Kodagu: ಒಂದೇ ವೇದಿಕೆಯಲ್ಲಿ ಮೇಳೈಸಿದ ವಿವಿಧ ಸಮುದಾಯಗಳ ಜಾನಪದ ನೃತ್ಯಗಳು

By Suvarna News  |  First Published Mar 7, 2023, 9:09 PM IST

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಮೂಲ ಸಂಸ್ಕೃತಿ- ಕನ್ನಡ ಸಂಸ್ಕೃತಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಗಿರಿಜನ ಹಾಡು, ಕೊಡವ ವಾಲಗತಾಟ್ಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಅತಿಥಿಗಳು.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 
ಕೊಡಗು (ಮಾ.7): ಸಾಕಷ್ಟು ಆಧುನಿಕತೆಗೆ ತೆರೆದುಕೊಂಡಿರುವ ನಾವು ಸಂಗೀತ, ನೃತ್ಯ, ವೆಸ್ಟ್ರನ್ ಮ್ಯೂಸಿಕ್ ಎಂದು ಎಷ್ಟೆಲ್ಲಾ ತರಾವರಿ ಮ್ಯೂಸಿಕ್ ಇವೆ ಅಲ್ವಾ.? ಆದರೆ ಎಷ್ಟೇ ಮ್ಯೂಸಿಕ್ ಇದ್ದರೂ ನಮ್ಮ ಜಾನಪದ ಮ್ಯೂಸಿಕ್ ಮುಂದೆ ಏನೂ ಅಲ್ಲ ಎನಿಸಿಬಿಟ್ಟರೆ ದೊಡ್ಡದೇನು ಅಲ್ಲ ಎಂದರೆ ತಪ್ಪಲ್ಲ. ಇಲ್ಲಿಯೂ ಅಂತಹ ಜನಪದ ಸಂಗೀತ ಎಲ್ಲವನ್ನೂ ಮೀರಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ನೀರಿನ ಹಳೇ ಡ್ರಮ್ಮುಗಳೇ ಇವರ ಮ್ಯೂಸಿಕ್ ಡ್ರಮ್ಸ್, ಬಿದಿರನ ಬೊಂಬುಗಳೇ ತಬಲ, ಟಿವಿಯ ಆಂಟೆನಾದ ಬಾಂಡಲಿಯೇ ಚಿಲ್ಸ್. ಹೀಗೆ ನಮ್ಮ ದಿನಬಳಕೆಯ ಅನುಪಯುಕ್ತ ವಸ್ತುಗಳೇ ಇವರ ನೃತ್ಯಕ್ಕೆ ಮ್ಯೂಸಿಕ್ ಪರಿಕರಗಳು.  ಇಂತಹ ಮ್ಯೂಸಿಕ್ ಗೆ ಸಾಕ್ಷಿಯಾಗಿದ್ದು ಮಂಜಿನಗರಿ ಮಡಿಕೇರಿ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಮೂಲ ಸಂಸ್ಕೃತಿ- ಕನ್ನಡ ಸಂಸ್ಕೃತಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ನೀರಿನ ಡ್ರಮ್, ಆಂಟೆನಾದ ಬಾಂಡಲಿ, ಬಿದಿರಿನ ಬೊಂಬುಗಳನ್ನು ಬಾರಿಸುತ್ತಿದ್ದರೆ ನೆರೆದಿದ್ದ ಜನರನ್ನು ಎದ್ದು ಕುಣಿಯುವಂತೆ ಮಾಡಿತ್ತು.

ಆ ಜಾನಪದ ವಾದ್ಯಗಳಿಗೆ ನಾಣಚ್ಚಿ ಹಾಡಿಯ ರಮೇಶ್ ಮತ್ತು ತಂಡದವರು ನಂಗ ಜೇನು ಕುರುಬ ಮಕ್ಕಳು ಗೀತೆಗೆ ಹೆಜ್ಜೆ ಹಾಕಿದ್ದು ಎಲ್ಲರಲ್ಲೂ ಜೋಷ್ ತುಂಬಿತು. ನಂತರ ಕೊಡವ ವಾಲಗತಾಟ್ ವೇದಿಕೆ ಮೇಲಿದ್ದ ಅತಿಥಿಗಳಾದಿಯಾಗಿ ಎಲ್ಲರೂ ಬಂದು ಹೆಜ್ಜೆ ಹಾಕಿದರು. ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿಯ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ, ಜಿಲ್ಲಾ ಸಂಚಾಲಕಿ ಸುಶೀಲ ಸೇರಿದಂತೆ ಪ್ರಮುಖ ಅತಿಥಿಗಳು, ಪ್ರೇಕ್ಷಕರು ಕೊಡವ ವಾಲಗತಾಟ್ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇದಕ್ಕೂ ಮೊದಲು ಕುಡಿಯರ ಶಾರದ ಮತ್ತು ತಂಡದವರಿಂದ ದುಡಿ ಹಾಡು ಎಲ್ಲರ ಗಮನ ಸೆಳೆಯಿತು.

Latest Videos

undefined

ಗಿರೀಶ್ ಮತ್ತು ತಂಡದವರಿಂದ ಗೀಗೀ ಪದ ಹಾಗೂ ಲಾವಣಿ ಹಾಡು, ರಾಜು ಮತ್ತು ತಂಡದವರಿಂದ ಜಾನಪದ ಹಾಡು ಮಾಧವ ಮತ್ತು ತಂಡದವರಿಂದ ಕಂಗೀಲು ನೃತ್ಯ ಗಮನ ಸೆಳೆಯಿತು. ಈ ಸಂದರ್ಭ ಮಾತನಾಡಿದ ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಕಳೆದ ಒಂದು ತಿಂಗಳಿನಿಂದ ಕರ್ನಾಟಕ ರಾಜ್ಯದ್ಯಂತ 160 ಕಲಾಪ್ರಕಾರಗಳನ್ನು ತರಬೇತಿ ನೀಡಲಾಗಿದೆ. ತಲತಲಾಂತರಗಳಿಂದ ರೂಢಿಯಲ್ಲಿದ್ದ ಕಲಾಪ್ರಕಾರಗಳು ಕಣ್ಮರೆಯಾಗುತ್ತಿದ್ದವು.

ಮಹಾರಾಷ್ಟ್ರದಲ್ಲಿ ಜಾನಪದ ಲಾವಣಿ ಡ್ಯಾನ್ಸ್‌ ವಿವಾದ, ಅದು ಅಷ್ಟೊಂದು ಅಶ್ಲೀಲವೇ?

ಅವುಗಳನ್ನು ಉಳಿಸಿ ಬೆಳೆಸಬೇಕೆಂಬ ದೃಷ್ಟಿಯಿಂದ 180 ಶಿಕ್ಷಕರಿಂದ 1800 ಕಲಾವಿದರಿಗೆ ತರಬೇತಿಯನ್ನು ನೀಡುವ ಮೂಲಕ ನಮ್ಮ ದೇಶದ ಭವ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಗಿದೆ ಎಂದರು. ದುಡಿಹಾಡಿಗೆ ನೃತ್ಯ ಮಾಡಿದ ಕುಡಿಯರ ಶಾರದ ಅವರು ನಮ್ಮ ಅಜ್ಜ ಮುತ್ತಾತನ ಕಾಲದಿಂದ ಬಂದ ದುಡಿಕೊಟ್ಟುಪಾಟ್ ಸೇರಿದಂತೆ ಬೇರೆ ಬೇರೆ ಕಲೆಗಳನ್ನು ಆಯಾ ಸಮುದಾಯಗಳು ಪ್ರದರ್ಶಿಸುತ್ತಿವೆ. ಸರ್ಕಾರ ಈ ರೀತಿ ಪ್ರೋತ್ಸಾಹ ನೀಡುವ ಮೂಲಕ ಜಾನಪದ ಕಲೆಗಳನ್ನು ಉಳಿಸಲು ಸಹಕಾರಿಯಾಗುತ್ತಿದೆ ಎಂದರು.

ಲಲಿತ, ಶಾಸ್ತ್ರೀಯ ಕಲೆಗಳಿಗೆ ಜಾನಪದವೇ ಬೇರು: ಡಾ.ಕೃಪಾ ಫಡಕೆ

ಕಾರ್ಯಕ್ರಮಕ್ಕೂ ಮುನ್ನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ವೃತ್ತದಿಂದ ಡಾ. ಬಿ.ಆರ್ ಅಂಬೇಡ್ಕರ್ ಭವನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಒಟ್ಟಿನಲ್ಲಿ ಒಂದೇ ವೇದಿಕೆಯಲ್ಲಿ ಹಲವು ಸಮುದಾಯದ ಮೂಲ ಜಾನಪದ ಕಲೆಗಳು ಅನಾವರಣಗೊಂಡು ಎಲ್ಲರ ಕಣ್ಮನ ಸೆಳೆದವು.

click me!