ಚಿಕ್ಕಮಗಳೂರಲ್ಲಿ ಬಂದ್ ಗೆ ಬೆಂಬಲ : ಯಾವ ಸೌಲಭ್ಯಗಳಿಗೆ ತೊಡಕು?

By Kannadaprabha News  |  First Published Jan 7, 2020, 11:06 AM IST

ದೇಶವ್ಯಾಪಿ ಜನವರಿ 8 ರಂದು ನಡೆಯಲಿರುವ ಭಾರತ್ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ನಿಡುತ್ತಿದ್ದು, ಚಿಕ್ಕಮಗಳೂರಿನಲ್ಲಿಯೂ ಕೂಡ ಬೆಂಬಲ ನೀಡುತ್ತಿವೆ.


ಚಿಕ್ಕಮಗಳೂರು [ಜ.07] : ಕೇಂದ್ರ ಸರ್ಕಾರದ ಕಾರ್ಮಿಕ ಕಾನೂನುಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಜನವರಿ 8 ರಂದು ಬುಧವಾರ ನಡೆಸುತ್ತಿರುವ ದೇಶವ್ಯಾಪಿ ಮುಷ್ಕರಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಬೆಂಬಲ ನೀಡಲಾಗುತ್ತಿದೆ. 

ಚಿಕ್ಕಮಗಳೂರಿನ ವಿವಿಧ ಸಂಘಟನೆಗಳಿಂದ ಮುಷ್ಕರಕ್ಕೆ ಬೆಂಬಲ ನೀಡಲಾಗುತ್ತಿದೆ. ಎಐಟಿಯುಸಿ, ಐಎನ್ ಟಿಯುಸಿ, ಯುಟಿಯುಸಿ, ಎಲ್.ಐ.ಸಿ ಬ್ಯಾಂಕ್ ಸಂಘಟನೆಗಳು, ರೈತ ಸಂಘ ಸೇರಿ ಹತ್ತಕ್ಕೂ ಹೆಚ್ಚು ಸಂಘಟನೆಗಳು ಮುಷ್ಕರ ನಡೆಸಲಿವೆ.   

Latest Videos

undefined

ದೇಶದ ಆರ್ಥಿಕ ನೀತಿ ಮತ್ತು ಕಾರ್ಮಿಕ ಪರ ಕಾನೂನುಗಳ ತಿದ್ದುಪಡಿ, ಬೆಲೆ ಏರಿಕೆ, ಕೈಗಾರಿಕಾ ಸಂಕಷ್ಟ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗುತ್ತಿದೆ. ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಿದ್ದು,  ಸಂಘಟನೆಗಳು ಮೆಸ್ಕಾಂ ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನೆ ನಡೆಸಲಿವೆ.

ಜ.8 ಭಾರತ್‌ ಬಂದ್‌: ಏನಿದೆ-ಏನಿಲ್ಲ? ಶಾಲೆಗಳಿಗೆ ರಜೆ ಇರುತ್ತಾ?...

ಇನ್ನು ಹೋಟೆಲ್, ಅಂಗಡಿ ಮುಂಗಟ್ಟುಗಳು ಈ ವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿಲ್ಲ. ಸಾರಿಗೆ ಬಂದ್ ಬಗ್ಗೆ ಸಂಜೆಯಷ್ಟೇ ತೀರ್ಮಾನವಾಗಲಿದೆ.  ಬ್ಯಾಂಕ್, ಎಲ್ ಐಸಿ ಕಚೇರಿಗಳು ಸಂಪೂರ್ಣ ಬಂದ್ ಆಗಲಿದ್ದು, ಬಿಎಸ್ ಎನ್ ಎಲ್ ಕಚೇರಿ ಕೂಡ ಬಂದ್ ಆಗಲಿದೆ.  ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರು ಭಾಗಿಯಾಗಲಿದ್ದಾರೆ.

click me!