ಚಿಕ್ಕಮಗಳೂರು - ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ದುಸ್ಥಿತಿ ಕೇಳೋರೇ ಇಲ್ಲ!

By Gowthami K  |  First Published Sep 4, 2022, 8:16 PM IST

ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಂಚಾರಿಸುವ ಪ್ರಯಾಣಿಕರು ಯಮಯಾತನೆ ಸಂಚಾರ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳಿಂದ ಕೂಡಿರೋ ರಸ್ತೆಯಲ್ಲಿ ಚಲಿಸೋಕೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಸೆ.4): ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡ್ರೆ ಯಾವುದೇ ಅಭಿವೃದ್ಧಿಯೂ ಮರಿಚಿಕೆಯಾಗೋಲ್ಲ. ಜನಸಾಮಾನ್ಯರು, ವಿಪಕ್ಷಗಳ ಕೆಂಗಣ್ಣಿಗೆ  ಸರ್ಕಾರವೂ ಗುರಿ ಆಗೋಲ್ಲ. ಸಾರ್ವಜನಿಕರು ನಿರಾಳರಾಗಿರ್ತಾರೆ. ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯ್ನನಾಗಿ ಮಾಡಿ ಐದು ವರ್ಷ ಕಳೆದ್ರು ಯಾವುದೇ ಅಭಿವೃದ್ಧಿ ಆ ರಸ್ತೆಯಲ್ಲಿ ಕಾಣ್ತಿಲ್ಲ. 30 ಕಿ.ಮೀ ರಸ್ತೆಯಲ್ಲಿ 20 ಕಿ.ಮೀ ರಸ್ತೆ ಗುಂಡಿಬಿದ್ದು, ಹಾಳಾಗಿದ್ರೂ ಯಾವೂಬ್ಬ ಅಧಿಕಾರಿಯು ಇತ್ತ ತಲೆಕೆಡಿಸಿಕೊಂಡಿಲ್ಲ. ಸರ್ಕಾರಕ್ಕೆ ಛೀಮಾರಿ ಹಾಕ್ತಾ ಇಲ್ಲಿನ ಜನರು ಅಡಿ ಆಳದ ರಸ್ತೆಯಲ್ಲೇ ಸಾಗ್ತಿದ್ದಾರೆ. ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಂಚಾರಿಸುವ ಪ್ರಯಾಣಿಕರು ಯಮಯಾತನೆ ಸಂಚಾರ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳಿಂದ ಕೂಡಿರೋ ರಸ್ತೆಯಲ್ಲಿ ಚಲಿಸೋಕೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 30 ಕಿ.ಮೀ ಉದ್ದದ ಈ ರೋಡ್  ಶೃಂಗೇರಿ, ಧರ್ಮಸ್ಥಳದ ಸಂಪರ್ಕ ಸೇತುವೆ. ನೀವು ಈ ಮಾರ್ಗದಲ್ಲಿ 20 ಕಿಲೋ ಚಲಿಸಬೇಕಂದ್ರೆ ನಿಮ್ಮಗೆ  ಒಂದೂವರೆ ತಾಸು ಸಮಯ ಬೇಕು. ಎಲ್ಲಿ ನೋಡಿದ್ರು ಬರೀ ಗುಂಡಿಗಳೇ, ಕಳೆದ ಐದು ವರ್ಷಗಳ  ಹಿಂದೆ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆಯನ್ನ 173 ರಾಷ್ಟ್ರೀಯಹೆದ್ದಾರಿಯನ್ನಾಗಿ ಮಾಡಲಾಗಿದೆ.

Tap to resize

Latest Videos

ರಾಷ್ಟ್ರೀಯ ಹೆದ್ದಾರಿಯಾಗಿದ್ರು ಈ ರಸ್ತೆಯಲ್ಲಿ ಯಾವುದೇ ಅಭಿವೃದ್ಧಿ ಕಂಡುಬಂದಿಲ್ಲ. ಎನ್ ಎಚ್ 173 ನಾಮಪಲಕ ಬಿಟ್ರೆ ಬೇರೆ ಯಾವುದೇ ರಸ್ತೆ ಕಾಮಗಾರಿ ಇಲ್ಲ. ರಸ್ತೆ ದುಸ್ಥಿತಿ ಕಂಡ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡ್ರು ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಪ್ರಯಾಣ ಸಾವಿನ ಮೇಲೆ ನಡೆದಂತೆ ಅಂತಾರೆ ಸ್ಥಳಿಯರು.

ಹಾಳಾದ ರಸ್ತೆ, ಸಾಮಾಜಿಕ ಜಾಲತಾಣಗಳಲ್ಲಿ ಯುವತಿ ತರಾಟೆ: ಸ್ಪಷ್ಟನೆ ನೀಡಿದ ಶಾಸಕ ಭಟ್

ಪ್ರವಾಸಿಗರಿಗೆ ಗುಂಡಿಗಳು ನರಕ ಸದೃಶ್ಯ: ಜಿಲ್ಲೆಯ ಪ್ರವಾಸಿ ತಾಣಗಳನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಗುಂಡಿಗಳು ನರಕ ಸದೃಶ್ಯವನ್ನೇ ಸೃಷ್ಠಿಸುತ್ತಿದೆ. ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳಾದ ಶೃಂಗೇರಿ ಶಾರದಾ ದೇಗುಲ. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರ ಆಗಮಿಸುತ್ತಾರೆ. ಬರುವ ಪ್ರವಾಸಿಗರು, ಭಕ್ತರಿಗೆ ರಸ್ತೆಯಲ್ಲಿ  ಅರ್ಧ ಅಡಿ ಆಳದ ಗುಂಡಿಗಳಿಂದ ವಾಹನಗಳನ್ನು ಚಾಲನೆ ಮಾಡುವುದೇ ದೊಡ್ಡ ಸಾಹಸ. ಇಲ್ಲಿ ವಾಹನ ಚಾಲನೆ ಮಾಡುವಾಗ ವಾಹನಗಳ ಡ್ರೈವರ್ ಗಳ ಹರಸಾಹವನ್ನೇ ಮಾಡಿಕೊಂಡು ಡ್ರೈವ್ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.

ಕಿಲ್ಲರ್‌ ಗುಂಡಿಯಿಂದ ಪಾರಾದ ಮಹಿಳೆ: ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿನೇ ಇಲ್ವಾ?

ಕನಿಷ್ಟ ಪಕ್ಷ ಗುಂಡಿಗಳು ಬಿದ್ದಿರುವ ರಸ್ತೆಗೆ ಮಣ್ಣುನ್ನು ಹಾಕುವ ಕೆಲಸಕ್ಕೂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ವಾಹನ ಸವಾರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ರಸ್ತೆ ಇದ್ಯೋ ಇಲ್ಲೋ ಅಂತಾ ವಾಹನ ಸವಾರರು, ಜನಸಾಮಾನ್ಯರಂತು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಾ ಈ ರಸ್ತೆಯಲ್ಲಿ ಚಲಿಸುತ್ತಿದ್ದಾರೆ. ಆದ್ರೆ, ಜನಸಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸೋದ್ರಲ್ಲಿ ಸರ್ಕಾರ ಮಾತ್ರ ಹಿಂದೆ ಬಿದ್ದಿರೋದ್ರಲ್ಲಿ ಅನುಮಾನವಿಲ್ಲ. ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೆ ಬರುವ ಜನರಿಗೆ ರಸ್ತೆ ಸಾಕಪ್ಪ ಸಾಕು ಎನ್ನಷ್ಟರಮಟ್ಟಿಗೆ ಪರಿಸ್ಥಿತಿಯನ್ನು ನಿರ್ಮಾಣವಾಗಿದೆ.

click me!