Chikkamagaluru Communal Harmony: ಧರ್ಮ ಸಂಘರ್ಷದ ಕಿಚ್ಚಿನ ನಡುವೆ ಮಲೆನಾಡಲ್ಲಿ ಸಾಮರಸ್ಯದ ಹೆಜ್ಜೆ

By Suvarna News  |  First Published Apr 6, 2022, 2:55 PM IST
  • 130 ವರ್ಷಗಳ ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ 
  •  ವಿವಾದಿತ ಜಾಗದಲ್ಲಿ ನೂತನ ಪಟ್ಟಣ ಪಂಚಾಯಿತಿ ಮಳಿಗೆಗಳು 
  • ಚರ್ಚ್ ನ ಪಾದ್ರಿಗಳ ಸಮ್ಮುಖದಲ್ಲಿ ಪೂಜೆ ಮಾಡಿ ಶಿಲುಭೆ ಸ್ಥಳಾಂತರ

ವರದಿ : ಆಲ್ದೂರು‌ ಕಿರಣ್  ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಎ.6): ಇಡೀ ರಾಜ್ಯವೇ ಕೋಮು ದಳ್ಳೂರಿಯಲ್ಲಿ ಹೊತ್ತಿ ಉರಿಯುತ್ತಿದೆ. ಆದರೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನಲ್ಲಿ 130 ವರ್ಷಗಳಿಂದ ತೀವ್ರ ವಿವಾದ ಹುಟ್ಟಿಸಿದ್ದ ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿದ್ದ ಕ್ರೈಸ್ತ ಸಮುದಾಯದ (Christian community) ಸಮಾಧಿಯನ್ನ (grave ) ಕ್ರೈಸ್ತರು ಶಾಂತಿಯುತವಾಗಿ ಬಗೆಹರಿಸಿಕೊಂಡಿದ್ದಾರೆ.

Latest Videos

undefined

ಮೂಡಿಗೆರೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗಲ್ಲಿದ್ದ ಕ್ರೈಸ್ತ ಸಮುದಾಯ ಶಿಲುಬೆಯನ್ನ ಸಮುದಾಯದ ಮುಖಂಡರು ಹಾಗೂ ಪಟ್ಟಣ ಪಂಚಾಯಿತಿ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಂಡು ಸ್ಥಳಾಂತರಿಸಿದೆ. 1884ರಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸ್ಯಾಮುಯಲ್ ಎಂಬ ವ್ಯಕ್ತಿ ಮೃತಪಟ್ಟಿದ್ದರು.

ಸ್ಯಾಮುಯಲ್, ಬಡಜನರ ಕಷ್ಟಕ್ಕೆ ಮರುಗುತ್ತಿದ್ದು, ಸದಾ ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೊಡಗಿದ್ದರು ಎಂಬ ಕಾರಣಕ್ಕೆ ಸ್ಥಳಿಯ ಕ್ರೈಸ್ತ ಸಮುದಾಯ ಬಸ್ ನಿಲ್ದಾಣದ ಮುಂಭಾಗದ ಜಾಗದಲ್ಲೇ ಅವರ ಅಂತ್ಯ ಸಂಸ್ಕಾರ ಮಾಡಿತ್ತು. ಅಂದಿನಿಂದಲೂ ಈ ಜಾಗ ವಿವಾದದಿಂದ ಕೂಡಿತ್ತು. ಹಲವು ಭಾರೀ ತೆರೆವುಗೊಳಿಸುವ ಪ್ರಕ್ರಿಯೆಗೆ ಪಟ್ಟಣ ಪಂಚಾಯಿತಿ ಮುಂದಾಗಿತ್ತು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು.

BENGALURU UNIVERSITY ಪರೀಕ್ಷೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬೆಂಗಳೂರು ವಿವಿ!

ಪಟ್ಟಣ ಪಂಚಾಯಿತಿ ನಾಲ್ಕೈದು ದಶಕಗಳಿಂದ ಮಳಿಗೆ ನಿರ್ಮಿಸಲು ಈ ವಿವಾದಿತ ಶಿಲುಬೆಯನ್ನ ತೆರವುಗೊಳಿಸಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಶಿಲುಬೆ ತೆರವುಗೊಳಿಸಲು ಕ್ರೈಸ್ತ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಇಂದು ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿರೋ ಕ್ರೈಸ್ತ ಸಮುದಾಯ ಶಾಂತಿಯುತವಾಗಿ ಶಿಲುಬೆಯನ್ನ ಸ್ಥಳಾಂತರಿಸಿದೆ.ಚರ್ಚ್ ನ ಪಾದ್ರಿಗಳ ಸಮ್ಮುಖದಲ್ಲಿ ಕ್ರೈಸ್ತ ಸಮುದಾಯದವರು ಪೂಜೆ ಮಾಡಿ ಶಿಲುಬೆಯನ್ನ ಸ್ಥಳಾಂತರಿಸಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿದ್ದ ಶಿಲುಬೆಯನ್ನ ಸ್ಥಳಾಂತರಿಸಿ ಕ್ರೈಸ್ತರ ಸ್ಮಶಾನದಲ್ಲಿ ಪೂಜೆ ಮಾಡಿ ಮತ್ತೊಮ್ಮೆ ಸಮಾಧಿ ಮಾಡಿದ್ದಾರೆ.

ಸುಮಾರು ಎರಡು ಗಂಟೆ ಕಾರ್ಯಚರಣೆ ನಡೆಸಿದರೂ ಆ ಜಾಗದಲ್ಲಿ ಯಾವುದೇ ಕಳೆಬರಹ ಸಿಗಲಿಲ್ಲ. 130 ವರ್ಷವಾದ ಕಾರಣ ನೆಲದ ಒಳಭಾಗದಲ್ಲಿ ಏನೂ ಇರಲಿಲ್ಲ. ಜೆಸಿಬಿಯಲ್ಲಿ ಗುಂಡಿ ತೆಗೆಸಿ ಹುಡುಕಿದರೂ ಯಾವುದೇ ಕುರುಹು ಸಿಗಲಿಲ್ಲ.  ಹಾಗಾಗಿ, ಕ್ರೈಸ್ತರು ಸಮಾಧಿಯ ಮಣ್ಣನ್ನೇ ತೆಗೆದುಕೊಂಡು ಹೋಗಿ, ಮಣ್ಣಿನ ಜೊತೆ ಸಮಾಧಿ ಅಕ್ಕಪಕ್ಕದಲ್ಲಿದ್ದ ಕಲ್ಲು ಹಾಗೂ ಇತರೆ ವಸ್ತುಗಳನ್ನ ಮತ್ತೆ ಸಂಪ್ರದಾಯಬದ್ಧವಾಗಿ ಮಣ್ಣು ಮಾಡಿ ಅದರ ಮೇಲೆ ಶಿಲುಬೆಯನ್ನು ಮತ್ತೆ ಪುನರ್ ಪ್ರತಿಷ್ಠಾಪಿಸಿದ್ದಾರೆ.

Chamarajanagara Quarry Tragedy ದುರಂತ ನಡೆದು ತಿಂಗಳಾದರೂ ಗುತ್ತಿಗೆ ಪಡೆದಿದ್ದ ಹಕೀಂ ಬಂಧನವಿಲ್ಲ

ವಿವಾದಿತ ಜಾಗದಲ್ಲಿ ನೂತನ ಪಟ್ಟಣ ಪಂಚಾಯಿತಿ ಮಳಿಗೆಗಳು: ವಿವಾದಿತ ಜಾಗದಲ್ಲಿ ಈಗ ಪಟ್ಟಣ ಪಂಚಾಯಿತಿ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದೆ. ಹೆಚ್ಚು-ಕಡಿಮೆ ಶತಮಾನಗಳಿಂದ ವಿವಾದದಲ್ಲಿದ್ದ ಸ್ಥಳವನ್ನ ಆರು ತಿಂಗಳ ಹಿಂದೆ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾದ ಧರ್ಮಪಾಲ್ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದರ ಜೊತೆಗೆ ಮಾತುಕತೆ ನಡೆಸಿ ಶತಮಾನದ ಸಮಸ್ಯೆಯನ್ನ ಶಾಂತಿಯುತವಾಗಿ ಬಗೆಹರಿಸಿದ್ದಾರೆ. ಅಧ್ಯಕ್ಷರು ಈ ಕಾರ್ಯಕ್ಕೆ ಮೂಡಿಗೆರೆ ಪಟ್ಟಣದ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಮಲೆನಾಡಿನ ಆ ವಿವಾದಿತ ಸ್ಥಳ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಪಟ್ಟಣ ಪಂಚಾಯಿತಿ ಮತ್ತು ಕ್ರೈಸ್ತ ಸಮುದಾಯದವರು ಒಗ್ಗಟ್ಟಿನ ಮಂತ್ರ ಜಪಿಸಿ ಶಾಂತಿಯುತವಾಗಿ ವಿವಾದವನ್ನು ಬಗ್ಗೆಹರಿಸಿದ್ದಾರೆ. 

click me!