ಸುಳ್ಳು ಆಶ್ವಾಸನೆ ಕೊಡೋದು ನನ್ನ ಜಾಯಮಾನವಲ್ಲ: ಎಂ.ಪಿ.ರೇಣುಕಾಚಾರ್ಯ

By Kannadaprabha News  |  First Published Dec 26, 2022, 8:13 AM IST

ಗ್ರಾಮಸ್ಥರಿಗೆ ಭರವಸೆ ನೀಡಿದ ಎಲ್ಲಾ ಸೌಲಭ್ಯಗಳ ಒದಗಿಸಿದ್ದೇನೆ, ಬೂಟಾಟಿಕೆ ಭಾಷಣೆ ಮಾಡಿ ಸುಳ್ಳು ಆಶ್ವಾಸನೆ ನೀಡಿ ಹೋಗುವ ಜಾಯಮಾನ ನನ್ನದಲ್ಲ. ಈಗ ನೀವು ಹೇಳಿರುವ ಕೆಲಸಗಳ ಪ್ರಾಮಾಣಿಕವಾಗಿ ಮಾಡುತ್ತೇನೆ. ಸುಳ್ಳು ಭರವಸೆ ನಾನು ಎಂದಿಗೂ ನೀಡುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.


ಹೊನ್ನಾಳಿ (ಡಿ.26) : ಗ್ರಾಮಸ್ಥರಿಗೆ ಭರವಸೆ ನೀಡಿದ ಎಲ್ಲಾ ಸೌಲಭ್ಯಗಳ ಒದಗಿಸಿದ್ದೇನೆ, ಬೂಟಾಟಿಕೆ ಭಾಷಣೆ ಮಾಡಿ ಸುಳ್ಳು ಆಶ್ವಾಸನೆ ನೀಡಿ ಹೋಗುವ ಜಾಯಮಾನ ನನ್ನದಲ್ಲ. ಈಗ ನೀವು ಹೇಳಿರುವ ಕೆಲಸಗಳ ಪ್ರಾಮಾಣಿಕವಾಗಿ ಮಾಡುತ್ತೇನೆ. ಸುಳ್ಳು ಭರವಸೆ ನಾನು ಎಂದಿಗೂ ನೀಡುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾನು ಒಂದು ಬಾರಿ ಸೋತಾಗಲೂ ಮನೆಯಲ್ಲಿ ಕೂರದೆ ಅವಳಿ ತಾಲೂಕಿನ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಿದ್ದೇನೆ ಎಂದರು. ಬಿಜೆಪಿ ಸರ್ಕಾರ ರೈತರ ಮನೋಸ್ಥೈರ್ಯವನ್ನು ಹೆಚ್ಚಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆಯಲ್ಲದೇ ಕೇಂದ್ರ ಸರ್ಕಾರ ರೈತರು ಸ್ವಾಭಿಮಾನಿಗಳಾಗಿ ಜೀವನ ನಡೆಸಲು 6ಸಾವಿರ ರು.ಗಳ ನೀಡಿದರೆ ರಾಜ್ಯ ಸರ್ಕಾರ 4ಸಾವಿರ ರು.ಗಳನ್ನು ನೀಡುತ್ತಿದೆ ಎಂದರು.

Tap to resize

Latest Videos

ಗ್ರಾಮ ವಾಸ್ತವ್ಯ ಮೋಜು ಮಸ್ತಿಗಾಗಿ ಮಾಡುತ್ತಿಲ್ಲ: ಶಾಸಕ ರೇಣುಕಾಚಾರ್ಯ

26 ಕೋಟಿ ರು.ಅನುದಾನದಲ್ಲಿ ಅಭಿವೃದ್ಧಿ:

ಬಸವನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ, ಬಾಕ್ಸ್‌ ಚರಂಡಿ, ಕೆರೆ ಹೂಳೆತ್ತುವುದು, ಜೆಜೆಎಂ ಕಾಮಗಾರಿ, ವಿವಿಧ ಪೈಪ್‌ಲೈನ್‌ ಕಾಮಗಾರಿ, ರಸ್ತೆ ದುರಸ್ತಿ, ಸರ್ಕಾರಿ ಪ್ರೌಢಶಾಲೆ, ಸಮುದಾಯ ಭವನ, ಅಂಗನವಾಡಿ ಕೇಂದ್ರ ದುರಸ್ತಿ ಸೇರಿ ವಿವಿಧ ಕಾಮಗಾರಿಗಳಿಗೆ 14.76ಕೋಟಿ ರು. ಹಾಗೂ ಮಾದನಬಾವಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ, ಆರೋಗ್ಯ ಉಪಕೇಂದ್ರ ದುರಸ್ತಿ, ಗವಿಸಿದ್ದೇಶ್ವರ ಸಮುದಾಯ ಭವನ, ರಸ್ತೆ ಕಾಮಗಾರಿಗಳು, ಸರ್ಕಾರಿ ಶಾಲಾ ಕೊಠಡಿಗಳು, ಶಾಲೆಯಲ್ಲಿ ಹೈಟೆಕ್‌ ಶೌಚಾಲಯ, ಕುಡಿಯುವ ನೀರಿನ ಯೋಜನೆ ಸೇರಿ ವಿವಿಧ ಕಾಮಗಾರಿಗಳಿಗೆ 11.30ಕೋಟಿ ರು.ಸೇರಿದಂತೆ ಒಟ್ಟು 26 ಕೋಟಿ ರು.ಅನುದಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಪೂರ್ಣಗೊಳಿಸಿದ್ದು ಕೆಲವು ಪ್ರಗತಿಯಲ್ಲಿವೆ ಎಂದು ಹೇಳಿದರು.

ವಿವಿಧ ಸೌಲಭ್ಯಗಳ ವಿತರಣೆ:

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ 50, ನಿರ್ಗತಿಕ ವಿಧವಾ ವೇತನ 3, ಅಂಗವಿಕಲರ ವೇತನ 21, ಮನಸ್ವಿನಿ 1, ರೈತರ ವಿಧವಾ ವೇತನ 1, ಮನೆ ಹಾನಿ ಪರಿಹಾರ ಮಂಜೂರಾತಿ ಆದೇಶ ಪತ್ರಗಳು ಸೇರಿ 136 ಫಲಾನುಭವಿಗಳಿಗೆ ಸೌಲಭ್ಯಗಳ ವಿತರಿಸಿದ್ದೇವೆ ಹಾಗೂ 12 ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

 

ಜನಪರ ಯೋಜನೆಗಳ ಕಾಂಗ್ರೆಸ್‌ ಏಕೆ ತಂದಿಲ್ಲ: ಶಾಸಕ ರೇಣುಕಾಚಾರ್ಯ

ಗ್ರಾ.ಪಂ.ಅಧ್ಯಕ್ಷೆ ರತ್ನಾ ರಮೇಶ್‌, ಅಶ್ವಿನಿ, ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಾಲೂಕು ಪಂಚಾಯಿತಿ ಇಒ ರಾಮಭೋವಿ, ಗ್ರಾ.ಪಂ.ಸದಸ್ಯರಾದ ಮಲ್ಲಪ್ಪ, ಬಸವರಾಜ್‌, ರುದ್ರೇಶ್‌, ಕೆಂಚಮ್ಮ, ನಾಗಪ್ಪ, ಹರೀಶ್‌, ಹಳದಮ್ಮ, ಗೀತಾ, ಶಿರಸ್ತೇದಾರ್‌ ಕೆಂಚಮ್ಮ, ಉಪತಹಸೀಲ್ದಾರ್‌ ಸವಿತಾ, ರಾಜಸ್ವ ನಿರೀಕ್ಷಕ ಸಂತೋಷ, ಗ್ರಾಮದ ಮುಖಂಡರು ಮತ್ತಿತರರಿದ್ದರು.

ನಾನು ಚುನಾವಣೆ ಬಂದಾಗ ಮಾತ್ರ ಗ್ರಾಮಕ್ಕೆ ಬರುವ ಶಾಸಕನಲ್ಲ ಏನೇ ಆದರೂ ಜನ ಸಾಮಾನ್ಯರ ಮಧ್ಯದಲ್ಲಿದ್ದು ಕೆಲಸ ಮಾಡುತ್ತೇನೆ. ಕೆಲವರು ಚುನಾವಣೆ ಬಂದಾಗ ಮಾತ್ರ ಗ್ರಾಮಗಳಲ್ಲಿ ಸುತ್ತಾಟ ಮಾಡುತ್ತಾರೆ.

ಎಂ.ಪಿ.ರೇಣುಕಾಚಾರ್ಯ, ಶಾಸಕ

click me!