Chitradurga rains: ಚಳ್ಳಕೆರೆಯಲ್ಲಿ ಭಾರೀ ಮಳೆಗೆ ಬೆಳೆ ನಾಶ: ಲಕ್ಷಾಂತರ ರು. ನಷ್ಟ!

By Kannadaprabha News  |  First Published Jun 10, 2023, 11:07 AM IST

ತಾಲೂಕಿನಾದ್ಯಂತ ಗುರುವಾರ ನಡುರಾತ್ರಿ ಸುರಿದ ಮೃಗಶಿರ ಮಳೆಗೆ ತಳಕು, ಪರಶುರಾಮಪುರ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳ ಮನೆ, ಜಮೀನು, ಬೆಳೆ, ದನಕರುಗಳಿಗೆ ಹಾನಿಯಾಗಿ, ಶಾಲೆಗೂ ಸಹ ನೀರು ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿದೆ.


ಚಳ್ಳಕೆರೆ (ಜೂ.10): ತಾಲೂಕಿನಾದ್ಯಂತ ಗುರುವಾರ ನಡುರಾತ್ರಿ ಸುರಿದ ಮೃಗಶಿರ ಮಳೆಗೆ ತಳಕು, ಪರಶುರಾಮಪುರ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳ ಮನೆ, ಜಮೀನು, ಬೆಳೆ, ದನಕರುಗಳಿಗೆ ಹಾನಿಯಾಗಿ, ಶಾಲೆಗೂ ಸಹ ನೀರು ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿದೆ.

ತಳಕು ಹೋಬಳಿಯ ಯಾದಲಗಟ್ಟೆಗ್ರಾಮದಲ್ಲಿ ಬಿದ್ದ ಭಾರಿ ಮಳೆಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ ನೀರಿನಿಂದ ಆವೃತ್ತವಾಗಿ ಶಾಲೆಗೆ ಹೋಗುವ ರಸ್ತೆಯೂ ಸಹ ನೀರಿನಲ್ಲಿ ಮುಳುಗಿತ್ತು. ಇದೇ ಗ್ರಾಮದ ಕರಿಯಮ್ಮ ಎಂಬುವವರ ಕೊಟ್ಟಿಗೆಯಲ್ಲಿದ್ದ ಆರು ಕುರಿಗಳು ಸೇರಿದಂತೆ ಐದು ಪಾಕೇಟ್‌ ಗೊಬ್ಬರ, ಪಾತ್ರೆ ಸಾಮಾಗ್ರಿ, ಆಹಾರ ಪದಾರ್ಥಗಳು ನೀರಿನಲ್ಲಿ ಕೊಚ್ಚಿಹೋಗಿವೆ.

Latest Videos

undefined

ಎರಡೂವರೆ ದಶಕದಿಂದ ರೈತರಿಗೆ ಸಮಸ್ಯೆ; ಜಿಂಕೆ ಸಂರಕ್ಷಣಾ ವನ ನಿರ್ಮಾಣ ಯಾವಾಗ?

ತಳಕು ಹೋಬಳಿಯ ಕಾಲುವೇಹಳ್ಳಿ ಗ್ರಾಮದ ಕೆ.ಪಿ.ಭೂತಯ್ಯ ಎಂಬುವವರಿಗೆ ಸೇರಿದ ರಿ.ಸರ್ವೆ ನಂ. 106ರಲ್ಲಿದ್ದ ತೋಟಗಾರಿಕೆ ಬೆಳೆಗಳಾದ ಹುಣಸೆ 20, ಶ್ರೀಗಂಧ 20, ನಿಂಬೆ ಗಿಡಗಳು 150 ಭಾರಿ ಮಳೆಗಾಳಿಗೆ ನೆಲಕ್ಕುಳಿ ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟಸಂಭವಿಸಿದೆ. ಈಶ್ವರಗೆರೆ ಗ್ರಾಮದ ಯಶೋಧಮ್ಮ ಎಂಬುವವರ ಎರಡು ಎಕರೆ ಪ್ರದೇಶದಲ್ಲಿದ್ದ ರಾಗಿಬೆಳೆಯೂ ನೀರಿನಲ್ಲಿ ಕೊಚ್ಚಿಹೋಗಿ ಅಪಾರ ನಷ್ಟಸಂಭವಿಸಿದೆ. ಗೌರಸಮುದ್ರ ಗ್ರಾಮದ ಈರಣ್ಣ ಎಂಬುವವರ ಮನೆಯ ತಗಡಿನ ಶೀಟ್‌ ಗಾಳಿಗೆ ಹಾರಿಹೋಗಿವೆ.

ಬೋಗನಹಳ್ಳಿ ಗ್ರಾಮದ ಜಯಮ್ಮ ಎಂಬುವವರ ಮನೆಯ ಸೀಟು ಹಾರಿಹೋಗಿ 40 ಸಾವಿರ ನಷ್ಟಸಂಭವಿಸಿದೆ. ಇದೇ ಗ್ರಾಮದ ಸಿದ್ದಲಿಂಗಪ್ಪ ಎಂಬುವವರ ಜಮೀನಿನಲ್ಲಿದ್ದ ಕರಬೂಜದ ಬೆಳೆ ನೀರಿನಲ್ಲಿ ಮುಳುಗಿ 50 ಸಾವಿರ ನಷ್ಟಸಂಭವಿಸಿದೆ. ಗ್ರಾಮದ ಈರಕ್ಕ ಎಂಬುವವರ ಜಮೀನಿನಲ್ಲಿದ್ದ ಸೌತೆಕಾಯಿ ಬೆಳೆಯೂ ಸಹ ಭಾರಿ ಮಳೆಗೆ ಸಿಲುಕಿದೆ. ಬೂದಿಹಳ್ಳಿ ಗ್ರಾಮದ ಈರಣ್ಣ ಎಂಬುವವರ 50 ಅಡಿಕೆ ಮರಗಳು ಭಾರಿ ಗಾಳಿ ನೆಲಕಚ್ಚಿವೆ. ಅದೇ ಗ್ರಾಮದ ರೈತ ರಾಜಣ್ಣ ಎಂಬುವವರ ಫಸಲಿಗೆ ಬಂದಿದ್ದ ಬಾಳೆಗಿಡಗಳು ಸಹ ನೆಲಕುರುಳಿವೆ. ಘಟಪರ್ತಿ ಗ್ರಾಮದ ದೇವಣ್ಣ ಮತ್ತು ಈರಣ್ಣ ಎಂಬುವವರ ನಾಲ್ಕು ಎಕರೆ ಪ್ರದೇಶದಲ್ಲಿದ್ದ ಮೆಕ್ಕೆಜೋಳ ಗಾಳಿ-ಮಳೆಗೆ ಹಾನಿಯಾಗಿದೆ.

ತೋಟಕ್ಕೆ ಬೆಂಕಿ ಬಿದ್ದು 2000 ತೆಂಗಿನ ಸಸಿ ನಾಶ: 24 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು!

ಮಿಟ್ಲಕಟ್ಟೆಗ್ರಾಮದಲ್ಲಿ ಮನೆಯ ಮುಂದೆ ಕಟ್ಟಿದ ಹಸುಗೆ ಸಿಡಿಲು ಬಡಿದು ಸಾವನಪ್ಪಿದೆ, ಅದೇ ಗ್ರಾಮದ ಪೀಜಾರಹಟ್ಟಿಯಲ್ಲಿ ಅಭಿನಾಬಿ, ರಸೂಲ್‌, ದಾದಾಪೀರ್‌, ¸ಕ್ಷಿ, ತಿಪ್ಪಮ್ಮ ಎಂಬುವವರ ಐದು ಮನೆಗಳು ಬಿದ್ದು ಹೋಗಿ ಸುಮಾರು 3 ಲಕ್ಷ ನಷ್ಟಸಂಭವಿಸಿದೆ.

  • ನೆಲಕ್ಕಚಿದ್ದ 20 ಹುಣಸೆ, 20 ಶ್ರೀಗಂಧ,
  • 150 ನಿಂಬೆ ಗೀಡಗಳು, 50 ಅಡಿಕೆ ಮರಗಳು
  • ಕರಬೂಜದ ಬೆಳೆ ನೀರಿನಲ್ಲಿ ಮುಳುಗಿ 50 ಸಾವಿರ ರು. ನಷ್ಟ
click me!