ಸಮಾಜ ಸೇವಕ ವೀರೇಶ ಹಿರೇಮಠರ ಧಾರ್ಮಿಕ ಜಾಗೃತಿ, ಪರಿಸರ ಕಾಳಜಿಗೆ ಭಾರಿ ಮೆಚ್ಚುಗೆ
ಬೆಳಗಾವಿ(ಮಾ.07): ನಗರದ ಬಾಕ್ಸೈಟ್ ರಸ್ತೆಯ ಬಸವ ಕಾಲೋನಿಯಲ್ಲಿ ಶನಿವಾರ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಸರ್ವಲೋಕ ಸೇವಾ ಫೌಂಡೇಶನ್ ವತಿಯಿಂದ ಸುಮಾರು 4 ಸಾವಿರ ಹಿಂದು ದೇವಾನುದೇವತೆಗಳ ಭಗ್ನಗೊಂಡಿದ್ದ ಭಾವಚಿತ್ರಗಳನ್ನು ಹಿಂದು ಧರ್ಮದ ಪದ್ಧತಿಯಂತೆ ಧಾರ್ಮಿಕ ವಿಧಿ-ವಿಧಾನದಂತೆ ಶಾಸೊತ್ರೕಕ್ತವಾಗಿ ಅಗ್ನಿಸ್ಪರ್ಶ ಮಾಡುವ ಮೂಲಕ ಸಂಸ್ಕಾರ ನೀಡಲಾಯಿತು. ಹಾಗೆಯೇ ಬಿಲ್ಪಪತ್ರಿ, ಬನ್ನಿ, ಅರಳೆ, ಆಲದ ಮರದ ಸಸಿಗಳನ್ನು ಹಚ್ಚಿ ಅವುಗಳಿಗೆ ವಿಸರ್ಜನೆ ಮಾಡಿದ ಬೂದಿಯನ್ನು ಬಳಸುವುದರೊಂದಿಗೆ ಧಾರ್ಮಿಕ ಜಾಗೃತಿ ಹಾಗೂ ಪರಿಸರ ಕಾಳಜಿ ಮೂಡಿಸಿದರು.
ನಗರದ ಪ್ರಮುಖ ಸ್ಥಳಗಳಲ್ಲಿರುವ ಮರದ ಬುಡಗಳಲ್ಲಿ ರಾಶಿ ಹಾಕಿದ್ದ ಈ ರೀತಿಯ ಭಗ್ನಗೊಂಡ ಫೋಟೋ ಫ್ರೇಮ…ಗಳನ್ನು ತಮ್ಮ ಸ್ನೇಹಿತರೊಂದಿಗೆ ಸೇರಿ ತೆರವುಗೊಳಿಸಿದ್ದಾರೆ. ಶ್ರಮದಾನದ ರೀತಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದ್ದು, ಸಂಗ್ರಹಿಸಲಾದ ಫೋಟೋಗಳಲ್ಲಿ ಗಾಜು, ಫ್ರೇಮ್‌ಗಳನ್ನು ಪ್ರತ್ಯೇಕಗೊಳಿಸಿ ದೇವರ ಭಾವಚಿತ್ರಗಳನ್ನು ಮಾತ್ರ ತೆಗೆದುಕೊಂಡು ಸೂಕ್ತ ಸಂಸ್ಕಾರ ಮಾಡುವುದಲ್ಲದೇ ಗಾಜುಗಳನ್ನು ಹಾಗೂ ಫ್ರೇಮ್‌ಗಳನ್ನು ಅಗತ್ಯ ಬಳಕೆದಾರರಿಗೆ ನೀಡುವ ಮೂಲಕ ಪುನರ್ ಬಳಕೆಗೆ ಪ್ರೋತ್ಸಾಹಿಸುತ್ತಿದ್ದಾರೆ.
ಬೆಳಗಾವಿ: ಪ್ರಯಾಣಿಸುವ ವೇಳೆ ಏಕಾಏಕಿ ಬೆಂಕಿ: ಕಣ್ಮುಂದೆ ಸುಟ್ಟು ಕರಕಲಾದ ಕಾರು!
ವಿಸರ್ಜನೆ ಕಾರ್ಯದಲ್ಲಿ ಮಹಾನಗರ ಪಾಲಿಕೆ ಉಪಮಹಾಪೌರರಾದ ರೇಷ್ಮಾ ಪಾಟೀಲ, ಯಲ್ಲೋಜಿರಾವ ಪಾಟೀಲ, ರಾಮ ನಿಲಜಕರ, ಗಜಾನನ ಪಾಟೀಲ, ದೇವಪ್ಪಾ ಕಾಂಬಳೆ, ಗುರುರಾಜ ವಾಲಿ, ಬಾಳು ಕಣಬರಕರ, ಆದಿ ಪಾಟೀಲ, ಸುರೇಶ ಹಂಚಿನಮನಿ, ವಿಜಯಕುಮಾರ ಮೋರೆ, ಉಜ್ವಲಾ ಗಾವಡೆ, ಮಹಾದೇವಿ ಹಿರೇಮಠ, ಮಾರುತಿ ಕಣಬರ, ಲಿಂಗು ಬುರ್ಲಕಟ್ಟಿ, ಆನಂದ ಬಾತಖಾಂಡೆ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಮನೆ ಮಂದಿರಗಳನ್ನು ನಿರ್ಮಿಸುವಾಗ ಇಷ್ಟ ಪಟ್ಟು ಹಾಕಿದ ನಮ್ಮ ನಂಬಿಕೆಯ ದೇವರ ಛಾಯಾಚಿತ್ರ ಮುಂತಾದ 10 ಹಲವು ಧಾರ್ಮಿಕ ಭಾವನೆಗಳುಳ್ಳ ಮೂರ್ತಿಗಳನ್ನು ತಮ್ಮ ಗೃಹಗಳನ್ನು ನವೀಕರಿಸುವ ಸಂದರ್ಭದಲ್ಲಿ ಇಲ್ಲವೇ ಪೂಜಿಸುತ್ತಿದ್ದ ಮೂರ್ತಿಗಳ ಕೈ ಕಾಲುಗಳು ಭಗ್ನಗೊಂಡಾಗ ದಾರಿ ಬದಿ ಇಲ್ಲವೇ ಯಾವುದೇ ಮರದ ಬದಿ ಎಸೆಯಲಾಗುತ್ತೆ. ಇವುಗಳನ್ನು ಸೂಕ್ತ ಸ್ಥಳಗಳಲ್ಲಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಖ್ಯ. ಭಗ್ನಗೊಂಡ ಮೂರ್ತಿಗಳ ನಿರ್ವಹಣೆ ಧರ್ಮ ಜಾಗೃತಿ ಮಾತ್ರವಲ್ಲ, ಕರ್ತವ್ಯವೂ ಹೌದು ಅಂತ ಸಮಾಜ ಸೇವಕ, ಸರ್ವಲೋಕ ಸೇವಾ ಫೌಂಡೇಶನ್ ಮುಖ್ಯಸ್ಥ ವೀರೇಶ ಹಿರೇಮಠ ತಿಳಿಸಿದ್ದಾರೆ.
ನಗರದ ರಸ್ತೆಯ ಬದಿ ಗಿಡಮರಗಳ ಬುಡವೂ ಸೇರಿದಂತೆ ವಿವಿಧೆಡೆ ಎಸೆದ ದೇವರ ತ್ಯಾಜ್ಯ ಫೋಟೋಗಳನ್ನು ಆಯ್ದು, ಅದರ ಫ್ರೇಮ… ಮತ್ತು ಗ್ಲಾಸ್ (ಗಾಜು)ನ್ನು ಪ್ರತ್ಯೇಕಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವ ಸರ್ವಲೋಕಾ ಸೇವಾ ಫೌಂಡೇಶನ್ ಕಾರ್ಯ ಶ್ಲಾಘನೀಯ ಮತ್ತು ಮಾದರಿ. ನೈಸರ್ಗಿಕವಾಗಿ ಗರಿಷ್ಠ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುವ ಅಶ್ವತ್ಥ ವೃಕ್ಷಗಳ ರಕ್ಷಣೆಯ ಜೊತೆಗೆ ದೇವರ ತ್ಯಾಜ್ಯ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯುವಲ್ಲಿ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಔಚಿತ್ಯಪೂರ್ಣ ಮತ್ತು ಪ್ರಸ್ತುತವಾಗಿದೆ ಅಂತ ಉಪಮೇಯರ್ ರೇಷ್ಮಾ ಪಾಟೀಲ ಹೇಳಿದ್ದಾರೆ.