ಕಾರವಾರ: ಮೊಬೈಲ್‌ ಚಾರ್ಜರ್‌ ಬಾಯಲಿಟ್ಟುಕೊಂಡ ಮಗು ವಿದ್ಯುತ್‌ ಶಾಕ್‌ಗೆ ಬಲಿ..!

Published : Aug 03, 2023, 03:44 AM IST
ಕಾರವಾರ: ಮೊಬೈಲ್‌ ಚಾರ್ಜರ್‌ ಬಾಯಲಿಟ್ಟುಕೊಂಡ ಮಗು ವಿದ್ಯುತ್‌ ಶಾಕ್‌ಗೆ ಬಲಿ..!

ಸಾರಾಂಶ

ವಿದ್ಯುತ್‌ ಶಾಕ್‌ನಿಂದ ಮಗು ಅಸ್ವಸ್ಥ ಆಗಿರುವುದನ್ನು ನೋಡಿದ ಮನೆಯವರು ತಕ್ಷಣ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. 

ಕಾರವಾರ(ಆ.03):  ಬಾಯಿಯಲ್ಲಿ ಮೊಬೈಲ್‌ ಚಾರ್ಜರ್‌ ಇಟ್ಟುಕೊಂಡಿದ್ದ 8 ತಿಂಗಳ ಮಗು ವಿದ್ಯುತ್‌ ಪ್ರವಹಿಸಿ ಮೃತಪಟ್ಟ ದುರ್ಘಟನೆ ತಾಲೂಕಿನ ಸಿದ್ದರದಲ್ಲಿ ಬುಧವಾರ ನಡೆದಿದೆ.

ಸಂಜನಾ ಮತ್ತು ಸಂತೋಷ ಕಲ್ಗುಟಕರ್‌ ದಂಪತಿಯ ಮಗು ಸಾನಿಧ್ಯ ಮೃತಪಟ್ಟಿದೆ. ಮನೆಯಲ್ಲಿ ಸ್ವಿಚ್‌ ಬೋರ್ಡ್‌ಗೆ ಹಾಕಿದ್ದ ಮೊಬೈಲ್‌ ಚಾರ್ಜರ್‌ನ ವಿದ್ಯುತ್‌ ಬಂದ್‌ ಮಾಡಿರಲಿಲ್ಲ. ಈ ವೇಳೆ ಆಟವಾಡುತ್ತಿದ್ದ ಮಗು ಆನ್‌ ಆಗಿದ್ದ ಚಾರ್ಜರಿನ ವೈಯರ್‌ನ್ನು ಬಾಯಲ್ಲಿ ಇಟ್ಟುಕೊಂಡಿದೆ. ಈ ವೇಳೆ ವಿದ್ಯುತ್‌ ಪ್ರವಹಿಸಿದೆ.

ಮಹಿಳೆ ಹೊಟ್ಟೆಯಲ್ಲಿದ್ದ ಬರೋಬ್ಬರಿ 2.5 ಕೆ.ಜಿ. ತೂಕದ ಗಡ್ಡೆ ಹೊರ ತೆಗೆದ ವೈದ್ಯರು!

ವಿದ್ಯುತ್‌ ಶಾಕ್‌ನಿಂದ ಮಗು ಅಸ್ವಸ್ಥ ಆಗಿರುವುದನ್ನು ನೋಡಿದ ಮನೆಯವರು ತಕ್ಷಣ ಆ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಅತ್ಯಧಿಕ ತೆರಿಗೆ ಸಂಗ್ರಹಿಸಿ ಕಡಬ ತಾಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ; ಶೇ.103 ಗುರಿ ಸಾಧನೆ
Iran-Israel War: 5 ದಿನಗಳಿಂದ ನಿಂತಲ್ಲೇ ನಿಂತ ಹಡಗು, ಕತಾರ್ ಬಂದರಿನಲ್ಲಿ ಸಿಲುಕಿದ ಬಸವನಗುಡಿಯ 8 ಮಂದಿ ವೃದ್ಧರು!