ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ ಮುಂದುವರಿದೆ. ಇಂದು ಕೂಡ ಪುರಸಭೆಯ ಕಛೇರಿ ಮೇಲೆ ದಾಳಿ ನಡೆಸಿ ಅಧಿಕಾರಿ, ಗುಮಾಸ್ತರನ್ನು ಬಲೆಗೆ ಬಿಳಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮಾ.7): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ ಮುಂದುವರಿದೆ.ಇಂದು ಕೂಡ ಪುರಸಭೆಯ ಕಛೇರಿ ಮೇಲೆ ದಾಳಿ ನಡೆಸಿ ಅಧಿಕಾರಿ, ಗುಮಾಸ್ತರನ್ನು ಬಲೆಗೆ ಬಿಳಿಸಿದ್ದಾರೆ. ಈ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ಸೇರಿ 4ನೇ ಪ್ರಕರಣವಾಗಿದೆ. ಈ ಮೂಲಕ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ನಡುಕಹುಟ್ಟಿಸಿದ್ದಾರೆ. ವಾಸದ ಮನೆ ಹಾಗೂ ಮನೆ ಪಕ್ಕ ಇದ್ದ ಖಾಲಿ ಜಾಗದ ಪೌತಿ ಖಾತೆ ಮಾಡಿಕೊಡಲು 8 ಸಾವಿರಕ್ಕೆ ಬೇಡಿಕೆ ಇಟ್ಟು ಐದು ಸಾವಿರ ಮುಂಗಡವಾಗಿ ಲಂಚ ಪಡೆದುಕೊಂಡಿದ್ದ ಪುರಸಭೆ ಕಂದಾಯ ಅಧಿಕಾರಿ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪುರಸಭೆಯಲ್ಲಿ ನಡೆದಿದೆ.
ಕಂದಾಯ ಅಧಿಕಾರಿ, ಗುಮಾಸ್ತ ಲೋಕಾಯುಕ್ತ ಬಲೆಗೆ:
ಬೀರೂರು ಪುರಸಭೆಯ ಕಂದಾಯ ಅಧಿಕಾರಿ ಯೋಗೀಶ್ ಹಾಗೂ ಗುಮಾಸ್ತ ತಮ್ಮಯ್ಯ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಬೀರೂರು ಪಟ್ಟಣದಲ್ಲಿ ವಾಸಿವಿದ್ದ ವ್ಯಕ್ತಿಯೊಬ್ಬರ ಅಜ್ಜ-ಅಜ್ಜಿ ತೀರಿಕೊಂಡಿದ್ದರು. ಅವರ ಮರಣದ ನಂತರದ ಅವರ ಹೆಸರಿನಲ್ಲಿದ್ದ ಜಾಗವನ್ನ ಅವರ ಮೂವರು ಮಕ್ಕಳ ಹೆಸರಿಗೆ ಜಂಟಿ ಪೌತಿ ಖಾತೆಗೆ ಮನವಿ ಮಾಡಿದ್ದರು.
ನಿತ್ಯ ನೀರು ಹೊರುತ್ತಿರುವ ಶಾಲಾ ಮಕ್ಕಳು, ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಎಚ್ಚೆತ್ತ
ಈ ಕೆಲಸ ಆಗಲು ಎಲ್ಲರಿಗೂ ಹಣ ನೀಡಬೇಕು ಎಂದು ತಮ್ಮಯ್ಯ ಆರಂಭದಲ್ಲಿ ಐದು ಸಾವಿರ ಹಣ ಪಡೆದುಕೊಂಡಿದ್ದರು. ಬಳಿಕ ಜಮೀನು ವಾರಸುದಾರರ ಪುತ್ರ ಕಚೇರಿಗೆ ಬಂದು ಪೌತಿಖಾತೆ ಹಾಗೂ ಇ-ಸ್ವತ್ತು ಕೇಳಿದಾಗ ಕಂದಾಯ ಅಧಿಕಾರಿ ನನಗೆ ಯಾವ ದುಡ್ಡು ಬಂದಿಲ್ಲ. ನೀನು ಕೊಟ್ಟ ಐದು ಸಾವಿರವನ್ನ ತಮ್ಮಯ್ಯನವರೇ ಇಟ್ಟುಕೊಂಡಿದ್ದಾರೆ. ನೀನು ನನಗೆ ಮತ್ತೆ ಮೂರು ಸಾವಿರ ಕೊಟ್ಟರೆ ಮಾತ್ರ ನಿನಗೆ ದಾಖಲೆ ಮಾಡಿಕೊಡುತ್ತೇನೆ ಎಂದಿದ್ದಾರೆ.
ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ ಕಾಡ್ಗಿಚ್ಚು, ಬೆಂಕಿ ನಂದಿಸಲು ಹೋಗಿದ್ದ ಮೂವರು ಅರಣ್ಯ ಅಧಿಕಾರಿಗಳ ಬೈಕ್ ಭಸ್ಮ!
ತಮ್ಮಯ್ಯ ಹಾಗೂ ಯೋಗೀಶ್ ಅವರ ಎಲ್ಲಾ ಸಂಭಾಷಣೆಯನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ವ್ಯಕ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಇಂದು ಉಳಿದ ಮೂರು ಕೊಡುತ್ತೇನೆ ಎಂದು ಬಂದ ವ್ಯಕ್ತಿಪುರಸಭೆ ಕಚೇರಿಯಲ್ಲೇ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.