* ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಏ.9ರವರೆಗೆ ಮಳೆ ಮುನ್ಸೂಚನೆ
* ಬೆಳಗಾವಿಯಲ್ಲಿ ಅಧಿಕ 6 ಸೆಂ.ಮೀ. ಮಳೆ
* ಕರಾವಳಿಯಲ್ಲಿ ಏ.9ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ
ಬೆಂಗಳೂರು(ಏ.06): ಪಶ್ಚಿಮ ವಿದರ್ಭದಿಂದ ತಮಿಳುನಾಡಿನ(Tamil Nadu) ಉತ್ತರ ಒಳನಾಡಿನ ತನಕ ಹಬ್ಬಿರುವ ಟ್ರಫ್ ಕಾರಣ, ರಾಜ್ಯದ(Karnataka) ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ.
ಕರಾವಳಿಯಲ್ಲಿ(Coastal) ಏ.9ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನ ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಏಪ್ರಿಲ್ 8ರವರೆಗೆ ಮಳೆಯಾಗಲಿದೆ. ಏ.9ಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(Department of Meteorology) ತಿಳಿಸಿದೆ.
Body Temperature: ಹೆಂಗಸರಿಗಿಂತ ಗಂಡಸರಿಗೆ ಸೆಖೆ ಹೆಚ್ಚಂತೆ, ಯಾಕೆ ಗೊತ್ತಾ?
ಉತ್ತರ ಒಳನಾಡಿನಲ್ಲಿ ಬುಧವಾರದಂದು ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ಕಲಬುರಗಿಯ ಜಿಲ್ಲೆಯ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆ ಬಳಿಕದ ಮೂರು ದಿನ ಒಣ ಹವೆ ಮುಂದುವರಿಯಲಿದೆ.
ಬೆಳಗಾವಿಯಲ್ಲಿ 6 ಸೆಂ.ಮೀ. ಮಳೆ:
ರಾಜ್ಯದಲ್ಲಿ ಕಳೆದ ಎರಡು ವಾರದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ(Rain). ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಬೆಳಗಾವಿಯ ರುಕ್ಮಿಣಿ ನಗರದಲ್ಲಿ 6.35 ಸೆಂ.ಮೀ, ವಿಜಯಪುರದ ಕಕ್ಕಲಮೇಲಿಯಲ್ಲಿ 3.25 ಸೆಂ.ಮೀ, ಬೆಳಗಾವಿಯ ಹಂದಿಗನೂರುದಲ್ಲಿ 2.65 ಸೆಂ.ಮೀ ಮಳೆಯಾಗಿದೆ.
ಕಲಬುರಗಿಯಲ್ಲಿ ಅತ್ಯಧಿಕ 41 ಡಿಗ್ರಿ ತಾಪ
ಬೆಂಗಳೂರು: ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಕಲಬುರಗಿಯಲ್ಲಿ(Kalaburagi) ರಾಜ್ಯದಲ್ಲೇ ಗರಿಷ್ಠ 40.7 ಡಿಗ್ರಿ ಸೆಲ್ಸಿಯಸ್ ಉಷ್ಣತೆ(Temperature) ದಾಖಲಾಗಿದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಗದಗ, ಧಾರವಾಡ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಮೀರಿ ತಾಪಮಾನ ದಾಖಲಾಗಿದೆ. ಒಟ್ಟಾರೆ ರಾಜ್ಯದ ಶೇ. 73ರಷ್ಟು ಭೂಭಾಗದಲ್ಲಿ 36 ಡಿಗ್ರಿ ಸೆಲ್ಸಿಯಸ್ ನಿಂದ 38 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿರುವ ವರದಿಯಾಗಿದೆ.
ಬೆಂಗ್ಳೂರಲ್ಲಿ ಉಷ್ಣಾಂಶ ಹೆಚ್ಚಾಗದಿದ್ದರೂ ಭಾರೀ ಸೆಖೆ..!
ಬೆಂಗಳೂರು: ಕಳೆದ 15 ದಿನಗಳಿಂದ ರಾಜಧಾನಿಯಲ್ಲಿ ಆಗಾಗ ಸುರಿದ ತುಂತುರು ಮಳೆ(Rain), ಮೋಡದ ವಾತಾವರಣ, ತೇವಾಂಶ ಕಾರಣದಿಂದ ಬಿಸಿಲಿನ ತಾಪ(ಉಷ್ಣಾಂಶ) ಹೆಚ್ಚದಿದ್ದರೂ ಸೆಖೆ ಮಾತ್ರ ಜನರನ್ನು ಹೈರಾಣು ಮಾಡಿದೆ. ಸೆಖೆಯ ಹೊಡೆತಕ್ಕೆ ಬೇವರಿನಿಂದ ತೊಯ್ದು ತೊಪ್ಪೆಯಾಗುವ ಸ್ಥಿತಿ ಹೊರಗೆ ಓಡಾಡುವ ಸಾಮಾನ್ಯ ಜನರದ್ದಾಗಿದೆ.
ಮಾರ್ಚ್‌ನಲ್ಲೇ ಈ ಪರಿ ಸೆಖೆ ಇದ್ದರೆ ಇನ್ನು ವಿಪರೀತ ಬಿಸಿಲಿರುವ ಏಪ್ರಿಲ್, ಮೇ ಕಳೆಯೋದು ಹೇಗೆ ಎಂಬ ಚಿಂತೆ ಪ್ರಾರಂಭವಾಗಿದೆ. ಮಾರ್ಚ್ ತಿಂಗಳ ತಿಂಗಳ ದೈನಂದಿನ ತಾಪಮಾನ ವಾಡಿಕೆಯ ಮಾದರಿಯೇ ಇದ್ದರೂ ಮಾರ್ಚ್ ತಿಂಗಳ ಎರಡನೇ ಭಾಗದಲ್ಲಿ ಭಾರಿ ಸೆಖೆಯ ವಾತಾವರಣ ನೆಲೆಸಿತ್ತು.
ಮಾರ್ಚ್ ತಿಂಗಳ ಮೊದಲ ಒಂಬತ್ತು ದಿನ ನಗರದ ಗರಿಷ್ಠ ಉಷ್ಣತೆ(Temperature) 32 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲೇ ಇತ್ತು. ಅದೇ ರೀತಿ ಮೊದಲ 14 ದಿನದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಒಳಗೆ ದಾಖಲಾಗಿತ್ತು. ಮಾ.30ಕ್ಕೆ 35.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದೆ ತಿಂಗಳ ಗರಿಷ್ಠ ತಾಪಮಾನ.
Bengaluru: ಸುಡು ಸುಡು ಬಿಸಿಲಿಗೆ ತತ್ತರಿಸಿದ ಬೆಂಗ್ಳೂರಿನ ಜನತೆ: ಮತ್ತಷ್ಟು ಧಗೆ ಹೆಚ್ಚಳ?
2012ರಿಂದ 2021ರ ಅವಧಿಯಲ್ಲಿ ಮಾರ್ಚ್ ತಿಂಗಳಲ್ಲಿ ದಾಖಲಾದ ಎರಡನೇ ಕನಿಷ್ಠ ತಾಪಮಾನವಿದು. 2018ರ ಮಾಚ್‌ರ್ 24ಕ್ಕೆ 34.1 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು. ಮಾರ್ಚ್ 3ಕ್ಕೆ 15.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ನಗರದ ಕನಿಷ್ಠ ತಾಪಮಾನ. ಕಳೆದ ಹತ್ತು ವರ್ಷದಲ್ಲಿ 2017ರ ಮಾಚ್‌ರ್ 2ಕ್ಕೆ 15.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅಂದರೆ ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕಡಿಮೆ ಇತ್ತು.
ಈ ವರ್ಷದ ಮಾರ್ಚ್‌ನ ಸರಾಸರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33.08 ಡಿಗ್ರಿ ಸೆಲಿಯಸ್ ಮತ್ತು 20.38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ 42 ವರ್ಷಗಳಿಂದ ಮಾರ್ಚ್ ತಿಂಗಳ ಗರಿಷ್ಠ ಮತ್ತು ಕನಿಷ್ಠ ಸರಾಸರಿ ಉಷ್ಣತೆ ಕ್ರಮವಾಗಿ 33.1 ಡಿಗ್ರಿ ಸೆಲ್ಸಿಯಸ್ ಮತ್ತು 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ತಾಪಮಾನದಲ್ಲಿ ವಾಡಿಕೆಯಷ್ಟೆ ಇತ್ತು.