹೊಸ ಸ್ಯಾಟ್‌ಲೈಟ್‌ ಟೌನ್‌, ಅತ್ಯುತ್ತಮ ರಸ್ತೆ ನಿರ್ಮಾಣದಿಂದ ಬೆಂಗಳೂರು ಅಭಿವೃದ್ಧಿಯತ್ತ ಸಾಗುತ್ತಿದೆ. ಇಡೀ ಭಾರತ ದೇಶವೇ ಹೆಮ್ಮ ಪಡುವಂತೆ ಹೆಚ್ಚಿನ ಪ್ರಾಶಸ್ತ್ಯದಲ್ಲಿ ಈ ಮಹಾನಗರವನ್ನು ಅಭಿವೃದ್ಧಿ ಮಾಡುತ್ತೇವೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಬೆಂಗಳೂರಿನ ಚಿತ್ರಣವೇ ಬದಲಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಮುಂದಿನ ಪೀಳಿಗೆಗೆ ಮಾಸ್ತಿ ತಲುಪಿಸಲು ಬದ್ಧ:

ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರು ಸರ್ವ ಶ್ರೇಷ್ಠ ಸಾಹಿತಿ. ಅವರ ಹೆಸರಿನಲ್ಲಿ ಭವನ ನಿರ್ಮಾಣವಾಗಲಿದ್ದು ಮಾಸ್ತಿಯವರ ಸಾಹಿತ್ಯದ ಎಲ್ಲ ಚಟುವಟಿಕೆಗಳು ಇಲ್ಲಿ ನಡೆಯಲಿವೆ. ಈ ಮೂಲಕ ಮಾಸ್ತಿಯವರ ಆಸ್ತಿ ಮುಂದಿನ ಪೀಳಿಗೆಗೆ ಮುಂದುವರೆಯುತ್ತದೆ ಎಂಬ ವಿಶ್ವಾಸ ಮೂಡಿಸುವಂತೆ ಈ ಭವನಕ್ಕೆ ಶಿಲಾನ್ಯಾಸ ಮಾಡುತ್ತಿದ್ದೇವೆ. ಮಾಸ್ತಿ ಅಯ್ಯಂಗಾರ್‌ ಅವರ ಬರಹ, ಚಿಂತನೆ ಮತ್ತು ಸಾಹಿತ್ಯ ಕನ್ನಡದ ಆಸ್ತಿಯಾಗಿದೆ. ಇದು ಎಲ್ಲರಿಗೂ ಸೇರಬೇಕು ಮತ್ತು ಮುಟ್ಟಬೇಕಿದೆ. ಭವನ ನಿರ್ಮಾಣಕ್ಕೆ ಸರ್ಕಾರ 3.5 ಕೋಟಿ ರು. ಅನುದಾನಕ್ಕೆ ಮಂಜೂರಾತಿ ನೀಡಲಾಗಿದ್ದು, ಈ ಕಟ್ಟಡ ಆದಷ್ಟುಬೇಗ ಪ್ರಾರಂಭವಾಗುತ್ತದೆ. ಇನ್ನು ಹೆಚ್ಚಿನ ಅನುದಾನ ಬೇಕಾದರೆ ಅದನ್ನು ಕೊಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

ಆರ್ಥಿಕತೆ ಮಾತ್ರ ಶ್ರೀಮಂತಿಕೆ ಮಾನದಂಡವಲ್ಲ:

ರಾಜ್ಯದ(Karnataka) ಶ್ರೀಮಂತಿಕೆಯನ್ನು ಕೇವಲ ಆರ್ಥಿಕ ದೃಷ್ಟಿಕೋನದಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಅಲ್ಲಿನ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಮೌಲ್ವಿಕವಾಗಿ ಎಲ್ಲ ಆಯಾಮಗಳಲ್ಲಿ ಪ್ರಗತಿಪರವಾಗಿದೆಯೇ ಎನ್ನುವುದು ಮುಖ್ಯ. ಸಮಸ್ತ ಜನರ ಶಾಂತಿ, ನೆಮ್ಮದಿಗೆ ಈ ಕನ್ನಡದ ಸಮಾಜ ಏನನ್ನು ಕೊಟ್ಟಿದೆ, ಅದು ಎಷ್ಟುಶ್ರೀಮಂತಗೊಳಿಸಿದೆ ಎಂಬುದರ ಜೊತೆಗೆ ಹೊಸ ವೈಚಾರಿಕ ನೆಲೆಗಟ್ಟಿನಲ್ಲಿ ಮೌಲ್ವಿಕವಾಗಿ ಹೇಗೆ ಪರಿಹಾರ ಕೊಡಬೇಕು ಎಂಬುದರ ಮೇಲೆ ಈ ರಾಜ್ಯದ ಶ್ರೀಮಂತಿಕೆ ನಿರ್ಧಾರವಾಗುತ್ತದೆ. ಮಾಸ್ತಿಯವರ ಸಾಹಿತ್ಯದ ಚಿಂತನೆಯು ಶ್ರೀಮಂತಿಕೆಯುಳ್ಳದ್ದು ಎಂದರು.

Data Center ಹೊಸ ಡಾಟಾ ಸೆಂಟರ್‌ ನೀತಿಗೆ ಅಸ್ತು, ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ!

33 ಲಕ್ಷ ರೈತರಿಗೆ ಸಾಲ:

ಕಳೆದ ವರ್ಷ 22 ಲಕ್ಷ ರೈತರಿಗೆ(Farmers)  ಶೂನ್ಯ ಬಡ್ಡಿ ಸಾಲ ಕೊಟ್ಟಿದ್ದರು. ಸಾಮಾನ್ಯವಾಗಿ ಈ ಸಂಖ್ಯೆಯನ್ನು ಪ್ರತಿವರ್ಷ 2 ಅಥವಾ 3 ಲಕ್ಷ ಹೆಚ್ಚುತ್ತಿದ್ದೆವು. ಆದರೆ, ಈ ಬಾರಿ 22 ಲಕ್ಷದಿಂದ 33 ಲಕ್ಷ ಜನರಿಗೆ ಶೂನ್ಯ ಬಡ್ಡಿ ಸಾಲವನ್ನು ಕೊಡುವ ಕಾರ್ಯವನ್ನು ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಟ್ರಸ್ಟಿನ ಅಧ್ಯಕ್ಷ ಮಾವಿನಕೆರೆ ರಂಗನಾಥ್‌, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್‌ ಕಂಬಾರ, ಬಿಡಿಎ ಆಯುಕ್ತ ರಾಜೇಶ್‌ಗೌಡ, ಬಿ.ಆರ್‌.ಲಕ್ಷ್ಮಣರಾವ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 

PREV
Read more Articles on
click me!

Recommended Stories

ಬೆಂಗಳೂರು: ಸೈಬರ್ ವಂಚನೆ ತಡೆಗೆ ಎಐ ಅಸ್ತ್ರ ಪ್ರಯೋಗ
ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?