ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳದ್ದೇ ದರ್ಬಾರ್!

Published : Mar 08, 2020, 03:38 PM ISTUpdated : Mar 08, 2020, 05:50 PM IST
ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳದ್ದೇ ದರ್ಬಾರ್!

ಸಾರಾಂಶ

ವಿಶ್ವ ಮಹಿಳಾ ದಿನಾಚರಣೆ| ಮಹಿಳಾ ಸಿಬ್ಬಂದಿಗಳಿಂದಲೇ ಹೊರಟ ಸೊಲ್ಲಾಪುರ ಧಾರವಾಡ ರೈಲು| ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿಗಳ ರೈಲಿಗೆ ಚಾಲನೆ ನೀಡಿದ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್| 

ಹುಬ್ಬಳ್ಳಿ(ಮಾ.08): ಇಂದು ವಿಶ್ವಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಾಗಿ ಈ ವಿಶೇಷ ದಿನದಂದು ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. ಹೌದು ರೈಲು ಚಾಲನೆಯಿಂದ ಹಿಡಿದು ಎಲ್ಲರೂ  ಮಹಿಳಾ ಸಿಬ್ಬಂದಿಗಳೇ.

 

ಮಹಿಳಾ ಸಿಬ್ಬಂದಿಗಳೇ ಇದ್ದ ರೈಲು ಇಂದು(ಭಾನುವಾರ) ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಸೊಲ್ಲಾಪುರ ಧಾರವಾಡ ರೈಲು ಹೊರಟಿದೆ. ಮಹಿಳಾ ಸಿಬ್ಬಂದಿಗಳ ರೈಲಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಚಾಲನೆ ನೀಡಿದ್ದಾರೆ.

 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಒಂದು ವಾರದ ಹಿಂದೆ ಬೆಂಗಳೂರು ಮೈಸೂರು ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ವೈರಲ್ ವಿಡಿಯೋ ನೋಡಿ ಕೇಂದ್ರ ರೈಲ್ವೆ ಸಚಿವರು ಒಂದು ವಾರದ ಮೊದಲೇ ಮಹಿಳಾ ಸಿಬ್ಬಂದಿಗೆ ಮಹಿಳಾ ದಿನಾಚರಣೆ ಶುಭಾಶಯ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಹಿಳಾ ದಿನಾಚರಣೆಯ ಸ್ಪೆಷಲ್: ಸೊಲ್ಲಾಪುರ-ಧಾರವಾಡ ರೈಲಿನ ಮಹಿಳಾ ಸಿಬ್ಬಂದಿಯ ಕೆಲ ಫೋಟೋಸ್ 
 

PREV
click me!

Recommended Stories

ಅಪ್ಪ-ಮಗಳ ಸ್ಕೆಚ್‌ಗೆ ಬಲಿಯಾಯ್ತು ಕೂಡು ಕುಟುಂಬ; ಆಸ್ತಿ ದ್ವೇಷವೋ, ಸೌಂದರ್ಯದ ಕೀಳರಿಮೆಯೋ? ರಹಸ್ಯ ಬಿಚ್ಚಿಟ್ಟ ಸಂಬಂಧಿ!
ಕನ್ನಡಿಗರ ವಿಚಾರದಲ್ಲಿ ನುಡಿದಂತೆ ನಡೆಯಿರಿ: ಶೇ.80 ಉದ್ಯೋಗ ಮೀಸಲಾತಿ ಪ್ರಣಾಳಿಕೆ ನೆನಪಿಸಿದ ಕರವೇ ನಾರಾಯಣಗೌಡ!