ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ರೈತರಿಗಿದ್ದ ಸಂಕಷ್ಟ ಬೇರಾರಿಗೂ ಇಲ್ಲ. ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಅದೆ ರೀತಿ ರೈತರಿಗೆ ಅನುಕೂಲಕ್ಕೆ ರೈತರ ಜಮೀನುಗಳಿಗೆ ನೀರು ಒದಗಿಸುವುದು, ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯೂತ್ ಪೂರೈಕೆ, ಬೆಳೆಗಳಿಗೆ ಯೋಗ್ಯ ಮಾರುಕಟ್ಟೆ ಬೆಲೆ ಕೊಡುವ ಗ್ಯಾರಂಟಿ ಯೋಜನೆಯನ್ನು ಘೋಷಿಸಬಹುದಾಗಿತ್ತಲ್ಲ ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಸಿದ್ದನಗೌಡ ಪಾಟೀಲ
ವಿಜಯಪುರ(ನ.03): ರಾಜ್ಯದಲ್ಲಿ ಬರದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಅನುಕೂಲಕ್ಕೆ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಹೇಳಿದರು.
ನಗರದ ಕರ್ನಾಟಕದ ಸರ್ಕಾರಿ ನೌಕರರ ಭವನದಲ್ಲಿ ಜರುಗಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ರೈತರಿಗಿದ್ದ ಸಂಕಷ್ಟ ಬೇರಾರಿಗೂ ಇಲ್ಲ. ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಅದೆ ರೀತಿ ರೈತರಿಗೆ ಅನುಕೂಲಕ್ಕೆ ರೈತರ ಜಮೀನುಗಳಿಗೆ ನೀರು ಒದಗಿಸುವುದು, ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯೂತ್ ಪೂರೈಕೆ, ಬೆಳೆಗಳಿಗೆ ಯೋಗ್ಯ ಮಾರುಕಟ್ಟೆ ಬೆಲೆ ಕೊಡುವ ಗ್ಯಾರಂಟಿ ಯೋಜನೆಯನ್ನು ಘೋಷಿಸಬಹುದಾಗಿತ್ತಲ್ಲ ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮಾಡಲು ಸಿಎಂ ಜೊತೆ ಚರ್ಚೆ: ಎಂ.ಬಿ.ಪಾಟೀಲ
ಚುಣಾವಣೆ ಬಂದಾಗ ಮಾತ್ರ ರೈತರ ವಿವಿಧ ಯೋಜನೆಗಳು ನೆನಪಾಗುತ್ತವೆ. ಚುನಾವಣೆ ಮುಗಿದ ನಂತರ ಮರೆತು ಬಿಡುತ್ತಾರೆ. ಆದ್ದರಿಂದ ರೈತರು ಜಾಗೃತರಾಗಿ ಸಂಘಟಿತ ಹೋರಾಟ ಮಾಡಬೇಕು ಎಂದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರು ನಿತ್ಯ ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ರೈತರಿಗೂ ಸಹ ಗ್ಯಾರಂಟಿ ಮಾದರಿ ಯೋಜನೆ ಜಾರಿ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು. ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ರಾಜ್ಯ ಉಪಾಧ್ಯಕ್ಷ ಬಿ.ಸಿ.ಪಾಟೀಲ, ಉಳವಪ್ಪ ಒಡೆಯರ, ನ್ಯಾಯವಾದಿ ಸೋಮಶೇಖರ, ಉಮಾದೇವಿ ಮಾತನಾಡಿದರು.
ಮಹೇಶ ಯಂಕಚ್ಚಿ, ಸದಾಶೀವ ಬರಟಗಿ, ಸೋಮನಗೌಡ ಪಾಟೀಲ, ಹೊನಕೆರೆಪ್ಪ ತೆಲಗಿ, ವಿಠ್ಠಲ ಬಿರಾದಾರ, ಚನ್ನಬಸಪ್ಪ ಸಿಂಧೂರ, ಬಾಲಪ್ಪಗೌಡ ಲಿಂಗದಳ್ಳಿ, ಬಸವರಾಜ ಜಂಗಮಶೆಟ್ಟಿ ಮುಂತಾದವರು ಇದ್ದರು.