ಕಲ್ಯಾಣನಗರ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೆ ಸಿದ್ಧ: ಧಾರವಾಡಕ್ಕೆ ಮತ್ತೊಮ್ಮೆ ಮೋದಿ ಬರ್ತಾರಾ?

Published : Mar 15, 2023, 03:16 PM IST
ಕಲ್ಯಾಣನಗರ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೆ ಸಿದ್ಧ: ಧಾರವಾಡಕ್ಕೆ ಮತ್ತೊಮ್ಮೆ ಮೋದಿ ಬರ್ತಾರಾ?

ಸಾರಾಂಶ

ಧಾರವಾಡ ನಿವಾಸಿಗಳ ಅನೇಕ ವರ್ಷಗಳ ಬೇಡಿಕೆಯೊಂದು ಈಡೇರುವ ಕಾಲ ಬಂದಿದೆ. ಇಲ್ಲಿಯ ಗೋಪಾಳಪುರದಿಂದ ಕಲ್ಯಾಣನಗರಕ್ಕೆ ಹೋಗುವ ದಾರಿಯಲ್ಲಿರುವ ರೇಲ್ವೆ ಗೇಟ್‌ಗೆ ಮೇಲ್ಸುತುವೆ ಲೋಕಾರ್ಪಣೆಗೆ ಸಿದ್ಧವಾಗಿದೆ.

ಬಸವರಾಜ ಹಿರೇಮಠ

ಧಾರವಾಡ (ಮಾ.15) : ಧಾರವಾಡ ನಿವಾಸಿಗಳ ಅನೇಕ ವರ್ಷಗಳ ಬೇಡಿಕೆಯೊಂದು ಈಡೇರುವ ಕಾಲ ಬಂದಿದೆ. ಇಲ್ಲಿಯ ಗೋಪಾಳಪುರದಿಂದ ಕಲ್ಯಾಣನಗರಕ್ಕೆ ಹೋಗುವ ದಾರಿಯಲ್ಲಿರುವ ರೇಲ್ವೆ ಗೇಟ್‌ಗೆ ಮೇಲ್ಸುತುವೆ(railway overbridge ) ಕಟ್ಟಿಸಂಚಾರವನ್ನು ಸುಗುಮಗೊಳಿಸಬೇಕು ಎಂಬ ಆ ಭಾಗದ ಜನರ ಬೇಡಿಕೆ ದಶಕಗಳದ್ದು. ಕೊನೆಗೂ ಅವರ ಬೇಡಿಕೆ ಈಡೇರಿದ್ದು, ಕೆಲವೇ ದಿನಗಳಲ್ಲಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.

ರೇಲ್ವೆ ಲೆವೆಲ್‌ ಕ್ರಾಸಿಂಗ್‌ ನಂ. 297 ಧಾರವಾಡದ ಮಾಳಮಡ್ಡಿ ಮತ್ತು ಸ್ಟೇಶನ್‌ ರಸ್ತೆಯನ್ನು ಕಲ್ಯಾಣನಗರ(Kalyananagar dharwad), ದಾನೂನಗರ, ಅತ್ತಿಕೊಳ್ಳ ಮತ್ತು ರಾಮನಗರಕ್ಕೆ ಸಂಪರ್ಕಿಸುತ್ತದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಈ ರೇಲ್ವೆ ಗೇಟ್‌ ದಾಟಿ ಹೋಗುತ್ತವೆ. ರೇಲ್ವೆ ಅ​ಧಿಕಾರಿಗಳ ಪ್ರಕಾರ, ಮೇಲ್ಸೇತುವೆ ಮಾ. 20ಕ್ಕೆ ಜನ ಸಂಚಾರಕ್ಕೆ ಸಿದ್ಧವಾಗಲಿದ್ದು, ಅಧಿ​ಕೃತವಾಗಿ ಅದರ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಯಾವಾಗ ಮುಕ್ತ ಮಾಡುತ್ತಾರೆ ಎಂಬುದಕ್ಕೆ ಕಾಯಬೇಕಿದೆ. ಕಳೆದ ಭಾನುವಾರ ಧಾರವಾಡಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಈ ಸೇತುವೆಯನ್ನು ಲೋಕಾರ್ಪಣೆ ಮಾಡಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಆಗಲಿಲ್ಲ. ಮೇಲ್ಸುತುವೆ .15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮ ಪಾಲು ಹಾಕಿವೆ. ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ ವಿಶೇಷ ಮುತುವರ್ಜಿ ವಹಿಸಿದ್ದು ಮೇಲ್ಸೇತುವೆ ನಿರ್ಮಾಣಕ್ಕೆ ನೆರವಾಗಿದೆ.

ಎರಡೂವರೆ ವರ್ಷದ ಮಗುವಿಗೆ ಏಕಕಾಲಕ್ಕೆ ಎರಡೂ ಕಿವಿಗಳಿಗೆ Cochlear implant ಚಿಕಿತ್ಸೆ!

ಈ ರೇಲ್ವೆ ಮೇಲ್ಸೇತುವೆ ಮಧ್ಯಭಾಗ ಅಂದರೆ, ರೈಲು ಹಳಿಯ ಮೇಲಿನ ಭಾಗ 60 ಮೀಟರ್‌ ಎತ್ತರವಿದ್ದು, ಬೋಸ್ಟ್ರಿಂಗ್‌ ಪ್ರಿಸ್ಪ್ರೇಸ್ಡ್‌ ಸ್ಟೀಲ್‌ ನಿಂದ ಮಾಡಲಾಗಿದೆ. ಕಲ್ಯಾಣ ನಗರದ ಕಡೆಗೆ 60 ಮೀಟರ್‌ ಕಾಂಕ್ರೀಟ್‌ ರಸ್ತೆ ಇದ್ದು ಗೋಪಾಳಪೂರ ಕಡೆಗೆ 200 ಮೀಟರ ಉದ್ದದ ರಸ್ತೆ ಸೇತುವೆ ಮೇಲಿದೆ. ರಸ್ತೆಯ ಅಗಲ 10.5 ಮೀಟರ ಪೈಕಿ 7.5 ಮೀಟರ್‌ ವಾಹನ ಸಂಚಾರಕ್ಕಾಗಿದ್ದು 1.5 ಮೀಟರ್‌ ಅಗಲದ ಫುಟಪಾತ್‌ ರಸ್ತೆಯ ಎರಡು ಬದಿಗಿದೆ ಎಂದು ನೈರುತ್ಯ ರೇಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿ​ಕಾರಿ ಅನೀಶ ಹೆಗಡೆ ಈ ಈ ಕುರಿತು ತಾಂತ್ರಿಕ ವಿವರಗಳನ್ನು ಪತ್ರಿಕೆಗೆ ನೀಡಿದರು.

ರೈಲುಗಳ ಸಂಖ್ಯೆ ಹೆಚ್ಚಾದಂತೆ ರೇಲ್ವೆ ಗೇಟ್‌ ಪದೇ ಪದೇ ಮುಚ್ಚಿ ಕಲ್ಯಾಣನಗರ ಭಾಗದಿಂದ ಮಾಳಮಡ್ಡಿ ಕಡೆಗೆ ಬರುವ ಮತ್ತು ಹೋಗುವ ಜನರಿಗೆ ಬಹಳ ತೊಂದರೆ ಆಗುತ್ತಿತ್ತು. 2017ರಲ್ಲಿ ಕೇಂದ್ರ ರೇಲ್ವೆ ಮಂತ್ರಿ ಶಾಖೆ ವಾರ್ಷಿಕ ಮುಂಗಡ ಪತ್ರದಲ್ಲಿ ಈ ಮೇಲ್ಸೇತುವೆ ನಿರ್ಮಾಣದ ಪ್ರಕಟಣೆ ಮಾಡಿ ಅದಕ್ಕಾಗಿ ಅನುದಾನವನ್ನು ಬಜೆಟ್‌ ನಲ್ಲಿ ನಿಗದಿ ಪಡಿಸಿತ್ತು. ರಾಜ್ಯ ಸರ್ಕಾರ ಶೇ. 50ರಷ್ಟುವೆಚ್ಚವನ್ನು ಭರಿಸಬೇಕೆಂಬ ಕರಾರು ಹಾಕಿತ್ತು.

ಹುಬ್ಬಳ್ಳಿ ಮೂಲದ ಸ್ವರ್ಣ ಕನಸ್ಟ್ರಕ್ಶನ್‌ ಕಂಪನಿ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದು ಸಕಾಲದಲ್ಲಿ ಕಾರ್ಯ ಮುಗಿಸಿದೆ. ಇದೇ ಕಂಪನಿಗೆ ಹಳಿಯಾಳ ರಸ್ತೆಯಲ್ಲಿರುವ ರೇಲ್ವೆ ಗೇಟ್‌ ಮತ್ತು ಶ್ರೀನಗರ ವೃತ್ತದ ಬಳಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗುವ ರಸ್ತೆಯಲ್ಲಿರುವ ರೇಲ್ವೆ ಗೇಟ್‌ ಗೆ ಮೇಲ್ಸೇತುವೆಯನ್ನು ನಿರ್ಮಿಸಿಕೊಡುವ ಗುತ್ತಿಗೆ ದೊರೆತಿದೆ. ಈ ಎರಡು ಕಾರ್ಯಗಳನ್ನು ಕೂಡಾ ಶೀಘ್ರದಲ್ಲಿ ಆರಂಭಿಸಿ ಸಕಾಲದಲ್ಲಿ ನಿರ್ಮಿಸಿಕೊಡುವುದಾಗಿ ಸ್ವರ್ಣ ಕಂಪನಿಯ ಎಸ್‌.ವಿ.ಎಸ್‌. ಪ್ರಸಾದ ಕನ್ನಡಪ್ರಭಕ್ಕೆ ತಿಳಿಸಿದರು.

 

ಹುಬ್ಬಳ್ಳಿ : ಜಿಲ್ಲೆಯಲ್ಲಿ ಅರವಳಿಕೆ ತಜ್ಞ ವೈದ್ಯರ ಕೊರತೆ ನೀಗುವುದು ಯಾವಾಗ?

PREV
Read more Articles on
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು