'ಮಹತ್ ಕಾರ್ಯಕ್ಕೆ ಮುನ್ನುಡಿ ಬರೆದ ಮೋದಿ'

By Kannadaprabha NewsFirst Published Sep 18, 2020, 10:39 AM IST
Highlights

ಪ್ರಧಾನಿ ನರೇಂದ್ರ ಮೋದಿ ಮಹತ್ ಕಾರ್ಯ ಒಂದಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಮೂಲಕ ದೇಶದ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ಸಾಗಿದ್ದಾರೆ ಎನ್ನಲಾಗಿದೆ.

 ಚಿಕ್ಕನಾಯಕನಹಳ್ಳಿ (ಸೆ.18): ಭಾರತವನ್ನು ವಿಶ್ವ ಗುರುವನ್ನಾಗಿಸುವ ಭಾರತೀಯರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದಾಪುಗಾಲಿಟ್ಟು ಸಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ಎಸ್‌.ಕಿರಣ್‌ಕುಮಾರ್‌ ನುಡಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನ ಹಿನ್ನೆಲೆ ಪಟ್ಟಣದಲ್ಲಿ ಪಕ್ಷದ ತಾಲೂಕು ಘಟಕ ಹಮ್ಮಿಕೊಂಡಿದ್ದ ದೇವಾಲಯದ ಆವರಣ ಸ್ವಚ್ಛತೆ, ಶಾಲಾ ಆವರಣದಲ್ಲಿ ಸಸಿ ನೆಡುವುದು ಹಾಗೂ ಕೋವಿಡ್‌ ರೋಗಿಗಳಿಗೆ ಹಣ್ಣು ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿ ಅವರು ಮಾತನಾಡುತ್ತಿದ್ದರು.

ಪ್ರಪಂಚದಲ್ಲಿ ಮೋದಿಗೆ ಮೋದಿಯೇ ಸಾಟಿ. ಅವರ ಸಮನಾಗಿ ಬೇರೊಬ್ಬ ಮೋದಿ ಬರಲು ಸಾಧ್ಯವೇಯಿಲ್ಲ. ಜಗತ್ತಿನೆದುರು ಭಾರತವೆಂದರೆ ಭಿಕ್ಷುಕರ ರಾಷ್ಟ್ರ, ಹಾವಾಡಿಗರ ದೇಶವೆಂದು ಮೂಗು ಮುರಿಯ್ತುತಿದ್ದವರು, ನಮ್ಮೆದುರು ಕೈಕಟ್ಟಿನಿಲ್ಲುವಂತಾಗಿದೆ. 125 ಕೋಟಿ ಜನಸಂಖ್ಯೆಯಿರುವ, ವಿವಿಧತೆಯಲ್ಲಿ ಏಕತೆಯಿರುವ ವಿಭಿನ್ನ ದೇಶ ನಮ್ಮದು ಎಂದರು.

ಎರಡು ವರ್ಷ ಮೋದಿ ಹಿಮಾಲಯದಲ್ಲಿ ಏನು ಮಾಡ್ತಿದ್ರು ಗೊತ್ತಾ? ...

ಇಂತಹ ರಾಷ್ಟ್ರವನ್ನು ಮುನ್ನಡೆಸಿದ ಮಹಾನ್‌ ನಾಯಕ ಮೋದಿ. ಅವರ ಆಡಳಿತದಲ್ಲಿ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.ಅವುಗಳಲ್ಲಿ ಪ್ರಮುಖವಾಗಿ ಗಂಗಾನದಿ ಶುದ್ದೀಕರಣಕ್ಕಾಗಿ ನಮಾಮಿ ಗಂಗೆ,ಸ್ಮಾರ್ಟ್‌ ಸಿಟಿ ಹಾಗೂ ಆದರ್ಶ ಗ್ರಾಮ ಯೋಜನೆ, ಸ್ವಚ್ಛ ಭಾರತ ಪರಿಕಲ್ಪನೆ, ರೈತರಿಗಾಗಿ ಕಿಸಾನ್‌ ಸನ್ಮಾನ್‌, ಜನಧನ್‌ ಯೋಜನೆ, 20 ಲಕ್ಷ ಕೋಟಿ ಕೊರೋನಾ ಪ್ಯಾಕೇಜ್‌, ಒಂದು ದೇಶ-ಒಂದು ಪಡಿತರ ಚೀಟಿ, ಮೇಕ್‌ ಇನ್‌ ಇಂಡಿಯಾ ಮುಂತಾದ ಯೋಜನೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿವೆ ಎಂದರು.

ದೇಶದ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಗಟ್ಟಿನಿರ್ಧಾರ ಕೈಗೊಳ್ಳುವಲ್ಲಿ ಹಿಂದು-ಮುಂದು ನೋಡದ ಎದೆಗಾರಿಕೆ ಅವರನ್ನು ಇಂದು ಜನರ ಮನದಲ್ಲಿ ನಮ್ಮ ನಾಯಕ ಎಂದು ಸ್ವೀಕಾರ ಮಾಡಿವೆ. ಇಂತಹ ಜನರ ಹಿತಕ್ಕಾಗಿ ಸಮರ್ಪಣಾ ಮನೋಭಾವದ ವಿಭೂತಿ ಪುರಷನ ಕಲ್ಯಾಣ ಮತ್ತು ಆಯುಸ್‌ವೃದ್ಧಿಗಾಗಿ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಹುಟ್ಟುಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.

ತಾಲೂಕು ಅಧ್ಯಕ್ಷ ಎಂ.ಎಂ.ಜಗದೀಶ್‌ ಮಾತನಾಡಿ, ನಮ್ಮ ದೇಶ ಭ್ರಷ್ಟಾಚಾರ, ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯಲ್ಲಿ ಮುಳುಗಿ ಹೋಗ್ತುತ್ದಿದಾಗ, ಆಪತ್ಭಾಂದವನಂತೆ ಬಂದ ಮೋದಿಯವರು, ಕಡಿಮೆ ಅವಧಿಯಲ್ಲಿ ಇಡೀ ಜಗ್ತತೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಮಹಾನ್‌ ಮಾಂತ್ರಿಕ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ಸಿ.ಎಸ್‌.ರಾಜಣ್ಣ, ಪ್ರಧಾನಕಾರ್ಯದರ್ಶಿ ಹನುಮಜಯ, ವಕೀಲರಾದ ರಮೇಶ್‌, ನವಿಲೆ ಮಧು ಮುಂತಾದವರಿದ್ದರು.

click me!