ನಮ್ಮನ್ನು ಡೈರೆಕ್ಟ್ ಆಗಿ ಫೈಟ್ ಮಾಡಕ್ಕೆ ಬಿಜೆಪಿಯವರಿಗೆ ಆಗ್ತಿಲ್ಲ. ಈಗ ಬ್ಯಾಕ್ ಡೋರ್ ಮೂಲಕ ಎಂಟ್ರಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಾಹೇಬರೇ ನಮ್ಮ ಮುಖ್ಯಮಂತ್ರಿಗಳು. ಒಂದಲ್ಲ ಸಾವಿರ ನೋಟೀಸ್ ಕೊಡಲಿ. ಐಟಿ ಇಡಿಗೆ ಹೆದರಲ್ಲ. ಕಾನೂನು ಹೋರಾಟದಲ್ಲಿ ಹೋರಾಡ್ತೀವಿ, ಗೆದ್ದುಕೊಂಡು ಬರ್ತೀವಿ: ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ(ಅ.19): ಇಡಿ ದಾಳಿ ರಾಜಕೀಯ ಪ್ರೇರಿತವಾಗಿದೆ. ಐಟಿ ಹಾಗೂ ಇಡಿ ಯವರ ಕೈಯಲ್ಲಿ ನಮ್ಮ ಸಿದ್ದರಾಮಯ್ಯರನ್ನ ಏನೂ ಮಾಡಕ್ಕೆ ಆಗಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಸಾಹೇಬರು ನಮ್ಮ ಪಕ್ಷದ ಗುಂಡಿಗೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಮುಡಾ ಹಗರಣ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ಇಡಿ ಯವರು ಒಂದು ನೋಟೀಸ್ ಕೊಟ್ಟ ತಕ್ಷಣ ಹೆದರಲ್ಲ ನಾವು, ಅವರು ಏನು ಮಾಡುತ್ತಾರೋ ಮಾಡಲಿ ಎಂದು ತಿಳಿಸಿದ್ದಾರೆ.
ನಮ್ಮನ್ನು ಡೈರೆಕ್ಟ್ ಆಗಿ ಫೈಟ್ ಮಾಡಕ್ಕೆ ಬಿಜೆಪಿಯವರಿಗೆ ಆಗ್ತಿಲ್ಲ. ಈಗ ಬ್ಯಾಕ್ ಡೋರ್ ಮೂಲಕ ಎಂಟ್ರಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಾಹೇಬರೇ ನಮ್ಮ ಮುಖ್ಯಮಂತ್ರಿಗಳು. ಒಂದಲ್ಲ ಸಾವಿರ ನೋಟೀಸ್ ಕೊಡಲಿ. ಐಟಿ ಇಡಿಗೆ ಹೆದರಲ್ಲ. ಕಾನೂನು ಹೋರಾಟದಲ್ಲಿ ಹೋರಾಡ್ತೀವಿ, ಗೆದ್ದುಕೊಂಡು ಬರ್ತೀವಿ ಎಂದು ಹೇಳಿದ್ದಾರೆ.