ಎಸಿ Vistadome coach ರೈಲು ಸೇವೆ ಬಳ​ಸಿ: ಸಂಸದ ರಾಘವೇಂದ್ರ

Published : Dec 31, 2022, 07:23 AM IST
ಎಸಿ Vistadome coach  ರೈಲು ಸೇವೆ ಬಳ​ಸಿ: ಸಂಸದ ರಾಘವೇಂದ್ರ

ಸಾರಾಂಶ

ಯಶವಂತಪುರ- ಶಿವಮೊಗ್ಗ- ಯಶವಂತಪುರ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ: 16579/16580 ಗಾಡಿಯು ಡಿ.30ರಿಂದ ಮಾ.31ರವರೆಗೆ ಒಂದು ಎಸಿ ವಿಸ್ಟಾಡೋಮ್‌ ಕೋಚ್‌ನೊಂದಿಗೆ ಸಂಚಾರ ಪ್ರಾರಂಭಿಸಿದ್ದು, ಪ್ರಯಾಣಿಕರು ಈ ಅವ​ಕಾಶ ಸದುಪಯೋಗ ಮಾಡಿ​ಕೊ​ಳ್ಳು​ವಂತೆ ಸಂಸದ ಬಿ. ವೈ. ರಾಘವೇಂದ್ರ ಕೋರಿದ್ದಾರೆ.

ಶಿವಮೊಗ್ಗ (ಡಿ.31) : ಯಶವಂತಪುರ- ಶಿವಮೊಗ್ಗ- ಯಶವಂತಪುರ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ: 16579/16580 ಗಾಡಿಯು ಡಿ.30ರಿಂದ ಮಾ.31ರವರೆಗೆ ಒಂದು ಎಸಿ ವಿಸ್ಟಾಡೋಮ್‌ ಕೋಚ್‌ನೊಂದಿಗೆ ಸಂಚಾರ ಪ್ರಾರಂಭಿಸಿದ್ದು, ಪ್ರಯಾಣಿಕರು ಈ ಅವ​ಕಾಶ ಸದುಪಯೋಗ ಮಾಡಿ​ಕೊ​ಳ್ಳು​ವಂತೆ ಸಂಸದ ಬಿ. ವೈ. ರಾಘವೇಂದ್ರ ಕೋರಿದ್ದಾರೆ.

ಗಾಜಿನ ಹೊದಿಕೆ ಹಾಗೂ ಗಾಜಿನ ಕಿಟಕಿಗಳನ್ನು ಹೊಂದಿರುವ ಈ ಬೋಗಿಯು 44 ಆಸನಗಳನ್ನು ಹೊಂದಿದೆ. ಈ ಆಸನಗಳನ್ನು 180 ಡಿಗ್ರಿ ತಿರುಗಿಸಬಹುದಾಗಿದೆ. ಆಸನಗಳನ್ನು ತಮಗೆ ಬೇಕಾದಂತೆ ಹೊಂದಿಸಿಕೊಂಡು ಪ್ರವಾಸಿಗರು ಹೊರಗಿನ ದೃಶ್ಯವಳಿಗಳನ್ನು ಅಸ್ವಾದಿಸಬಹುದು. ಈ ಬೋಗಿಯ ಸೇವೆಯನ್ನು ಯಶವಂತಪುರ- ಶಿವಮೊಗ್(Shivamogga-Yeshwantapur)-  ಇಂಟರ್‌ಸಿಟಿ ಎಕ್ಸ್‌ಪ್ರೆಸ್‌(intercity express train) ಒದಗಿಸಲಾಗಿದೆ. ಮಲೆನಾಡಿನ ಭಾಗದ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ವರದಾನವಾಗಿದೆ. ದಕ್ಷಿಣ ಭಾರತದಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ಈ ರೀತಿಯ ಭೋಗಿಯ ಸೌಲಭ್ಯ ಸಿಕ್ಕಿರುವುದು ಎರಡನೆಯದಾಗಿದೆ ಎಂದಿದ್ದಾರೆ.

ಈಗಾಗಲೇ ಕಳೆದ ವರ್ಷದಲ್ಲಿ ಈ ವಿಸ್ಟಾಡೋಮ್‌ ಕೋಚ್‌ ಬೆಂಗಳೂರು- ಶಿವಮೊಗ್ಗ (Bengaluru-Shivamogga)ನಡುವೆ ಸಂಚರಿಸಿದ್ದು, ಜನಮೆಚ್ಚುಗೆ ಪಡೆದಿತ್ತು. ತಾಂತ್ರಿಕ ಕಾರಣಗಳಿಂದ ಈ ಸೇವೆಯನ್ನು ರೈಲ್ವೆ ಹಿಂಪಡೆದಿತ್ತು. ಈ ವಿಸ್ಟಾಡೋಮ್‌ ಕೋಚ್‌ ಅನ್ನು ಪುನಾರಂಭಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದ ಹಿನ್ನೆಲೆ ರೈಲ್ವೆ ಇಲಾಖೆಗೆ ಪುನಃ ವಿಸ್ಟಾಡೋಮ್‌ ಕೋಚ್‌ ಅಳವಡಿಸಲು ಮನವಿ ಮಾಡಿಕೊಳ್ಳಲಾಗಿತ್ತು. ರೈಲ್ವೆ ಇಲಾಖೆಯು ನಮ್ಮ ಮನವಿಗೆ ಸ್ಪಂದಿಸಿ ವಿಸ್ಟಾಡೋಮ್‌ ಕೋಚ್‌ ಅನ್ನು ಪುನಃ 16579/16580 ಯಶವಂತಪುರ- ಶಿವಮೊಗ್ಗ- ಯಶವಂತಪುರ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌ ರೈಲಿಗೆ ಅಳವಡಿಸಿದೆ. 2023ರ ಮಾಚ್‌ರ್‍ 31ರವರೆಗೆ ಸಂಚ​ರಿ​ಸಲು ಅವಕಾಶ ಕಲ್ಪಿಸಿದೆ. ಈ ನೂತನ ಬೋಗಿ ಸೇವೆ ಪುನರಾರಂಭಿಸಿರುವ ರೈಲ್ವೆ ಇಲಾಖೆಗೆ ಶಿವಮೊಗ್ಗ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದಿದ್ದಾರೆ.

ಪ್ರಸ್ತುತ ಯಶವಂತಪುರ- ಶಿವಮೊಗ್ಗ- ಯಶವಂತಪುರ ನಡುವೆ ಮಾತ್ರ ಸಂಚರಿಸುತ್ತಿರುವ ಈ ರೈಲು ಸೇವೆಯನ್ನು ಬೆಳಿಗ್ಗೆ ಬೇಗನೆ ಬೆಂಗಳೂರಿನಿಂದ ಆರಂಭಿಸಿ ತಾಳಗುಪ್ಪದವರೆಗೆ ವಿಸ್ತರಣೆ ಮಾಡಲು ರೈಲ್ವೆ ಇಲಾಖೆಯನ್ನು ವಿನಂತಿಸಿಕೊಳ್ಳಲಾಗುತ್ತಿದೆ. ಈ ಭೋಗಿ ಅವಶ್ಯಕತೆ ಬಗ್ಗೆ ರೈಲ್ವೆ ಇಲಾಖೆಗೆ ಮನದಟ್ಟು ಮಾಡುವ ಸಲುವಾಗಿ, ಈ ಬೋಗಿಯ ಸದುಪಯೋಗ ಬಳಸಿಕೊಳ್ಳುವಂತೆ ಪ್ರಯಾಣಿಕರು ಮತ್ತು ಪ್ರವಾಸಿಗರನ್ನು ವಿನಂತಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ರಸ್ತೆ ಮೇಲೆಯೇ ಕಾರ್ ಪಾರ್ಕ್ ಮಾಡಿ ಹೋದ ಆಸಾಮಿ! ಟ್ರಾಫಿಕ್ ಜಾಮ್, ಸಾರ್ವಜನಿಕರು ಸೇರಿ ಏನು ಮಾಡಿದ್ರು ನೋಡಿ!
ವಿದ್ಯಾರ್ಥಿಯ ತಾಯಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಶಿಕ್ಷಕನಿಗೆ 3 ವರ್ಷ ಜೈಲು ಶಿಕ್ಷೆ