ಕೇರಳದಿಂದ ಸ್ವರಾಜ್ಯಗಳತ್ತ ಮುಖ ಮಾಡಿದ ನಕ್ಸಲರು: ಜಾಡು ಹಿಡಿದು ಹೊರಟ ಎಎನ್ಎಫ್-ಪೊಲೀಸರು

By Govindaraj S  |  First Published Nov 13, 2024, 6:38 PM IST

ಕಾಫಿನಾಡ ಮಲೆನಾಡು ಭಾಗದಲ್ಲಿ ದಶಕಗಳಿಂದ ಇಲ್ಲದ ಕೆಂಪು ಉಗ್ರರ ಹೆಜ್ಜೆ ಗುರುತುಗಳ ಹಿಂದೆ ಹೊಸದೊಂದು ಸಂಗತಿ ಬಯಲಾಗಿದೆ. ಹಲವು ವರ್ಷಗಳಿಂದ ಕೇರಳದ ಕಾಡಿನಲ್ಲಿದ್ದ ನಾನಾ ರಾಜ್ಯದ ನಕ್ಸಲರು ತಮ್ಮ-ತಮ್ಮ ರಾಜ್ಯಗಳಿಗೆ ಪಾಲಾಯನ ಮಾಡಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ.13): ಕಾಫಿನಾಡ ಮಲೆನಾಡು ಭಾಗದಲ್ಲಿ ದಶಕಗಳಿಂದ ಇಲ್ಲದ ಕೆಂಪು ಉಗ್ರರ ಹೆಜ್ಜೆ ಗುರುತುಗಳ ಹಿಂದೆ ಹೊಸದೊಂದು ಸಂಗತಿ ಬಯಲಾಗಿದೆ. ಹಲವು ವರ್ಷಗಳಿಂದ ಕೇರಳದ ಕಾಡಿನಲ್ಲಿದ್ದ ನಾನಾ ರಾಜ್ಯದ ನಕ್ಸಲರು ತಮ್ಮ-ತಮ್ಮ ರಾಜ್ಯಗಳಿಗೆ ಪಾಲಾಯನ ಮಾಡಿದ್ದಾರೆ. ಕೇರಳದಲ್ಲಿ ನಕ್ಸಲರ ಎನ್ ಕೌಂಟರ್ ಹಾಗೂ ಶರಣಾಗತಿ ಬಳಿಕ ಸರ್ವೈವ್ ಆಗೋದು ಕಷ್ಟ ಎಂದು ಎಲ್ಲರೂ ತಮ್ಮ ರಾಜ್ಯಗಳತ್ತ ಹೊರಟಿದ್ದಾರೆ ಎಂಬ ಅಂಶ ಬಟಬಯಲಾಗಿದೆ. ಹಾಗಾಗಿ, ಮುಂಡಗಾರು ಲತಾ,  ಜಯಣ್ಣ, ವನಜಾಕ್ಷಿ ಹಾಗೂ ವಿಕ್ರಂ ಗೌಡ ಕಾಫಿನಾಡ ಕಾಡಿನತ್ತ ಮುಖ ಮಾಡಿದ್ದಾರೆ. 

Latest Videos

undefined

ಶಕ್ತಿ-ಸಾಮರ್ಥ್ಯ ಕುಂದಿದ್ಯಾ ಎನ್ನುವ ಪ್ರಶ್ನೆ: ದಶಕಗಳಿಂದ ಕಾಫಿನಾಡ ದಟ್ಟಕಾನನದಲ್ಲಿ ನಕ್ಸಲರ ಸದ್ದು ಅಡಗಿತ್ತು. ಆದ್ರೀಗ, ಮತ್ತೆ ಕೇಳ ತೊಡಗಿದೆ. ಕಾರಣ, ಕೇರಳದ ಕಾಡುಗಳನ್ನ ಅಡಗುತಾಣ ಮಾಡ್ಕೊಂಡಿದ್ದ ನಕ್ಸಲರು ಸ್ವರಾಜ್ಯಗಳತ್ತ ಮುಖ ಮಾಡಿದ್ದಾರಂತೆ. ಕೇರಳದಲ್ಲಿ ನಕ್ಸಲರ ಎನ್ಕೌಂಟರ್ ಹಾಗೂ ಶರಣಾಗತಿ ಬಳಿಕ ತಮ್ಮ ಶಕ್ತಿ-ಸಾಮರ್ಥ್ಯ ಕುಂದಿದ್ದು ಕಾಫಿನಾಡ ಕಾಡುಗಳತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಮೋಸ್ಟ್ ವಾಂಟೆಂಡ್ ನಕ್ಸಲರಾದ ವಿಕ್ರಂ ಗೌಡ ಹಾಗೂ ಮುಂಡಗಾರು ಲತಾ ಸೇರಿದಂತೆ ಜಯಣ್ಣ ಹಾಗೂ ವನಜಾಕ್ಷಿ ಕಾಫಿನಾಡಿನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ಇಲ್ಲಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಮಲೆನಾಡಿಗರನ್ನ ಸೆಳೆಯೋಕೆ ಪ್ರಯತ್ನಿಸ್ತಿರೋ ಅನುಮಾನ ಮೂಡಿದೆ. 

ಬೊಂಬೆನಾಡಲ್ಲಿ ಸೂತ್ರದಾರರ ಪ್ರತಿಷ್ಠೆ ಪಣಕ್ಕೆ: ಇಬ್ಬರೂ ಅಭ್ಯರ್ಥಿಗಳಿಗೆ ಸಿನಿಮಾ ನಂಟು

ನಾಲ್ವರ ವಿರುದ್ದ ಹಲವು ಪ್ರಕರಣ: ಮುಂಡಾಗರು ಲತಾ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 38 ಕೇಸ್ ಗಳಿವೆ. ಶೃಂಗೇರಿ, ಜಯಪುರ ಹಾಗೂ ಆಲ್ದೂರು ಠಾಣೆಯಲ್ಲಿ ಲತಾ ಪ್ರಕರಣಗಳಿದ್ರೆ, ಜಯಣ್ಣನದ್ದು ಎರಡು ಪ್ರಕರಣಗಳಿವೆ. ಹಾಗಾಗಿ, ಮಲೆನಾಡ ಕುಗ್ರಾಮಕ್ಕೆ ಬಂದು ನಾಪತ್ತೆಯಾಗಿರೋ ಲತಾ ಹಾಗೂ ಜಯಣ್ಣನಿಗಾಗಿ ತೀವ್ರ ತನಿಖೆ ಶರುಮಾಡಿದ್ದಾರೆ. 

ಮಲೆನಾಡಿನಲ್ಲಿ ತೀವ್ರ ಶೋಧ: ಇನ್ನು ಕಾಡಂಚಿನ ಕುಗ್ರಾಮಗಳಿಗೆ ಭೇಟಿ ನೀಡಿ ಎಸ್ಕೇಪ್ ಆಗಿದ್ದ ನಕ್ಸಲರಿಗಾಗಿ ಇದೀಗ ಪೊಲೀಸ್ ಹಾಗೂ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿಗಳು ಕೂಂಬಿಂಗ್ ಚುರುಕುಗೊಳಿಸಿದ್ದಾರೆ. ಕಾಡಂಚಿನ ಗಡಿ ಗ್ರಾಮ ಹಾಗೂ  ಕೂಂಬಿಂಗ್ ಅಂತರ್ ಜಿಲ್ಲಾ ಗಡಿಯಲ್ಲಿ ವಾಹನ ತಪಾಸಣೆ ಹೆಚ್ಚಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ, ಆಗುಂಬೆ ಘಾಟಿ, ಕಳಸ ತಾಲೂಕಿನ ಕುದುರೆಮುಖ, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಸುತ್ತಮುತ್ತ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮಾರ್ಗದಲ್ಲಿ ಓಡಾಡುವ ಪ್ರತಿಯೊಂದು ವಾಹನಗಳನ್ನೂ ಚೆಕ್ ಮಾಡಿ ಬಿಡುತ್ತಿದ್ದಾರೆ. 

ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ಸ್ಥಗಿತ: ಎಚ್.ಡಿ.ದೇವೇಗೌಡ

ಕೊಪ್ಪ ತಾಲೂಕಿನ ಕಾಡಂಚಿನ ಕುಗ್ರಾಮ ಕಡೇಗುಂದಿ ಗ್ರಾಮದ ಸುಬ್ಬೇಗೌಡ ಎಂಬುವರ ಮನೆಗೆ ಭೇಟಿ ನೀಡಿ ಹೋದ ಪರಿಣಾಮ ಅವರು ಹೋದ ಮಾರ್ಗದಲ್ಲಿ ಕೂಂಬಿಂಗ್ ಚುರುಉಗೊಂಡಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಗಡಿ ಹಂಚಿಕೊಂಡಿರೋ ಮೂರು ತಾಲೂಕಿನ ಗಡಿಯಲ್ಲೂ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆ ತೀವ್ರ ಶೋಧ ಕೈಗೊಂಡಿದ್ದಾರೆ.ಒಟ್ಟಾರೆ, ಕೇರಳದಲ್ಲಿ ಸರ್ವೈವ್ ಆಗಲು ಸಾಧ್ಯವಿಲ್ಲ ಎಂದು ಸ್ವರಾಜ್ಯಗಳತ್ತ ನಕ್ಸಲರು ಮುಖ ಮಾಡಿರುವುದನ್ನು ಕಂಡರೆ ನಕ್ಸಲರ ಸಂಖ್ಯೆ, ಶಕ್ತಿ-ಸಾಮರ್ಥ್ಯ ಕುಂದಿದ್ಯಾ ಎಂಬ ಪ್ರಶ್ನೆ ಮೂಡಲಿದೆ.

click me!