ಆ ಆಸ್ಪತ್ರೆ ಚಾಮರಾಜನಗರ ಜಿಲ್ಲೆಯ ಬಡವರಿಗೆ, ಮಧ್ಯಮ ವರ್ಗದವರ ಪಾಲಿಗೆ ಆಶಾಕಿರಣ. ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಾಣ ಮಾಡಿದ್ರೂ ಆಸ್ಪತ್ರೆಯಲ್ಲಿ ನರ್ಸ್‌ಗಳ ಕೊರತೆಯಿದೆ.
ವರದಿ: ಪುಟ್ಟರಾಜು.ಆರ್.ಸಿ.ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಮೇ.17): ಆ ಆಸ್ಪತ್ರೆ (Goverment Hospital) ಚಾಮರಾಜನಗರ (Chamarajanagar) ಜಿಲ್ಲೆಯ ಬಡವರಿಗೆ, ಮಧ್ಯಮ ವರ್ಗದವರ ಪಾಲಿಗೆ ಆಶಾಕಿರಣ. ಸರ್ಕಾರ (Goverment) ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಾಣ ಮಾಡಿದ್ರೂ ಆಸ್ಪತ್ರೆಯಲ್ಲಿ ನರ್ಸ್‌ಗಳ (Nurse) ಕೊರತೆಯಿದೆ. ಈ ಹಿನ್ನೆಲೆ ಶಸ್ತ್ರಚಿಕಿತ್ಸೆಗಳು (Surgeries) ಸ್ಥಗಿತಗೊಂಡಿವೆ. ಇದರಿಂದ ಬಡ ರೋಗಿಗಳು ಪರದಾಡುವಂತಾಗಿದೆ. ಶಸ್ತ್ರ ಚಿಕಿತ್ಸೆಗೆ ಕಾಯುವ ಸ್ಥಿತಿಯಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
undefined
ಚಾಮರಾಜನಗರದಲ್ಲಿ ಹೊಸದಾಗಿ ಪ್ರಾರಂಭವಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್‌ಗಳ ಕೊರತೆಯಿದ್ದು, ಆಸ್ಪತ್ರೆಗೆ ಬರುವಂತ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಸೌಲಭ್ಯ ಸಿಗದೆ ಪರದಾಡುವಂತಾಗಿದೆ. ಹಳೆ ಆಸ್ಪತ್ರೆ ಇದ್ದಾಗ ಯಾವುದೆ ರೀತಿಯ ಸೌಲಭ್ಯಗಳಿಲ್ಲದೆ ವಂಚಿತರಾಗುತ್ತಿದ್ದೆವು. ಈಗ ನವನವೀನ ಮಾದರಿಯ ಹೊಸ ಆಸ್ಪತ್ರೆಗೆ ಬಂದರು ಗೋಳು ತಪ್ಪಿಲ್ಲ ಎಂದು ಹಿಡಿ ಶಾಪ ಹಾಕುವಂತೆ ಆಗಿದೆ. ನರ್ಸ್ ಸಮಸ್ಯೆ ಮುಂದೆ ಇಟ್ಟುಕೊಂಡು ವೈದ್ಯರು ಶಸ್ತ್ರ ಚಿಕಿತ್ಸೆ ಮುಂದೂಡುತ್ತಿದ್ದು, 750 ಬೆಡ್ ಆಸ್ಪತ್ರೆಗೆ ಕೇವಲ 123 ಮಂದಿ ನರ್ಸ್ ಇದ್ದು, ಇದು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಸಂಭ್ರಮದ ರಥೋತ್ಸವದ ನಡುವೆ ಅವಘಡ, ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವು
200ಕ್ಕೂ ಹೆಚ್ಚು ನರ್ಸ್ ನೇಮಕಕ್ಕೆ ಸರ್ಕಾರಕ್ಕೆ ಈಗಾಗಲೆ ಪ್ರಸ್ತಾಪ ಸಲ್ಲಿಕೆಯಾಗಿದ್ರೂ ಸರ್ಕಾರದಿಂದ ಯಾವುದೆ ರೀತಿಯ ಅನುಮತಿ ದೊರೆತಿಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೌದು! ಇದು ಸಿಮ್ಸ್ ಆಸ್ಪತ್ರೆ. ಗಡಿ ಜಿಲ್ಲೆ ಚಾಮರಾಜನಗರದ ಸರ್ಕಾರಿ ಜಿಲ್ಲಾಸ್ಪತ್ರೆ. ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಅನಾರೋಗ್ಯ ಪೀಡಿತರು ಈ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಹರಿದುಬರುತ್ತಾರೆ. ಸಣ್ಣ ಪುಟ್ಟ ಚಿಕಿತ್ಸೆಯಿಂದ ಹಿಡಿದು ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತವೆ. ಅಂದಾಜು ಪ್ರತಿದಿನ 40ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು.
ಆದ್ರೆ ಸದ್ಯ ನರ್ಸ್ ಮತ್ತು ಸಿಬ್ಬಂದಿಗಳ ಕೊರತೆಯಿಂದ ರೋಗಿಗಳ ಪಾಡು ಹೇಳತಿರದಾಗಿದೆ. ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಸರಿಯಾಗಿದೆ. ಆದ್ರೆ ನರ್ಸ್‌ಗಳ ಸಂಖ್ಯೆ ಅರ್ಧದಷ್ಟು ಇಲ್ಲ. ಹೀಗಾಗಿ ರೋಗಿಗಳು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಹತ್ತು ದಿನಗಳಾದರೂ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇನ್ನೂ ದೂರದ ಮೈಸೂರು ಅಥವಾ ತಮಿಳುನಾಡಿಗೆ ರೋಗಿಗಳು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳು ಇಲ್ಲದಿರುವುದರಿಂದ ನಮಗೆ ತೊಂದರೆಯುಂಟಾಗುತ್ತಿದೆ ಎಂಬುದು ರೋಗಿಗಳ ಆರೋಪ. ಸದ್ಯ ನರ್ಸ್‌ಗಳ ಕೊರತೆಯಿಂದ ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Chamarajanagar: ಕೇರಳದಲ್ಲಿ ಟೊಮ್ಯಾಟೋ ಜ್ವರ: ಗಡಿಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ!
ಇದರಿಂದ ಬಡರೋಗಿಗಳು ಪರದಾಡುತ್ತಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. 200ಕ್ಕೂ ಹೆಚ್ಚು ನರ್ಸ್‌ಗಳ ಅವಶ್ಯಕತೆ ಆಸ್ಪತ್ರೆಗೆ ಇದೆ. ಹೀಗಾಗಿ ನಾವು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸರ್ಕಾರದ ಮಟ್ಟದಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ. ಇನ್ನು ಕೇಲವೇ ದಿನಗಳಲ್ಲಿ ನರ್ಸ್‌ಗಳ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂಬುದು ಅಧಿಕಾರಿಗಳ ಮಾತು. ಒಟ್ಟಾರೆ 175 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಆಸ್ಪತ್ರೆಯಲ್ಲಿ ನರ್ಸ್‌ಗಳ ಕೊರತೆ ಇರುವುದು ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯ ಸಿಬ್ಬಂದಿ ನೇಮಕ ಮಾಡಿ ಬಡಜನರ ತೊಂದರೆ ದೂರ ಮಾಡಲಿ ಎಂಬುದೇ ಎಲ್ಲರ ಆಶಯ.