ಎಐಸಿಸಿ ಅಧ್ಯಕ್ಷ ಖರ್ಗೆ ಬೆಂಗ್ಳೂರಿಗೆ ಪಾದಾರ್ಪಣೆ: ಸಿಎಂಗೂ ತಟ್ಟಿದ ಟ್ರಾಫಿಕ್ ಬಿಸಿ..!

By Girish GoudarFirst Published Nov 6, 2022, 1:34 PM IST
Highlights

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ಬಳಿ ಟ್ರಾಫಿಕ್ ಜಾಮ್, ಟ್ರಾಫಿಕ್‌ನಲ್ಲಿ ಸಿಲುಕಿದ ಸಿಎಂ ಬಸವರಾಜ ಬೊಮ್ಮಾಯಿ 

ಬೆಂಗಳೂರು(ನ.06):  ಎಐಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರು ಇಂದು(ಭಾನುವಾರ) ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ನಗರದ ಅರಮನೆ ಮೈದಾನದಲ್ಲಿ ರಾಜ್ಯ ಕಾಂಗ್ರೆಸ್‌ನಿಂದ ಸರ್ವೋದಯ ಸಮಾವೇಶವನ್ನ ಆಯೋಜಿಸಲಾಗಿದೆ. ಹೀಗಾಗಿ ಪ್ಯಾಲೆಸ್ ಗ್ರೌಂಡ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್‌ ಸಮಸ್ಯೆ ಸಿಎಂ ಬೊಮ್ಮಾಯಿ ಅವರಿಗೂ ತಟ್ಟಿದೆ. ಹೌದು, ಬ್ಯಾಟರಾನಪುರ ಕಾರ್ಯಕ್ರಮಕ್ಕೆ ತೆರಳುವ ಸಮಯದಲ್ಲಿ ಗುಟ್ಟಹಳ್ಳಿ ಬಳಿ ಟ್ರಾಫಿಕ್‌ನಲ್ಲಿ ಸಿಎಂ ವಾಹನ ಸಿಲುಕಿದೆ. ಜನದಟ್ಟಣೆಯ ಜಾಸ್ತಿಯಾಗಿದ್ದರಿಂದ ಪೊಲೀಸರು ಟ್ರಾಫಿಕ್ ಸಹ ಕ್ಲಿಯರ್ ಮಾಡಿರಲಿಲ್ಲ. ಬಳಿಕ ಟ್ರಾಫಿಕ್ ಕ್ಲಿಯರ್ ಮಾಡಿಕೊಂಡು  ಸಿಎಂ ವಾಹನ ತೆರಳಿದೆ ಅಂತ ತಿಳಿದು ಬಂದಿದೆ. 

ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸ್ವಾಗತ ಸಮಾವೇಶ ನಡೆಯಲಿದೆ. ಮಧ್ಯಾಹ್ನ 2 ಗಂಟೆಯ ನಂತರ ಸಮಾವೇಶ ಆರಂಭವಾಗಲಿದೆ. ಖರ್ಗೆ ಸ್ವಾಗತಕ್ಕೆ ಕೈ ನಾಯಕರಿಂದ ಭರ್ಜರಿ ಸಿದ್ಧತೆ ನಡೆದಿದೆ. ಖರ್ಗೆ ಅವರನ್ನ ಸ್ವಾಗತಿಸಲು ಅರಮನೆ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. 

ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಇಂದು ಪುರ ಪ್ರವೇಶ: ಭವ್ಯ ಸ್ವಾಗತಕ್ಕೆ ಬೆಂಗ್ಳೂರಲ್ಲಿ ಸಿದ್ಧತೆ

ಇಂದಿನ ಸರ್ವೋದಯ ಸಮಾವೇಶಕ್ಕೆ ಸುಮಾರು ಒಂದು ಲಕ್ಷ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ. ಮುಖ್ಯ ವೇದಿಕೆಯಲ್ಲಿ 125 ಪ್ರಮುಖ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆಯ ಎಡ ಬಲದಲ್ಲಿ ಚಿಕ್ಕ ವೇದಿಕೆ ಮಾಡಲಾಗಿದ್ದು 100 ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಎಐಸಿಸಿ ಪದಾಧಿಕಾರಿಗಳು, ಶಾಸಕರು, ಸಂಸದರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.  
 

click me!