
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ಅದು 7 ಕೋಟಿ 50 ಲಕ್ಷ ವೆಚ್ಚದ ಕಟ್ಟಡ. ಫುಲ್ ಹೈ-ಫೈ ಬಿಲ್ಡಿಂಗ್. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಶಂಕುಸ್ಥಾಪನೆ ಮಾಡಿದ್ರೆ, ಹಾಲಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ನೋಡುದ್ರೆನೇ ವಾವ್ ಅನ್ಸುತ್ತೆ. ಆದ್ರಿಂದು, ಕಾರ್ ಶೆಡ್ ಆಗಿರೋದು ಮಾತ್ರ ನಿಜಕ್ಕೂ ದುರಂತ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ಹೊತ್ತಿಗೆ ಸದಾ ಜನ ಜಂಗುಳಿಯಿಂದ ಕೂಡಿರ್ಬೇಕಿತ್ತು. . ಆದ್ರೆ, ಹಾಗಲಿಲ್ಲ. ಅಧಿಕಾರಿಗಳು-ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದ ಹಾಳು ಕೊಂಪೆಯಾಗಿದ್ದು, ಅಧಿಕಾರಿಗಳಿಗೆ ಕಾರ್ ಶೆಡ್ ಯಾಗಿ ಪರಿವರ್ತನೆ ಆಗಿದೆ.
ಉದ್ಘಾಟನೆಯಾದ್ರು ಕೆಲಸ ಮಾಡದ ಆಯುಷ್ ಆಸ್ಪತ್ರೆ:
ಚಿಕ್ಕಮಗಳೂರು ನಗರದ ಜಿಲ್ಲಾಪಂಚಾಯಿತಿ ಸಮೀಪ 7ವರೆ ಕೋಟಿ ವೆಚ್ಚದಲ್ಲಿ ಹೈಟೆಕ್ ಬೃಹತ್ ಜಿಲ್ಲಾ ಆಯುಷ್ ಆಸ್ಪತ್ರೆ ನಿರ್ಮಾಣವಾಗಿದೆ. ಮೂರಂತಸ್ತಿನ ಕಟ್ಟಡ ಅಧಿಕಾರಿಗಳ ಕಾರ್ ನಿಲ್ಲಿಸಲು ಜಾಗ ಮಾಡಿಕೊಂಡಿದ್ದಾರೆ.ವ್ಯವಸ್ಥೆಯ ಅವ್ಯವಸ್ಥೆಯಿಂದ ಅಧಿಕಾರಿಗಳು ಹಾಗೂ ಸ್ಥಳಿಯರ ಕಾರ್ ಶೆಡ್ ಆಗಿದೆ ಅಷ್ಟೆ. 7 ಕೋಟಿ 50 ಲಕ್ಷದ ವೆಚ್ಚದಲ್ಲಿ ಮೂರು ಅಂತಸ್ತಿನ 50 ಹಾಸಿಗೆಯುಳ್ಳ ಈ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದು ಒಂದೂವರೆ ವರ್ಷವಾದ್ರೆ. ಉದ್ಘಾಟನೆಯಾಗಿ ಒಂದು ವರ್ಷವಾಯ್ತು. ಆದ್ರೆ, ಆಸ್ಪತ್ರೆ ಮಾತ್ರ ಓಪನ್ ಆಗಿಲ್ಲ. ಬೀಗ ಹಾಗೇ ಇದೆ. ಇದನ್ನ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ 2022ರಲ್ಲಿ ಶಂಕುಸ್ಥಾಪನೆ ಮಾಡಿದ್ರು. ಹಾಲಿ ಸಿಎಂ ಸಿದ್ದರಾಮಯ್ಯ 2024ರಲ್ಲಿ ಉದ್ಘಾಟನೆ ಮಾಡಿದ್ರು. ಆದ್ರೆ, ಆಸ್ಪತ್ರೆ ತನ್ನ ಕೆಲಸ ಮಾತ್ರ ಮಾಡ್ತಿಲ್ಲ. ಕಟ್ಟಡದ ಸುತ್ತಮುತ್ತಾ ಕಸದ ರಾಶಿ ಆವರಿಸಿದ್ದು, ಬೀಗ ಬಿದ್ದ ಸೌಲಭ್ಯಯುತ ಆಸ್ಪತ್ರೆ ಈಗ ಅಧಿಕಾರಿಗಳಿಗೆ ಕಾರ್ ಶೆಡ್ ಆಗಿದ್ರೆ, ಲೋಕಲ್ಸ್‍ಗೆ ಪಾರ್ಟಿ ಮಾಡೋ ಬೆಸ್ಟ್ ಪ್ಲೇಸ್ ಆಗಿದೆ.
Padma Shri Dr. Vijayalakshmi Deshmane: A Legacy of Compassion, Service & Dedication। Bengaluru Buzz
ಗುತ್ತಿಗೆದಾರರ ಆಸ್ಪತ್ರೆಗೆ ಹಸ್ತಾಂತರ ಮಾಡಿ ಒಂದು ವರ್ಷ:
ಇನ್ನು ಕಟ್ಟಡದ ಕ್ರೆಡಿಟ್ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ತೆಗೆದುಕೊಂಡಿದೆ. ಆದ್ರೆ, ಆಸ್ಪತ್ರೆ ಮಾತ್ರ ಓಪನ್ ಆಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆಯಾದ್ರೆ, ಈಗಿನ ಕಾಂಗ್ರೆಸ್ ಅವಧಿಯಲ್ಲಿ ಉದ್ಘಾಟನೆಯಾಗಿದೆ. ಆದ್ರೆ, ನಮ್ದು... ನಮ್ದು.... ಅಂತ ಕ್ರೆಡಿಟ್ ಪಡೆದುಕೊಳ್ಳೋ ಜನಪ್ರತಿನಿಧಿಗಳು ಸುಸಜ್ಜಿತ ಕಟ್ಟಡ ವರ್ಷದಿಂದ ಪಾಳು ಬಿದ್ದಿದ್ರು ಕೂಡ ಕ್ರಮಕೈಕೊಳ್ಳದಿರೋದು ಮಾತ್ರ ದುರಂತ. ಸಿ.ಟಿ.ರವಿ ಎಂ.ಎಲ್.ಎ. ಆದಾಗ ಹೋರಾಡಿ ಮೆಡಿಕಲ್ ಕಾಲೇಜು, ಆಯುಷ್ ಆಸ್ಪತ್ರೆ ಎರಡನ್ನೂ ತಂದಿದ್ದರು. ಈಗಿನ ಶಾಸಕ ತಮ್ಮಯ್ಯನವರ ಪಾತ್ರವೂ ಅಷ್ಟೆ ಇದೆ. ಈಗ ಇಬ್ಬರೂ ಅಧಿಕಾರದಲ್ಲಿದ್ದಾರೆ. ಆದ್ರೆ, ಆಸ್ಪತ್ರೆ ಮಾತ್ರ ಸೇವೆಗೆ ನಿಂತಿಲ್ಲ.
ನಾಪತ್ತೆಯಾಗಿದ್ದ ಪತ್ನಿ ಆಸ್ಪತ್ರೆಯಲ್ಲಿ ಪಕ್ಕದ ಬೆಡ್‌ನಲ್ಲೇ ಪತ್ತೆ
ಇದು 50 ಬೆಡ್ ಆಸ್ಪತ್ರೆಯಾಗಿದ್ದು, ಸುಮಾರು ಏಳೂವರೆ ಕೋಟಿ ವೆಚ್ಚದಲ್ಲಿ ರೆಡಿಯಾಗಿದೆ. ಅಯುಷ್ ಆಸ್ಪತ್ರೆಯಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಆಸ್ಪತ್ರೆಯನ್ನ ಸಾರ್ವಜನಿಕರ ಸೇವೆಗೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಈ ಹೈಟೆಕ್ ಆಯುಷ್ ಆಸ್ಪತ್ರೆ ಉದ್ಘಾಟನೆಯಾಗಿ ಒಂದು ವರ್ಷವಾಯ್ತು. ಅಲ್ಲಿ ಅಧಿಕಾರಿಗಳ ಜೊತೆ ಸ್ಥಳಿಯರು ಕಾರ್ ಪಾರ್ಕಿಂಗ್ ಮಾಡ್ತಿದ್ದಾರೆ. ಕಾರಣ ಹೇಳೋರಿಲ್ಲ. ಕೇಳೋರಿಲ್ಲ ಅಂತ. ಆದ್ರೆ, ಜನರಿಗೆ ಮಾತ್ರ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋ ಭಾಗ್ಯ ಮಾತ್ರ ಸಿಕ್ಕಿಲ್ಲ.