ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಾಡಂಚಿನ ಗ್ರಾಮಗಳ ಜನರ ಸಮಸ್ಯೆ ಅಲಿಸಲು ತೆರಳಿದ್ದ ವೇಳೆ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಗುಣಾಕಾರ, ಭಾಗಾಕಾರ ಹೇಳಿಕೊಟ್ಟರು. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡಿನಲ್ಲಿರುವ ಕೊಂಬುಡಿಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಖುದ್ದು ಅವಲೋಕನ ಮಾಡುವ ಮೂಲಕ ಅವರಲ್ಲಿ ಸ್ಪೂರ್ತಿ ತುಂಬಿದರು.
ಚಾಮರಾಜನಗರ(ನ.03): ಹಾವೇರಿಯಲ್ಲಿ ಜಿಪಂ ಸಿಇಓ ಆಗಿದ್ದ ಶಿಲ್ಪಾನಾಗ್ ಅವರು ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿ ಪರಿಶೀಲನೆ ವೀಕ್ಷಣೆಗೆ ಹೋಗಿ ಕಾರ್ಮಿಕರ ಜೊತೆಗೆ ಬಾಂಡ್ಲಿಯಲ್ಲಿ ಮಣ್ಣು ಹೊತ್ತು ಗಮನ ಸೆಳೆದಿದ್ದರು. ಇದೀಗ ಚಾಮರಾಜನಗರ ಜಿಲ್ಲೆಯ ಕಾಡಲ್ಲಿರುವ ಗ್ರಾಮ ಕೊಂಬುಡಿಕ್ಕಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಕ್ಕಳಿಗೆ ಗಣಿತ ಪಾಠ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕಾಡಂಚಿನ ಗ್ರಾಮಗಳ ಜನರ ಸಮಸ್ಯೆ ಅಲಿಸಲು ತೆರಳಿದ್ದ ವೇಳೆ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಗುಣಾಕಾರ, ಭಾಗಾಕಾರ ಹೇಳಿಕೊಟ್ಟರು. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡಿನಲ್ಲಿರುವ ಕೊಂಬುಡಿಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಖುದ್ದು ಅವಲೋಕನ ಮಾಡುವ ಮೂಲಕ ಅವರಲ್ಲಿ ಸ್ಪೂರ್ತಿ ತುಂಬಿದರು.
undefined
ಮಲೆ ಮಹದೇಶ್ವರ ಬೆಟ್ಟದ ಮೆಟ್ಟಿಲು ನಿರ್ಮಾಣ ಕಾಮಗಾರಿ ಸ್ಥಗಿತ; ಭಕ್ತರಿಗೆ ಕಲ್ಲು ಮುಳ್ಳಿನ ಹಾದಿಯೇ ಗತಿ!
ಶಾಲೆಯ ಅಡುಗೆ ಕೋಣೆಗೂ ಧಾವಿಸಿ ಪರಿಶೀಲನೆ ನಡೆಸಿದ ಅವರು ಅಡುಗೆ ಸಹಾಯಕಿಯರ ಕಷ್ಟ, ಸುಖ ಅಲಿಸಿ ಮಕ್ಕಳಿಗೆ ಶುಚಿ,ರುಚಿಯಾದ ಆಹಾರ ತಯಾರಿಸಿಕೊಡುವಂತೆ ತಿಳಿಸಿದರು.