ಕೋಳಿಗೆ 60 ರಿಂದ 65 ರೂಪಾಯಿ ಇಳಿತ..!

By Suvarna News  |  First Published Mar 8, 2020, 3:55 PM IST

ಕೋರೋನಾ ವೈರಸ್‌ ಭೀತಿಯಲ್ಲಿ ಕೋಳಿ ಮಾಂಸ ದರ ಕಡಿಮೆಯಾಗಿತ್ತು. ಚಿಕನ್ ತಿಂದ್ರೆ ಕೊರೋನಾ ಬರಲ್ಲ ಎಂದಿದ್ದರೂ ಜನ ಕೋಳಿ ಮಾಂಸ ಖರೀದಿ ಕಡಮೆ ಮಾಡಿದ್ದರು. ಇದೀಗ ಹಕ್ಕಿ ಜ್ವರ ಸದ್ದು ಮಾಡಿದ್ದು, ಕೋಳಿ ಬೆಲೆ ಪಾತಾಳಕ್ಕಿಳಿದಿದೆ.


ಮಂಡ್ಯ(ಮಾ.08): ಕೋರೋನಾ ವೈರಸ್‌ ಭೀತಿಯಲ್ಲಿ ಕೋಳಿ ಮಾಂಸ ದರ ಕಡಿಮೆಯಾಗಿತ್ತು. ಚಿಕನ್ ತಿಂದ್ರೆ ಕೊರೋನಾ ಬರಲ್ಲ ಎಂದಿದ್ದರೂ ಜನ ಕೋಳಿ ಮಾಂಸ ಖರೀದಿ ಕಡಮೆ ಮಾಡಿದ್ದರು. ಇದೀಗ ಹಕ್ಕಿ ಜ್ವರ ಸದ್ದು ಮಾಡಿದ್ದು, ಕೋಳಿ ಬೆಲೆ ಪಾತಾಳಕ್ಕಿಳಿದಿದೆ.

ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚಿಕನ್ ದರ ವ್ಯತ್ಯಯವಾಗಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಮಾಂಸ ಪ್ರಿಯರು ಇರುವ ಮಂಡ್ಯ ಜಿಲ್ಲೆಯಲ್ಲೂ ಸಹ‌ ಕೊರೋನಾ ವೈರಸ್ ಭೀತಿಯಿಂದಾಗಿ ಕೋಳಿ ಮಾಂಸದ ರೇಟ್ ಇಳಿಮುಖವಾಗಿದೆ.

Latest Videos

ಕೊರೋನಾ ಎಫೆಕ್ಟ್: ಮಂಗ್ಳೂರಲ್ಲಿ ಪಾತಾಳಕ್ಕಿಳಿದ ಚಿಕನ್ ಬೆಲೆ, ಮೀನು ದುಬಾರಿ

ಕಳೆದ ವಾರ ಕೋಳಿ ಮಾಂಸ ಪ್ರತಿ ಕೆಜಿಗೆ 140 ರಿಂದ‌145 ರವರಗೆ ಇತ್ತು. ಆದರೆ ಇಂದು 80 ರೂಪಾಯಿಗೆ ಇಳಿದಿದೆ. ಈ ಮೂಲಕ ಒಂದು‌ ಕೆಜಿಗೆ 60 ರಿಂದ 65 ರೂಪಾಯಿ ಇಳಿತ ಕಂಡಿದೆ. ಮೂರೇ ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಕೋಳಿ ಮಾಂಸದ ದರ ಇಳಿಕೆ ಕಂಡಿರುವುದು ಮಾರಾಟಗಾರರು ನಷ್ಟ ಅನುಭವಿಸುವಂತಾಗಿದೆ.

ಚಿಕನ್ ತಿಂದ್ರೆ ಕೊರೋನಾ ಬರುತ್ತಾ? ಹೆಚ್ಚಿನ ಮಾಹಿತಿಗೆ ಈ ಸಹಾಯವಾಣಿಗೆ ಕರೆ ಮಾಡಿ.

click me!