Kolar: ಡ್ರೋನ್ ಮೂಲಕ ಔಷಧಿ ಸಿಂಪಡಣೆ: ಆಧುನಿಕ ತಂತ್ರಜ್ಞಾನಕ್ಕೆ ಕೃಷಿ ಇಲಾಖೆಯಿಂದ ಒತ್ತು!

By Govindaraj S  |  First Published May 16, 2022, 11:28 PM IST

ಅದು ಕೇಂದ್ರ ಸರ್ಕಾರದಿಂದ ರೈತರಿಗಾಗಿ ಜಾರಿಗೆ ತಂದಿರುವ ಹೊಸ ಕೃಷಿ ತಂತ್ರಜ್ಞಾನ. ಖರೀದಿಸಲು ಕೊಂಚ ದುಬಾರಿಯಾದ್ರು ಸಹ ಸರ್ಕಾರದಿಂದ ಶೇ. 90ರಷ್ಟು ಸಬ್ಸಿಡಿ ಸಹ ನೀಡಲಾಗ್ತಿದೆ. ರೈತ ಇದನ್ನು ಅಳವಡಿಸಿಕೊಂಡರೆ ಆಗುವ ಲಾಭ ಸಹ ಬಹಳಷ್ಟಿದೆ. 


ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಮೇ.16): ಅದು ಕೇಂದ್ರ ಸರ್ಕಾರದಿಂದ (Central Government) ರೈತರಿಗಾಗಿ (Farmers) ಜಾರಿಗೆ ತಂದಿರುವ ಹೊಸ ಕೃಷಿ ತಂತ್ರಜ್ಞಾನ (Agricultural Technology). ಖರೀದಿಸಲು ಕೊಂಚ ದುಬಾರಿಯಾದ್ರು ಸಹ ಸರ್ಕಾರದಿಂದ ಶೇ. 90ರಷ್ಟು ಸಬ್ಸಿಡಿ ಸಹ ನೀಡಲಾಗ್ತಿದೆ. ರೈತ ಇದನ್ನು ಅಳವಡಿಸಿಕೊಂಡರೆ ಆಗುವ ಲಾಭ ಸಹ ಬಹಳಷ್ಟಿದೆ. ಯಾವುದು ಹೊಸ ತಂತ್ರಜ್ಞಾನ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ. 

Tap to resize

Latest Videos

ಹೊಲಗಳ ಮೇಲೆ ಹಾರಟ ಮಾಡುತ್ತಿರುವ ಡ್ರೋನ್ (Drone) ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವ ರೈತರು. ಹೊಸ ತಂತ್ರಜ್ಜಾನದ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತಿರುವ ನುರಿತು ತಂತ್ರಜ್ಞರು. ಈ ರೀತಿ ಕೇಂದ್ರದ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುತ್ತಾ ಡ್ರೋನ್ ಹಾರಟ ಮಾಡ್ತಿರೊದು ಕೋಲಾರ (Kolar) ತಾಲೂಕಿನ ತೂರಾಂಡಹಳ್ಳಿ ಗ್ರಾಮದ ರೈತ ರವಿ ಎಂಬುವವರ ತೋಟದಲ್ಲಿ. ಹೌದು! ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಕೆಲಸವನ್ನು ಬಿಟ್ಟು ಐಟಿ-ಬಿಟಿ ಕಂಪನಿಯವರು ಸೇರಿದಂತೆ ವ್ಯವಸಾಯದ ಕಡೆ ಹೆಚ್ಚಿನ ಆಸಕ್ತಿ ತೋರುತ್ತಾ, ತಮ್ಮ ಹಳ್ಳಿಗಳಿಗೆ ಬಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ತಿದ್ದಾರೆ.

Kolar: ಕೆರೆಗಳ ನಾಡಿಗೆ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಯ ಭಾಗ್ಯ!

ಆದರೆ ಕೆಲವೊಮ್ಮೆ ಅದೆಷ್ಟೇ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡಿದ್ರು ಸಹ ಕೂಲಿಗಾರರ ಸಮಸ್ಯೆ ಮಾತ್ರ ತಪ್ಪಿದಲ್ಲ, ತೀರ ಅನಿವಾರ್ಯ ಇದ್ದಾಗ ಕೂಲಿಗಾರರು ಕೈಕೊಟ್ಟು ನಷ್ಟ ಅನುಭವಿಸಿರುವ ಉದಾಹರಣೆ ಸಹ ಇದೆ. ಅದರಲ್ಲೂ ಕೆಲವೊಂದು ಬೆಳೆಗಳಿಗೆ ದಿನಬಿಟ್ಟು ದಿನ ಔಷಧಿ ಸಿಂಪಡೆ ಮಾಡಬೇಕಾಗುತ್ತೆ. ಈ ವೇಳೆ ಕೂಲಿಗಾರರ ಅನಿವಾರ್ಯತೆ ಹೆಚ್ಚಾಗಿರುತ್ತೆ. ಹೀಗಾಗಿ ಅಂತವರಿಗೋಸ್ಕರ ಕೃಷಿ ಇಲಾಖೆಯ ಅಧಿಕಾರಿಗಳೊಟ್ಟಿಗೆ ಬಂದಿದ್ದ ರಾಷ್ಟ್ರೀಯ ಕೆಮಿಕಲ್ ಆಂಡ್ ಫಟಿ೯ಲೈಸರ್ಸ್ ಕಂಪನಿಯವರು ನುರಿತ ತಂತ್ರಜ್ಜರ ಮೂಲಕ ಕೋಲಾರದ ತೂರಾಂಡಹಳ್ಳಿಯಲ್ಲಿ ರೈತರಿಗೆ ಡ್ರೋನ್ ತಂತ್ರಜ್ಞಾನದ ಬಗ್ಗೆ ಪರಿಚಯ ಮಾಡಿಕೊಟ್ಟರು.

ಡ್ರೋನ್ ತಂತ್ರಜ್ಞಾನ ಹೊಸ ಪ್ರಯೋಗವಾಗಿದ್ದು ರೈತರಿಗೆ. ಇದರಿಂದ ಬಹಳಷ್ಟು ಅನುಕೂಲವಾಗಲಿದೆ. ಕೃಷಿಯಲ್ಲಿ ಬೆಳೆಗಳಿಗೆ ಕೀಟಗಳ ಬಾಧೆ ತಡೆಯಲು ಔಷಧಿ ಸಿಂಪಡಣೆ, ರಸಗೊಬ್ಬರ ಸಿಂಪಡಣೆ ಬಹಳಷ್ಟು ಮುಖ್ಯ. ಆದ್ರೆ ಕೆಲವೊಮ್ಮೆ ಕೂಲಿಗಾರರ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ಸರಿಯಾದ ಸಮಯಕ್ಕೆ ಔಷಧಿ ಸಿಂಪಡಣೆ ಮಾಡೋದಕ್ಕೆ ಆಗೊದಿಲ್ಲ. ಅಂತಹವರು ಡ್ರೋನ್ ತಂತ್ರಜ್ಜಾನ ಬಳಸಿಕೊಂಡ್ರೆ ಅನುಕೂಲವಾಗಲಿದೆ ಅನ್ನೋದು ಕೇಂದ್ರ ಸರ್ಕಾರದ ಅಭಿಪ್ರಾಯ. ಡ್ರೋನ್ ತಂತ್ರಜ್ಞಾನದಿಂದ ಔಷಧಿ ಸಿಂಪಡಣೆ ವೇಳೆ ಎಲ್ಲೂ ಸೋರಿಕೆ ಆಗೋದೆ ಸರಿಯಾಗಿ ಬೆಳೆಗಳ ಮೇಲೆ ಚಿಮ್ಮುತ್ತದೆ. 

ಮೊದಲು ಒಂದು ಎಕರೆಗೆ 700 ಲೀಟರ್‌ನಷ್ಟು ಔಷಧಿ ಸಿಂಪಡಣೆ ಮಾಡಬೇಕಾಗಿತ್ತು. ಆದ್ರೆ ಡ್ರೋನ್ ತಂತ್ರಜ್ಞಾನ ಬಳಿಸಿಕೊಂಡ್ರೆ ಎಲ್ಲೂ ಸೋರಿಕೆ ಆಗದೇ ಕೇವಲ 8 ಲೀಟರ್‌ನಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಣೆ ಮಾಡಬಹುದು. ಮುಂದಿನ ದಿನಗಳಲ್ಲಿ ರಸಗೊಬ್ಬರಗಳು ಸಹ ದ್ರವ ರೂಪದಲ್ಲಿ ಬರಲಿದ್ದು, ಡ್ರೋನ್ ತಂತ್ರಜ್ಜಾನ ಸಹಕಾರಿಯಾಗಲಿದೆ. ಇನ್ನು ಬ್ಯಾಟರಿ ಮೂಲಕ ಕೆಲಸ ನಿರ್ವಹಿಸುವ ಈ ಡ್ರೋನ್‌ನ ಬೆಲೆ 8 ಲಕ್ಷ ರೂಪಾಯಿ. ರೈತರಿಗೆ ಈ ಹಣವನ್ನು ಭರಿಸಲು ಕಷ್ವವಾಗಲಿದೆ ಅಂತ ಮನಗಂಡು ಕೇಂದ್ರ ಸರ್ಕಾರದಿಂದ ಶೇ 90ರಷ್ಟು ಸಬ್ಸಿಡಿ ನೀಡಲಾಗ್ತಿದೆ. 8 ಲಕ್ಷ ಬೆಲೆಯ ಈ ಡ್ರೋನ್‌ಗೆ ಕೇಂದ್ರ ಸಕಾ೯ರದಿಂದ 4 ಲಕ್ಷ ಸಬ್ಸಿಡಿ, 3 ಲಕ್ಷ ರೈತ ಸಂಪಕ೯ ಕೇಂದ್ರಿಂದ ಸಬ್ಸಿಡಿ ನೀಡಲಾಗ್ತಿದೆ.

ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕು!

ಬಾಕಿ ಒಂದು ಲಕ್ಷ ಹಣವನ್ನು ಭರಿಸಿದ್ರೆ ಸಾಕು ಹೊಸ ಡ್ರೋನ್ ತಂತ್ರಜ್ಜಾನವನ್ನು ರೈತರು ಅಳವಡಿಸಿಕೊಳ್ಳಬಹುದು. ಇನ್ನು ಕೆಲವರು ದುರುದ್ದೇಶದಿಂದ ಡ್ರೋನ್ ಬಳಸಿಕೊಂಡು ಬೇರೆ ಜಮೀನಲ್ಲಿ ಅನವಶ್ಯಕ ಕೀಟ ನಾಶಕಗಳನ್ನು ಸಿಂಪಡಿಸಿ ಬೆಳೆ ನಾಶ ಮಾಡಬಹುದು ಅನ್ನೋ ಉದ್ದೇಶದಿಂದ,ಡ್ರೋನ್ ಬಳಸುವವರು ಸ್ಥಳೀಯ ಪೊಲೀಸರ ಅನುಮತಿ ಪಡೆದು ಡ್ರೋನ್ ಬಳಸಬೇಕು ಅಂತ ನಿಬ್ಬಂದನೆ ಸಹ ಹಾಕಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರದಿಂದ ಡ್ರೋನ್ ತಂತ್ರಜ್ಞಾನ ಪರಿಚಯ ಮಾಡಲಾಗ್ತಿದ್ದು, ಈ ಹೊಸ ತಂತ್ರಜ್ಜಾನವನ್ನು ರೈತರು ಹೇಗೆ ಸ್ವಾಗತಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

click me!