ಶಿರಾ ಉಪ ಚುನಾವಣೆ : ಈ ಅಭ್ಯರ್ಥಿ ಗೆಲುವು ಖಚಿತವೆಂದು ಭವಿಷ್ಯ

By Kannadaprabha NewsFirst Published Sep 18, 2020, 10:11 AM IST
Highlights

ತುಮಕೂರಿನಲ್ಲಿಶಿಘ್ರವೇ ಉಪ ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ಯಾರಿಗೆ ಗೆಲುವು ಎನ್ನುವ ಭವಿಷ್ಯ ನುಡಿಯಲಾಗಿದೆ. ಆದರೆ ಎಲ್ಲಾ ಅಭ್ಯರ್ಥಿಗಳು ತಮ್ಮದೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಮಧುಗಿರಿ (ಸೆ.18): ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಗೆಲುವು ಖಚಿತ ಎಂದು ದೊಡ್ಡೇರಿ ಹೋಬಳಿ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹಾಗೂ ತಾ.ಪಂ.ಸದಸ್ಯ ಎಚ್‌.ಆರ್‌.ದೊಡ್ಡಯ್ಯ ತಿಳಿಸಿದರು.

ತಾಲೂಕಿನ ಹನುಮನಹಳ್ಳಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿರಾ ಉಪ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಟಿ.ಬಿ.ಜಯಚಂದ್ರರ ಹೆಸರು ನಿರೀಕ್ಷೆಯಂತೆ ಅಂತಿಮವಾಗಿದೆ. ಜಯಚಂದ್ರ ಅವರು ಹಿಂದೆ ನೀರಾವರಿ ಸಚಿವರಾಗಿದ್ದಾಗ ಮಾಡಿದ ನೀರಾವರಿ ಯೋಜನೆಗಳು ಚುನಾವಣೆಯಲ್ಲಿ ಕೈಡಿಯಲಿದ್ದು, ಯಾವುದೇ ಸಂಶಯವಿಲ್ಲದೆ ಈ ಉಪ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ. ನಮಗೂ ಶಿರಾಕ್ಕೂ ಕೊಟ್ಟು ತಂದಿರುವ ಸಂಬಂಧವಿರುವುದರಿಂದ ನಾನು ಕಟ್ಟಾಕಾಂಗ್ರೆಸ್‌ ಪಕ್ಷದ ಸಂಘಟಿತ ನಾಯಕನಾಗಿದ್ದು ನಾನು ಕೂಡ ಶಿರಾ ಕ್ಷೇತ್ರದ ಉದ್ದಗಲಕ್ಕೂ ಕ್ಯಾಂಪೆನ್‌ ಮಾಡಿ ಜಯಚಂದ್ರ ಅವರ ಗೆಲುವಿಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಶಿರಾ ಬೈ ಎಲೆಕ್ಷನ್‌ಗೆ ಕಾಂಗ್ರೆಸ್ ರಣಕಹಳೆ: ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಉಸ್ತುವಾರಿ ನೇಮಕ

ನನಗೆ ಜನ್ಮ ನೀಡಿದ ತಂದೆ-ತಾಯಿ ನಂತರದ ಸ್ಥಾನದಲ್ಲಿ ಜಯಚಂದ್ರ ಅವರಿದ್ದು, ರಾಜಕೀಯ ಗುರು ಕೂಡ ಆಗಿದ್ದಾರೆ. ಯಾವುದೇ ಚುನಾವಣೆಯಲ್ಲಿ ಸ್ಥಳೀಯ 2-3ನೇ ಹಂತದ ಮುಖಂಡರ ಸೇವೆಯ ಆಧಾರದ ಮೇಲೆ ಮತಗಳು ಬೀಳಲಿವೆ. ಅವರ ಶ್ರಮ ಅಗತ್ಯವಾಗಿದ್ದು ಯಾರನ್ನೂ ಕಡೆಗಣಿಸುವಂತಿಲ್ಲ. ಮಧುಗಿರಿಯಿಂದಲೂ ಹಲವಾರು ಬಂಧುಗಳು, ಸ್ನೇಹಿತರಿದ್ದು, ನಾವೂ ಸಹ ಜಯಚಂದ್ರರ ಗೆಲುಗೆ ಶಿರಾ ಕ್ಷೇತ್ರದಲ್ಲಿ ಕ್ಯಾಂಪೆನ್‌ ಮಾಡಿ ಗೆಲ್ಲಿಸಲು ಶ್ರಮಿಸುತ್ತೇವೆ ಎಂದರು.

ಮಾಜಿ ವಿ ಎಸ್‌ಎಸ್‌ಎನ್‌ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಜಯಚಂದ್ರ ಶಿರಾ ಕ್ಷೇತ್ರದ ಧ್ವನಿಯಾಗಿದ್ದಾರೆ. ಕ್ಷೇತ್ರದ ರೈತರ ಪರವಾಗಿ ಹಾಗೂ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮುತುವರ್ಜಿ ವಸಿದ್ದವರು. ಈ ಬಾರಿ ಯಾರೇ ಬಂದರೂ ಚುನಾವಣೆಯಲ್ಲಿ ಜಯಚಂದ್ರರಿಂದ ಗೆಲುವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇವರ ಗೆಲುವಿಗೆ ನಾವೆಲ್ಲರೂ ಶ್ರಮಿಸಲಿದ್ದು ನಾಳೆಯಿಂದಲೇ ಪ್ರಚಾರ ಕಾರ್ಯ ಆರಂಭವಾಗಲಿದೆ ಎಂದರು.

click me!