Chitradurga: 9 ಕೋಟಿ ರು. ವೆಚ್ಚದಲ್ಲಿ ಅಗಸನಕೆರೆ ಅಭಿವೃದ್ಧಿ

By Kannadaprabha NewsFirst Published Dec 26, 2022, 3:23 PM IST
Highlights

ಚಿತ್ರದುರ್ಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ಊರ ತುಂಬಾ ಸಿಸಿ ರಸ್ತೆ, ಸುಗಮ ಸಂಚಾರಕ್ಕೆ ಡಿವೈಡರ್‌ಗಳ ಅಳವಡಿಕೆ, ರಾತ್ರಿ ವೇಳೆ ಝಗಮಗಿಸುವ ವಿದ್ಯುತ್‌ ದೀಪಗಳ ಸಿಂಗಾರದ ನಂತರ ಇದೀಗ ಮಠದ ಮುಂಭಾಗದ ಕೆರೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ.

ಚಿತ್ರದುರ್ಗ (ಡಿ.26): ಚಿತ್ರದುರ್ಗದಲ್ಲಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ಊರ ತುಂಬಾ ಸಿಸಿ ರಸ್ತೆ, ಸುಗಮ ಸಂಚಾರಕ್ಕೆ ಡಿವೈಡರ್‌ಗಳ ಅಳವಡಿಕೆ, ರಾತ್ರಿ ವೇಳೆ ಝಗಮಗಿಸುವ ವಿದ್ಯುತ್‌ ದೀಪಗಳ ಸಿಂಗಾರದ ನಂತರ ಇದೀಗ ಮಠದ ಮುಂಭಾಗದ ಕೆರೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಹಿಂದೆ ಕೆ. ಅಮರನಾರಾಯಣ ಜಿಲ್ಲಾಧಿಕಾರಿಯಾಗಿದ್ದಾಗ 27 ಲಕ್ಷ ರುಪಾಯಿ ಖರ್ಚು ಮಾಡಿ ಚಂದ್ರವಳ್ಳಿ ಕೆರೆಯ ನೀರನ್ನು ಮೋಟಾರು ಪಂಪ್‌ ಇಟ್ಟು ಖಾಲಿ ಮಾಡಿ ಹೂಳು ಎತ್ತಲಾಗಿತ್ತು. ಅಂತಹದ್ದೇ ಮತ್ತೊಂದು ಮಾದರಿಯ ಈಗ ಅನುಸರಿಸಲಾಗುತ್ತಿದೆ.

ಅಗಸನಕೆರೆ (ಮಠದ ಮುಂಭಾಗದ್ದು ) ಕೆರೆಯಲ್ಲಿನ ನೀರನ್ನು ಮೋಟಾರು ಪಂಪುಗಳ ಮೂಲಕ ಮತ್ತೊಂದು ಕೆರೆಗೆ ಹಾಯಿಸಿ ಖಾಲಿ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ ಮರಳಿ ಆ ಕೆರೆಯಿಂದ ನೀರು ತುಂಬಿಸಲಾಗುತ್ತದೆ. ಇದಕ್ಕಾಗಿ ಸದ್ಯಕ್ಕೆ ಕ್ರಿಯಾ ಯೋಜನೆಯಲ್ಲಿ ಏಳು ಲಕ್ಷ ರುಪಾಯಿ ಕಾಯ್ದಿರಿಸಲಾಗಿದೆ.

ಕೆರೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ , ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒಂಬತ್ತು ಕೋಟಿ ವೆಚ್ಚದಲ್ಲಿ ಜನರ ಆಕರ್ಷಿಸುವ ರೀತಿಯಲ್ಲಿ ಅಗಸನಕೆರೆಯ ಅಭಿವೃದ್ಧಿ ಮಾಡಲಾಗುತ್ತದೆ. ಕೆರೆ ಅಭಿವೃದ್ಧಿ ಬಹು ದಿನಗಳ ಬೇಡಿಕೆ ಆಗಿದೆ. ಮೂರ್ನಾಲ್ಕು ವರ್ಷಗಳಿಂದ ಹಣವನ್ನು ಮೀಸಲಿಡಲಾಗಿತ್ತು. ಕೆರೆಯ ಅಭಿವೃದ್ಧಿಗೆ ಸರ್ಕಾರ ಹಂತದಲ್ಲಿ ಮಾನದಂಡ ಅನುಸರಿಸುವ ಮೂಲಕ ಈಗ ಒಪ್ಪಿಗೆ ಸಿಕ್ಕಿದೆ ಎಂದರು.

ಕೆರೆಯ ಸುತ್ತಲೂ ತಂತಿ ಬೇಲಿ ಹಾಕಿ ಕಲ್ಲಿನ ಪಿಚಿಂಗ್‌ ಅಳವಡಿಸಲಾಗುವುದು. ಅಲಂಕಾರಿಕ ದೀಪಗಳು, ವಾಕಿಂಗ್‌ ಪಾಥ್‌, ಶೌಚಾಲಯ, ಮಕ್ಕಳ ಆಟದ ಸಲಕರಣೆಗಳು ಇರುತ್ತವೆ. ತುಂಬಿರುವ ಕೆರೆಯ ನೀರನ್ನು ಹಿಂದಿನ ಕೆರೆಗೆ ಲಿಫ್ಟ್ ಮಾಡಿ ಅಭಿವೃದ್ಧಿ ಮಾಡಲಾಗುತ್ತದೆ. ಕಾಮಗಾರಿ ಪೂರ್ಣವಾಗಿ ಮುಗಿದ ನಂತರ ಮತ್ತೆ ಕೆರೆ ನೀರನ್ನು ಲಿಫ್ಟ್ ಮಾಡಲಾಗುತ್ತದೆ ಎಂದರು.

ಅಭಿವೃದ್ಧಿಗೆ ಶ್ರಮಿಸಿ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೆರೆ ಇರುವುದರಿಂದ ಜನರ ಆಕರ್ಷಣೆಗೆ ಕೇಂದ್ರ ಬಿಂದುವಾಗಲಿದೆ. ಅಪ್ಪರ್‌ ಭದ್ರಾ ಯೋಜನೆಯಿಂದ ಬಿಟ್ಟು ಹೋಗಿದ್ದ 11 ಕೆರೆಗಳನ್ನು ಯಡಿಯೂ ರಪ್ಪ ಸಿಎಂ ಇದ್ದ ಸಂದರ್ಭದಲ್ಲಿ ಸೇರಿಸುವ ಕೆಲಸ ಮಾಡಲಾಗಿದೆ. ಕಾತ್ರಾಳ್‌ ಕೆರೆಯಿಂದ ಅಗಸನಕೆರೆಗೆ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಚಿತ್ರದುರ್ಗಕ್ಕೆ ಅಂಟಿರುವ ಬರಗಾಲ ಪೀಡಿತ ನಗರ ಎಂಬ ಹಣೆಪಟ್ಟಿಕಳಚಿ ಸುಂದರ ನಗರ ಎಂಬ ಖ್ಯಾತಿ ಪಡೆಯಲು ಎಲ್ಲರೂ ಶ್ರಮಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಎÇ್ಲರೂ ಪಕ್ಷಾತೀತವಾಗಿ ಶ್ರಮಿಸಬೇಕು. ಕೆರೆಯಲ್ಲಿ ಮೀನು ಹಿಡಿಯಲು ಹರಾಜು ಮುಗಿದಿದ್ದರೂ ಮೀನು ಹಿಡಿಯಲಾಗುತ್ತಿದೆ. ಇಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಪ್ಪಾರೆಡ್ಡಿ ಎಚ್ಚರಿಕೆ ನೀಡಿದರು.

ಇಂಡಿ: ಕೆರೆಗಳ ಒಡಲು ತುಂಬಿದ ಕೃಷ್ಣೆಯ ನೀರು

ಪ್ರಾಧಿಕಾರ ಅಧ್ಯಕ್ಷ ಜಿ.ಟಿ. ಸುರೇಶ್‌, ಸದಸ್ಯರಾದ ವಿ.ಆರ್‌.ನಾಗರಾಜ್, ರೇಖಾ, ಉಷಾಬಾಯಿ, ಎಂ.ಕೆ.ಹಟ್ಟಿಗ್ರಾಪಂ.ಅಧ್ಯಕ್ಷೆ ಗೀತಾ, ನಗರಸಭೆ ಸದಸ್ಯರಾದ ಸುರೇಶ್‌, ಹರೀಶ್‌, ಗ್ರಾಪಂ ಸದಸ್ಯರಾದ ರತ್ನಮ್ಮ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸೋಮಶೇಖರ್‌ ಇದ್ದರು.

ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ತಾಯಿ‌, ಮಗಳು ದಾರುಣ ಸಾವು

ಅಗಸನ ಕೆರೆ ಅಭಿವೃದ್ದಿಗೆ ಪ್ರಾಧಿಕಾರದಲ್ಲಿ 4.50 ಕೋಟಿ ರು ಈ ಮೊದಲು ಕಾಯ್ದಿರಿಸಲಾಗಿತ್ತು. ಈ ಅನುದಾನ ಬಳಕೆಗೆ ಟೆಂಡರ್‌ ಕರೆಯಲಾಗಿದೆ. ಕೆರೆ ನೀರು ಖಾಲಿ ಮಾಡಲು ಏಳು ಲಕ್ಷ ರುಪಾಯಿ ಖರ್ಚು ಮಾಡಲಾಗುತ್ತದೆ. ಕಾಮಗಾರಿಗಳು ಮುಗಿದ ನಂತರ ಮತ್ತೆ ಲಿಫ್ಟ್ ಮಾಡಿ ನೀರು ತುಂಬಿಸಲಾಗುವುದು.

ಜಿ.ಟಿ.ಸುರೇಶ್‌, ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ

click me!