ನಾಳೆಯಿಂದ(ಮಂಗಳವಾರ) 200 ಬಸ್ ಸಂಚಾರ| ಅಗತ್ಯ ಬಿದ್ದರೆ ಹೆಚ್ಚಿನ ಬಸ್ ಸೇವೆ ಕಲ್ಪಿಸುತ್ತೇವೆ| ಎಲ್ಲ ಜಿಲ್ಲೆಗಳು, ತಾಲುಕೂಗಳಿಗೆ ಬಸ್ ಸಂಪರ್ಕ ಇರುವುದಿಲ್ಲ| ಯಾವ ಜಿಲ್ಲೆಗಳಿಗೆ ಬಸ್ ಸಂಚಾರ ಎಂಬುದರ ಮಾರ್ಗಸೂಚಿ ಸಂಜೆ ಹೊರಡಿಸುತ್ತೆವೆ| ಕೊರೋನಾ ಪಾಸಿಟಿವ್ ಹೆಚ್ಚಿರುವ ತಾಲೂಕುಗಳಿಗೆ ಬಸ್ ಸಂಚಾರ ಇರೋದಿಲ್ಲ|
ಬೆಂಗಳೂರು(ಮೇ.18): ಮೇ. 31 ರವೆಗೆ ಲಾಕ್‌ಡೌನ್ ಮುಂದುವರೆಯಲಿದೆ. ಅಂತರ್ ಜಿಲ್ಲೆಗಳಿಗೆ ನಾಳೆಯಿಂದ(ಮೇ.19) ರಿಂದ ಕೆಎಸ್‌ಆರ್‌ಟಿಸಿ ಸೀಮಿತ ಬಸ್ ಸಂಚಾರ ನಡೆಯಲಿದೆ. ಆದರೆ, ಅಂತರ್ ರಾಜ್ಯ ಹಾಗೂ ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು(ಸೋಮವಾರ) ನಾಲ್ಕನೇ ಹಂತದ ಲಾಕ್‌ಡೌನ್ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ.
ಇನ್ನು ಅಂತರ್ ಜಿಲ್ಲಾ ಪ್ರಯಾಣಕ್ಕೆ ಅಗತ್ಯವಿಲ್ಲ ಪಾಸ್?
ಬಳಿಕ ಮಾಧ್ಯಮದರಿಗೆ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ, ನಾಳೆಯಿಂದ(ಮಂಗಳವಾರ) 200 ಬಸ್‌ಗಳನ್ನ ಬಿಡುತ್ತೇವೆ. ಅಗತ್ಯ ಬಿದ್ದರೆ ಹೆಚ್ಚಿನ ಬಸ್ ಸೇವೆ ಕಲ್ಪಿಸುತ್ತೇವೆ. ಎಲ್ಲ ಜಿಲ್ಲೆಗಳು, ತಾಲುಕೂಗಳಿಗೆ ಬಸ್ ಸಂಪರ್ಕ ಇರುವುದಿಲ್ಲ, ಯಾವ ಜಿಲ್ಲೆಗಳಿಗೆ ಬಸ್ ಸಂಚಾರ ಎಂಬುದರ ಮಾರ್ಗಸೂಚಿ ಸಂಜೆ ಹೊರಡಿಸುತ್ತೆವೆ. ಕೊರೋನಾ ಪಾಸಿಟಿವ್ ಹೆಚ್ಚಿರುವ ತಾಲೂಕುಗಳಿಗೆ ಬಸ್ ಸಂಚಾರ ಇರೋದಿಲ್ಲ. ರೆಡ್ ಝೋನ್, ಕಂಟೇನ್ಮಂಟ್ ಝೋನ್ ಬಿಟ್ಟು ನಾಳೆಯಿಂದ ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಿದೆ ಎಂದು ಹೇಳಿದ್ದಾರೆ.
ಪ್ರತಿ ಬಸ್‌ನಲ್ಲಿ 30 ಜನರು ಮಾತ್ರ ಪ್ರಯಾಣಿಸಬಹುದಾಗಿದೆ. ಆದರೆ, ಬಸ್ ಪ್ರಯಾಣ ದರ ಏರಿಕೆ ಮಾಡುವುದಿಲ್ಲ, ಇದರಿಂದಾಗುವ ನಷ್ಟವನ್ನ ರಾಜ್ಯ ಸರ್ಕಾರವೇ ಭರಿಸಲಿದೆ. ಖಾಸಗಿ ವಾಹನಗಳು ಸಂಚಾರ ಮಾಡಬಹುದು ಎಂದು ತಿಳಿಸಿದ್ದಾರೆ.
ಜನರು ಮಾಸ್ಕ್ ಹಾಕಿಕೊಂಡೇ ಓಡಾಡಬೇಕು. ಮಾಸ್ಕ್ ಧರಿಸದಿದ್ದರೆ ದಂಡ ಬೀಳಲಿದೆ.ಮಾಸ್ಕ್ ಧರಿಸುವುದನ್ನ ಕಡ್ಡಾಯ ಮಾಡಿದೆ. ಹೊರ ರಾಜ್ಯಗಳಿಂದ ಬರುವವರಿಗ ಸಾಂಸ್ಥಿಕ ಕೊರೇಂಟೈನ್ ಮಾಡಲು ನಿರ್ಧರಿಸಲಾಗಿದೆ. ಅನಿವಾರ್ಯತೆ ಬಿಟ್ಟು ಬೇರೆ ಕಾರಣಗಳಿಗೆ ಹೊರ ರಾಜ್ಯದಿಂದ ಜನರನ್ನ ರಾಜ್ಯದ ಒಳಗೆ ಬರಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಹಾಟ್ ಡ್ರಿಂಕ್ಸ್‌ಗೆ ಫುಲ್ ಡಿಮ್ಯಾಂಡ್, ಬಿಯರ್ ಕೊಳ್ಳಲು ನಿರುತ್ಸಾಹ..!
ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್ ಬಿಟ್ಟು ಎಲ್ಲ ರೀತಿಯ ಅಂಗಡಿಗಳನ್ನ ತೆರೆಯಬಹುದಾಗಿದೆ. ಹೊರ ಗಡೆಯಿಂದ ಬರುವ ರೈಲುಗಳಿಗೆ ಅವಕಾಶವಿರುವುದಿಲ್ಲ, ರಾಜ್ಯದೊಳಗೆ ರೈಲುಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರತಿ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಇರುತ್ತದೆ. ಇದು ಲಾಕ್‌ಡೌನ್ 4ರ ಹೊಸ ನಿಮಯವಾಗಿದೆ. ಪಾರ್ಕ್‌ಗಳಲ್ಲಿ ಬೆಳಿಗ್ಗೆ 7 ರಿಂದ 9 ಸಂಜೆ 5 ರಿಂದ 7 ರ ವರೆಗೆ ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಂಪೂರ್ಣ ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇರೆ ಎಲ್ಲ ತಾಲೂಕುಗಳಲ್ಲಿ ಸಂಚರಿಸಬಹುದು. ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಮಾತ್ರ ಸಂಚರಿಸಬಹುದು. ಮ್ಯಾಕ್ಸ್ ಕ್ಯಾಬ್ ಗಳಲ್ಲಿ ಡ್ರೈವರ್ ಸೇರಿ ಮೂರು ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಬಹುದಾಗಿದೆ. ಜಿಮ್‌ಗಳನ್ನ ತೆರೆಯಲು ಅನುಮತಿ ನೀಡಿಲ್ಲ, ಸ್ಪೋರ್ಟ್ಸ್ ಕ್ಲಬ್ ಗಳನ್ಮ ತೆರೆಯಬಹುದಾಗಿದೆ. ಇದರ ಜೊತೆಗೆ ನಮ್ಮ ಮೆಟ್ರೋ ಸಂಚಾರಕ್ಕೆ ನಿರ್ಭಂಧ ಮುಂದುವರಿಕೆ ಹೇರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿವಾಹ ಸಮಾರಂಭಗಳಲ್ಲಿ 50 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಕಂಟೈನ್ಮೆಂಟ್ ಝೋನ್‌ನಲ್ಲಿ ಕಠಿಣ ಕಾನೂನು ಕ್ರಮಗಳಿರುತ್ತವೆ. ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಮುಂದುವರೆಯಲಿದೆ. ಮೇ. 31 ರವರೆಗೆ ರಾಜ್ಯದಲ್ಲಿ ಜನರ ಸಹಕಾರ ಗಮನಿಸುತ್ತೇವೆ. ರಾಜ್ಯಗಳಿಗೆ ಸಂಪೂರ್ಣ ಅಧಿಕಾರ ಇರುವುದರಿಂದಾಗಿ ಸಮಸ್ಯೆಯಾದಲ್ಲಿ ನಿಯಮಾವಳಿ ಬದಲಿಸುತ್ತೇವೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ರಾಜ್ಯವ್ಯಾಪಿ ಕಫ್ಯೂ೯ ಜಾರಿಯಲ್ಲಿರುತ್ತದೆ. ಜನಸಂಚಾರಕ್ಕೆ ಅವಕಾಶವಿರುವುದಿಲ್ಲ, ಭಾನುವಾರ ಯಾವುದೇ ವಹಿವಾಟಿಗೂ ಅವಕಾಶವಿಲ್ಲ, ಸಂಪೂರ್ವವಾಗಿ ಲಾಕ್‌ಡೌನ್ ಅನ್ವಯವಿರುತ್ತದೆ ಎಂದು ಹೇಳಿದ್ದಾರೆ.