89 ವರ್ಷಗಳ ನಂತರ ವಿವಿ ಸಾಗರ ಕೋಡಿಬಿದ್ದದ್ದು, 12 ವರ್ಷಗಳ ನಂತರ ನಾಯಕನಹಟ್ಟಿಹಿರೇಕೆರೆ ತುಂಬಿ ಗುರುತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವದ ವೈಭವ ಜನರು ಕಣ್‌ತುಂಬಿಕೊಂಡದ್ದು, ಮುರುಘಾಶ್ರೀ ಪೋಕ್ಸೊ ಪ್ರಕರಣದಲ್ಲಿ ಜೈಲು ಪಾಲಾಗಿ ಭಕ್ತರು ಘಾಸಿಗೊಂಡದ್ದು ಈ ವರ್ಷದ ಹೈಲೆಟ್
ಚಿತ್ರದುರ್ಗ ವರ್ಷದ ಹಿನ್ನೋಟ - 2022
ಚಿಕ್ಕಪ್ಪನಹಳ್ಳಿ ಷಣ್ಮುಖ
undefined
ಚಿತ್ರದುರ್ಗ (ಡಿ.31) :
2023ಕ್ಕೆ ಎಂಟ್ರಿ ಕೊಡಲು ಕೇವಲ 24 ಗಂಟೆ ಮಾತ್ರ ಬಾಕಿ ಉಳಿದಿವೆ. ಸದಾ ಬರವನ್ನು ಉಂಡು, ಹಾಸಿ ಹೊದ್ದು ಮಲಗುತ್ತಿದ್ದ ಚಿತ್ರದುರ್ಗ ಜಿಲ್ಲೆಗೆ ಈ ವರ್ಷ ವರುಣ ಖುಷಿ ಸಂಗತಿ ಹಂಚಿದ್ದನಾದರೂ, ಜಿಲ್ಲೆಯ ಬಹುತೇಕ ಕೆರೆಗಳು ಹಲವು ದಶಕದ ನಂತರ ತುಂಬಿ ಜನತೆ ಸಂತಸ ತಂದಿದ್ದವು. ಈ ಮಧ್ಯೆ ಮುರುಘಾಶರಣರು ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾದಾದದ್ದು ಸಿಹಿ ನೆನಪುಗಳನ್ನು ಮಸುಕಾಗಿಸಿತ್ತು.
2022ನ್ನು ಸಿಹಿ ಕಹಿಗಳ ಸಮ್ಮಿಶ್ರಣವೇ ಎಂದು ವ್ಯಾಖ್ಯಾನಿಸಲು ಸಾಧ್ಯವಾಗದಷ್ಟರ ಮಟ್ಟಿಗೆ ಮುರುಘಾಶ್ರೀ ಪೋಕ್ಸೋ ಪ್ರಕರಣ ಚಿತ್ರದುರ್ಗ ಜಿಲ್ಲೆಯ ಘಾಸಿ ಮಾಡಿತ್ತು. ಸರಿದು ಹೋಗುವ ಗತಕಾಲದ ಘಟನಾವಳಿಗಳಿಗೆ ಸೆಪ್ಟಂಬರ್ ಒಂದರ ದಿನಾಂಕ ವೈರುಧ್ಯಗಳ ದಾಖಲು ಮಾಡಿತು. 89 ವರ್ಷಗಳ ನಂತರ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿ ವೇದಾವತಿ ರೈತರ ಮೊಗದಲ್ಲಿ ಹರ್ಷ ಮೂಡಿಸಿದರೆ 800 ವರ್ಷಗಳಷ್ಟುಸುದೀರ್ಘ ಇತಿಹಾಸವಿರುವ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ಅಂದೇ ಸಂಜೆ ಫೋಕ್ಸೋ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು.
88 ವರ್ಷಗಳ ಬಳಿಕ ವಾಣಿ ವಿಲಾಸ ಸಾಗರ ಡ್ಯಾಂ ಕೋಡಿ, ಹರಿದು ಬರ್ತಿರೋ ಜನಸಾಗರ
ದೇಶದ ವಿವಿಧ ಕಡೆ ಸೇರಿದಂತೆ ವಿದೇಶದಲ್ಲಿಯೂ ಬಸವಕೇಂದ್ರಗಳ ತೆರೆದು ಬಸವತತ್ವ ಪ್ರಚಾರದಲ್ಲಿ ನಿರತರಾಗಿದ್ದ, ಬಸವ ಮಾರ್ಗದಲ್ಲಿ ನಡೆದ ಮಹನೀಯರಿಗೆ ಬಸವಶ್ರಿ ಪ್ರಶಸ್ತಿ ನೀಡುತ್ತ ಸಾಗಿದ್ದ ಮುರುಘಾಶ್ರೀ ಸ್ವಯಂ ಬಸವತತ್ವ ವಿರುದ್ಧದ ಹಾದಿಯ ನಡಿಗೆಯಲ್ಲಿ ಕಾಲು ಜಾರಿ ಬಿದ್ದ ಆರೋಪ ಹೊತ್ತು ಜೈಲು ಪಾಲಾದದ್ದು 2022 ರ ಕರಾಳ ಸನ್ನಿವೇಷಗಳಿಗೆ ಸಾಕ್ಷಿಯಾಗಿತ್ತು. ಬಸವಶ್ರೀ ಪ್ರಶಸ್ತಿ ಪಡೆದವರು ಮುಜುಗರಕ್ಕೆ ಒಳಗಾಗಬೇಕಾಯಿತು. ಒಂದಿಬ್ಬರು ಪ್ರಶಸ್ತಿ ವಾಪಾಸ್ಸು ಕೂಡಾ ಮಾಡಿದರು. ಮೇರು ನಟ ಪುನೀತ್ ರಾಜಕುಮಾರ್‌ಗೆ ಇದೇ ವರ್ಷ ಮರಣೋತ್ತರ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಮುರುಘಾಶ್ರೀ ಜೈಲು ಪಾಲಾದ ನಂತರ ಒಂದಿಷ್ಟುಸರಣಿ ಅವಘಡಗಳು ನಡೆದವು. ಶರಣ ಸಂಸ್ಕೃತಿ ಉತ್ಸವದ ವೇಳೆ ಮುರುಘಾಮಠದಲ್ಲಿ ನಾಡಿನ ಗಣ್ಯರ ಜೊತೆ ಇದ್ದ ಮುರುಘಾ ಶ್ರೀಗಳ 45 ಕ್ಕೂ ಹೆಚ್ಚು ಫೋಟೋಗಳ ಕಳ್ಳತನವಾಗಿತ್ತು. ನಂತರ ಇದೇ ಪ್ರಕರಣದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಮೇಲೆ ಕಳ್ಳತನ ಆರೋಪದ ಪ್ರಕರಣ ದಾಖಲಾಗಿತ್ತು. ಇದಲ್ಲದೇ ಮುರುಘಾಶ್ರೀ ಮೇಲೆ ಪೋಕ್ಸೋ ಪ್ರಕರಣ ದಾಖಲಿಸುವಲ್ಲಿ ಪಿತೂರಿ ನಡೆಸಲಾಗಿದೆ ಎಂಬ ಗಂಭೀರ ಆರೋಪದ ಮೇರೆಗೆ ಬಸವರಾಜನ್ ಹಾಗೂ ಸೌಭಾಗ್ಯ ಕೂಡಾ ಜೈಲುಪಾಲಾದರು. ನಂತರ ಇವರಿಬ್ಬರೂ ಜಾಮೀನಿನ ಮೇಲೆ ಹೊರ ಬಂದಿದ್ದರು.
ಮುರುಘಾಶ್ರೀ ಜೈಲು ಪಾಲಾದ ನಂತರ ತಮಗಿರುವ ಸೋಲೋ ಟ್ರಸ್ಟಿಅಧಿಕಾರ ಬಳಸಿ ನಿವೃತ್ತ ನ್ಯಾಯಾಧೀಶ ವಸ್ತ್ರಮಠ ಅವರನ್ನು ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ್ದರೆ ನಂತರದ ಬೆಳವಣಿಗೆಯಲ್ಲಿ ರಾಜ್ಯಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ರಾಜ್ಯದ ಧಾರ್ಮಿಕ ಇತಿಹಾಸದಲ್ಲಿಯೇ ಪ್ರಮುಖ ಮಠವೊಂದಕ್ಕೆ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ ಸನ್ನಿವೇಶಕ್ಕೆ ಇದು ಸಾಕ್ಷಿಯಾಗಿತ್ತು.
ರಾಜಕೀಯ ಚಟುವಟಿಕೆ
ಪ್ರಮುಖ ರಾಜಕೀಯ ಚಟುವಟಿಕೆಗಳಿಗೆ ಚಿತ್ರದುರ್ಗ ಜಿಲ್ಲೆ 2022ರಲ್ಲಿ ಸಾಕ್ಷಿಯೊದಗಿಸಿತ್ತು.
2022 ರ ಪ್ರಮುಖ ಘಟನಾವಳಿಗಳು:
Chitradurga: ಕಾಂಗ್ರೆಸ್ ಟಿಕೆಟ್ ಗಾಗಿ ಜಿಲ್ಲೆಯ 6 ಕ್ಷೇತ್ರದ ಆಕಾಂಕ್ಷಿಗಳ ಮೆಗಾ ಫೈಟ್