
ಬೆಂಗಳೂರು(ಮೇ.18): ಮಾರಕ ಕೊರೋನಾ ವೈರಸ್‌ಅನ್ನು ಹೊಡೆದೋಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ, ರಾಜಕೀಯ ಸಭೆ ನಡೆಸದಂತೆ ಸರ್ಕಾರ ಆದೇಶಿಸಿದೆ.
ಆದರೆ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ಮುಖಂಡ ಶೆಟ್ಟಿಹಳ್ಳಿ ಸುರೇಶ್ ಅವರ ಬೆಂಬಲಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಭೆ ಸಮಾರಂಭ ಮಾಡಿದ ಘಟನೆ ನಿನ್ನೆ(ಭಾನುವಾರ) ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಬಿಜೆಪಿ ನಾಯಕರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಇನ್ನು ಅಂತರ್ ಜಿಲ್ಲಾ ಪ್ರಯಾಣಕ್ಕೆ ಅಗತ್ಯವಿಲ್ಲ ಪಾಸ್?
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಜನರಿಗೆ ಬಿಜೆಪಿ ಮುಖಂಡ ಶೆಟ್ಟಿಹಳ್ಳಿ ಸುರೇಶ್ ಅವರು ದಿನಸಿ ಕಿಟ್ ಹಂಚಿದ್ದಾರೆ. ಈ ವೇಳೆ ವೇದಿಕೆ ಮೇಲೆ ಬಿಜೆಪಿ ಮುಖಂಡ ಸುರೇಶ್ ಅವರಿಗೆ ಸ್ಥಳೀಯ ನಾಯಕರಿಗೆ ಪುಷ್ಪಮಳೆ ಸುರಿದಿದ್ದಾರೆ. ಈ ಸಂದರ್ಭದಲ್ಲಿ ಯಾರೂ ಕೂಡ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಿಲ್ಲ ಜೊತೆಗೆ ಮಾಸ್ಕ್ ಕೂಡ ಧರಿಸಿಲ್ಲ.
ಶೆಟ್ಟಿಹಳ್ಳಿ ಸುರೇಶ್ ಅವರಿಗೆ ಬೆಂಬಲಿಗರು ಹಾರ ತುರಾಯಿ, ಹೂವಿನ ಮಳೆ ಸುರಿಮಳೆಗೈದು ಸಂಭ್ರಮಪಟ್ಟಿದ್ದಾರೆ. ತಿಳಿದವರೆ ಹೀಗೆ ಮಾಡಿದ್ರೆ ಉಳಿದವರ ಕತೆ ಏನು ಎಂದು ಸ್ಥಳಿಯರು ಪ್ರಶ್ನಿಸುತ್ತಿದ್ದಾರೆ. ಸಮಾರಂಭದಲ್ಲಿ ದಾಸರಹಳ್ಳಿಯ ಜನರಲ್ ಸೆಕ್ರೆಟರಿ ವಿನೋದ್, ಶೆಟ್ಟಿಹಳ್ಳಿ ಬಿಜೆಪಿ ಮುಖಂಡ ಸುರೇಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.