ಸಾಧಿಸುವ ಛಲವಿದ್ದರೆ ಯಾವುದು ಅಡ್ಡಿ ಆಗುವುದಿಲ್ಲ ಎನ್ನುವುದಕ್ಕೆ ಈ ವಿದ್ಯಾರ್ಥಿನಿ ಸಾಕ್ಷಿ. ಹುಟ್ಟಿನಿಂದಲೂ ಅಂಧತ್ವವಿದ್ದರೂ ಅದನ್ನು ಮೆಟ್ಟಿನಿಂತು ಅದ್ಬುತ ಸಾಧನೆ ಮಾಡುವ ಮೂಲಕ ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತೆ ವಿದ್ಯಾರ್ಥಿನಿ ಮಾಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.06): ಸಾಧಿಸುವ ಛಲವಿದ್ದರೆ ಯಾವುದು ಅಡ್ಡಿ ಆಗುವುದಿಲ್ಲ ಎನ್ನುವುದಕ್ಕೆ ಈ ವಿದ್ಯಾರ್ಥಿನಿ ಸಾಕ್ಷಿ. ಹುಟ್ಟಿನಿಂದಲೂ ಅಂಧತ್ವವಿದ್ದರೂ ಅದನ್ನು ಮೆಟ್ಟಿನಿಂತು ಅದ್ಬುತ ಸಾಧನೆ ಮಾಡುವ ಮೂಲಕ ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತೆ ವಿದ್ಯಾರ್ಥಿನಿ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಏಕಲವ್ಯ ಪ್ರಶಸ್ತಿ (Eklavya Award) ಪಡೆದು ಕಾಫಿನಾಡಿಗೆ (Chikkamagaluru)ಕೀರ್ತಿ ತಂದಿದ್ದಾರೆ.
ಆಶಾಕಿರಣ ಪಾಠ ಶಾಲೆಗೆ ಮತ್ತೊಂದು ಪ್ರಶಸ್ತಿ: ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಬಡಾವಣೆಯಲ್ಲಿರುವ ಅಂಧ ಮಕ್ಕಳ (Blind Childrens) ಆಶಾಕಿರಣ ಪಾಠ ಶಾಲೆಯ (Ashakirana School) ವಿದ್ಯಾರ್ಥಿನಿ ವಿ.ರಾಧಾ (V Radha) ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಏಕಲವ್ಯ ಪ್ರಶಸ್ತಿ ಗಳಿಸಿದ್ದಾರೆ. ಇದರೊಂದಿಗೆ ಎರಡನೇ ಏಕಲವ್ಯ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಆಶಾಕಿರಣ ಶಾಲೆಯದ್ದಾಗಿದೆ. ಈ ಹಿಂದೆ ಇದೇ ಶಾಲೆ ವಿದ್ಯಾರ್ಥಿ ಜೆ.ಎಂ.ಶವಾದ್ ಕೂಡ ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದರು.
ಇದೀಗ ವಿ ರಾಧಾ ಕೂಡ ಪ್ರಶಸ್ತಿ ಪಡೆಯುವ ಮೂಲಕ ಆಶಾಕಿರಣ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತಿಹಿಡಿದ್ದಾರೆ. ರಾಧಾ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕರೆ ತಾಲ್ಲೂಕ್ ಭರಮಸಾಗರ ಸಮೀಪದ ಬೊಮ್ಮಸಂದ್ರದ ವೆಂಕಟೇಶ್ ಮತ್ತು ಸುಜಾತ ಅವರ ಪುತ್ರಿ ವಿ.ರಾಧ ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ದ್ವೀತಿಯ ಪಿಯುಸಿವರೆಗೂ ವ್ಯಾಸಂಗ ಮಾಡುತ್ತಿದ್ದು ಪ್ಯಾರಾ ಅಥ್ಲೆಟಿಕ್ ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
Chikkamagalur: ಸಹಕಾರ ಸಾರಿಗೆ ಆರಂಭಿಸಿ... ಇಲ್ಲಾ ಬಂದ್ ಅನಿವಾರ್ಯ
ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ: 2014ರಲ್ಲಿ ಹೊಸದಿಲ್ಲಿಯಲ್ಲಿ ನಡೆದ 19ನೇ ಐಬಿಎಸ್ಎ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 200 ಮೀ , 400 ಮೀ, 800ಮೀ, ಮತ್ತು 100/ 400ಮೀ ಓಟದಲ್ಲಿ ಚಿನ್ನ, 2015ರಲ್ಲಿ ಹರಿಯಾಣದ ಪಂಚಕುಳದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾಲಂಪಿಕ್ ನಲ್ಲಿ 200ಮೂಈ , 400ಮೀ ಓಟದಲ್ಲಿ ಚಿನ್ನದ ಪದಕಗಳಿಸಿದ್ದರು.2016ರಲ್ಲಿ ಹೊಸದಿಲ್ಲಿಯಲ್ಲಿ ನಡೆದ 20ನೇ ಐಬಿಎಸ್ ಎ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 400ಮಿ,800ಮೀ, 1500 ಮೀ ಓಟದಲ್ಲಿ ಚಿನ್ನ, 2017ರಲ್ಲಿ ಹರಿಯಾಣದ ಸೂನಿಪತ್ ನಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ಪ್ಯಾರಾ ಏಷಿಯನ್ ಗೇಮ್ ನಲ್ಲಿ 400ಮೀ, 1500ಮೀ ಓಟದಲ್ಲಿ ಚಿನ್ನ ಪಡೆದಿದ್ದರು.
2018ರಲ್ಲಿ ಮೈಸೂರು ಚಾಮುಂಡಿ ವಿಹಾರ ನಡೆದ ರಾಜ್ಯ ಪ್ಯಾರಾಲಂಪಿಕ್ ಕ್ರೀಡಾಂಗಣದಲ್ಲಿ ನಲ್ಲಿ 800ಮೀ ಓಟದಲ್ಲಿ ಚಿನ್ನ, ಇದೇ ವರ್ಷ ಹರಿಯಾಣದ ಪಂಚಕುಳದಲ್ಲಿ ನಡೆದ 18ನೇ ರಾಷ್ಟ್ರೀಯ ಪ್ಯಾರಾಲಂಪಿಕ್ನಲ್ಲಿ 800 ಮೀ ಮತ್ತು 1500ಮೀ ಓಟದಲ್ಲಿ ಚಿನ್ನಗಳಿಸಿದ್ದರು. ಪ್ಯಾರಿಸ್ ವರ್ಲ್ಡ್ ಗ್ರಾಂಡ್ಪಿಕ್ ನಲ್ಲಿ ಕಂಚು ಗಳಿಸಿದ್ದರು. 19ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ 400ಮೀ ಮತ್ತು 1500 ಮೀ ಓಟದಲ್ಲಿ ಚಿನ್ನ, 3ನೇ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ 400 ಮತ್ತು 1500ಮೀ ಓಟದಲ್ಲಿ ಚಿನ್ನ ಹಾಗೂ 20ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ 400ಮೀ ಓಟದಲ್ಲಿ ಚಿನ್ನ ಮತ್ತು 1500ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
Chikkamagaluru ಹಣಕಾಸಿನ ವಿಚಾರಕ್ಕೆ ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ
ಪ್ರಧಾನಿ ನರೇಂದ್ರ ಮೋದಿಯಿಂದ ಅಭಿನಂದನೆ: ಹಿಂದೆ ಅಂತರಾಷ್ರೀಯ ಮಟ್ಟದಲ್ಲಿ ಚಿನ್ನ ಪಡೆದ ಸಮಯದಲ್ಲಿ ವಿ.ರಾಧಾ ಅವರನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಭಿನಂದಿಸಿದ್ದರು. ಇದೀಗ 2020ನೇ ಸಾಲಿನಲ್ಲಿ ಘೋಷಣೆ ಮಾಡಿರುವ ಏಕಲವ್ಯ ಪ್ರಶಸ್ತಿಯಲ್ಲಿ ವಿ ರಾಧಾ ಪಾತ್ರರಾಗಿದ್ದಾರೆ. ಈ ಮೂಲಕ ಮಲೆನಾಡಿನಲ್ಲಿ ಅದಷ್ಟೂ ಅಂಧಮಕ್ಕಳಿಗೆ ಆಶ್ರಯ ನೀಡಿರುವ ಅಂಧಮಕ್ಕಳ ಆಶಾಕಿರಣ ಸಂಸ್ಥೆಯ ಕೀರ್ತಿ ಮುತ್ತಷ್ಟು ಎತ್ತರಕ್ಕೆ ಹೋಗಿದೆ.