ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಒಬ್ಬ ಶಿಕ್ಷಕ ವಿದ್ಯಾರ್ಥಿಯ ತಾಯಿಯೊಂದಿಗೆ ಅನುಚಿತವಾಗಿ ವರ್ತಿಸಿದರೆ, ಮತ್ತೊಬ್ಬ ಶಿಕ್ಷಕ ಶಾಲಾ ಅಡುಗೆ ಮನೆ ನಿರ್ಮಾಣದ ಹಣ ದುರುಪಯೋಗಪಡಿಸಿಕೊಂಡಿದ್ದಾರೆ.
ಚಾಮರಾಜನಗರ (ನ.13): ಬಡ ಕುಟುಂಬದ ತಾಯಿಯೊಬ್ಬಳು ತನ್ನ ಮಗನನ್ನು ಸರ್ಕಾರಿ ಶಾಲೆಗೆ ಬಿಡಲು ಬಂದರೆ, ಆ ತಾಯಿಯ ಮೇಲೆಯೇ ಸರ್ಕಾರಿ ಶಾಲಾ ಶಿಕ್ಷಕ ಕಣ್ಣು ಹಾಕಿದ್ದಾನೆ. ತನ್ನ ವಿದ್ಯಾರ್ಥಿಯ ತಾಯಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಕ್ಕೆ ಈ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ.
ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ಹೇಳಿ ಕೇಳಿ ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದೇ ದೊಡ್ಡ ವಿಚಾರ, ಹೀಗಾಗಿ ಖಾಸಗಿ ಶಾಲೆಗಳ ಹಾವಳಿ ಕಡಿಮೆಯಿದೆ. ಆದರೆ, ಇಲ್ಲೊಬ್ಬ ಸರ್ಕಾರಿ ಶಾಲಾ ಶಿಕ್ಷಕ ಕಷ್ಟಪಟ್ಟು ಮಗುವನ್ನು ಓದಿಸುತ್ತೇನೆ ಎಂದು ಮಗುವನ್ನು ಶಾಲೆಗೆ ಬಿಡಲು ಬಂದರೆ, ಆಕೆಯ ಮೇಲೆಯೇ ಕಣ್ಣು ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಶಿಕ್ಷಕರ ದುರ್ನಡತೆಯನ್ನು ಕಂಡ ಶಿಕ್ಷಣ ಈ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
undefined
ಈ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯ ತಾಯಿಯೊಂದಿಗೆ ಅನುಚಿತವಾಗಿ ನಡೆದುಕೊಂಡು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ ವೆಂಕಟನಾರಾಯಣ್ ಅಮಾನತು ಆಗಿದ್ದಾರೆ. ಇವರು ಹನೂರು ತಾಲ್ಲೂಕಿನ ಕುರುಬರ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ. ಪ್ರತಿನಿತ್ಯ ಶಾಲೆಗೆ ಮಗುವನ್ನು ಬಿಡಲು ಬರುತ್ತಿದ್ದರಿಂದ ಈ ಶಿಕ್ಷಕ ಅವರನ್ನು ಸಲುಗೆಯಿಂದ ಮಾತನಾಡಿಸಿ, ಒಂದು ದಿನ ಅಸಭ್ಯ ವರ್ತನೆ ತೋರಿದ್ದಾನೆ. ಇದೀಗ ಕೆಲಸದಿಂದ ಸಸ್ಪೆಂಡ್ ಆಗಿ ಮನೆಯಲ್ಲಿ ಕುಳಿತಿದ್ದಾರೆ.
ಇದನ್ನೂ ಓದಿ: ಮುಡಾ ಸೈಟ್ ಹಂಚಿಕೆಯಲ್ಲಿ ಮತ್ತೊಂದು ಟ್ವಿಸ್ಟ್: ಸಿಎಂ ಖಾಸಗಿ ಪಿಎ ಕುಮಾರ್ ಹಾಗೂ ಸಂಸದ ಕುಮಾರ್ ನಾಯಕ್‌ಗೆ ಇಡಿ ವಿಚಾರಣೆ
ಮತ್ತೊಬ್ಬ ಶಿಕ್ಷಕ ಅಮಾನತು: ವಿದ್ಯೆ ಕಲಿಸುವ ದೇಗುಲಗಳಾದ ಶಾಲೆಗಳಲ್ಲಿ ಪಾಠ ಮಾಡುವ ಗುರುಗಳು ದೇವರಿಗೆ ಸಮಾನ ಎಂದು ಹೇಳಲಾಗುತ್ತದೆ. ಈ ಗುರುಗಳು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಉತ್ತಮ ನಡತೆ, ಉತ್ತಮ ಚಾರಿತ್ರ್ಯಗಳನ್ನು ಬೆಳೆಸಬೇಕು. ಆದರೆ, ಸಮಾಜ ತಿದ್ದುವ ಕೆಲಸ ಮಾಡಬೇಕಾದ ಶಿಕ್ಷಕನೇ ಇಲ್ಲಿ ಸರ್ಕಾರದ ಹಣ ಲೂಟಿ ಮಾಡುವ ಕೆಲಸ ಮಾಡಿದ್ದಾರೆ. ಹನೂರು ತಾಲ್ಲೂಕಿನ ಒಡೆಯರ್ ಪಾಳ್ಯ ಕ್ಲಸ್ಟರ್ ವ್ಯಾಪ್ತಿಯ ಹೊಸಪೋಡು ಮುಖ್ಯ ಶಿಕ್ಷಕ ಮಹೇಶ್ ಕುಮಾರ್ ಅವರು ತಮ್ಮ ಶಾಲೆಯ ಅಡುಗೆ ಮನೆ ಕಟ್ಟಡ ನಿರ್ಮಾಣದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ನಿಯಮಾನುಸಾರ ಚಾಮರಾಜನಗರ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ) ಈ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಕೊಡಗು: ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ಅಂತ್ಯ ಸಂಸ್ಕಾರ!