ಬಂಡೀಪುರ ಅರಣ್ಯದಲ್ಲಿ 10 ದಿನದಿಂದ ಮಳೆ: ತಗ್ಗಿದ ಕಾಳ್ಗಿಚ್ಚಿನ ಆತಂಕ, ಪ್ರಾಣಿಗಳ ದರ್ಶನ!

By Govindaraj S  |  First Published May 16, 2024, 9:00 PM IST

ಸಕಾಲಕ್ಕೆ ಮಳೆಯಾಗದ ಹಿನ್ನಲೆ ತೀವ್ರ ಬರದಿಂದ ಬಂಡೀಪುರ ಕಾಡು ಸಂಪೂರ್ಣವಾಗಿ ಒಣಗಿ ಹೋಗಿತ್ತು. ಅಧಿಕಾರಿಗಳು  ಕಾಡ್ಗಿಚ್ಚು ಬೀಳುವ ಆತಂಕದಲ್ಲಿದ್ರು ಆದ್ರೆ ಪೂರ್ವ ಮುಂಗಾರು ಮಳೆ ಬಿದ್ದ ಬೆನ್ನಲ್ಲೇ ಬಂಡೀಪುರಕ್ಕೆ ಮತ್ತೇ ಜೀವ ಕಲೆ ಬಂದಿದೆ. 
 


ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ 16): ಸಕಾಲಕ್ಕೆ ಮಳೆಯಾಗದ ಹಿನ್ನಲೆ ತೀವ್ರ ಬರದಿಂದ ಬಂಡೀಪುರ ಕಾಡು ಸಂಪೂರ್ಣವಾಗಿ ಒಣಗಿ ಹೋಗಿತ್ತು. ಅಧಿಕಾರಿಗಳು  ಕಾಡ್ಗಿಚ್ಚು ಬೀಳುವ ಆತಂಕದಲ್ಲಿದ್ರು ಆದ್ರೆ ಪೂರ್ವ ಮುಂಗಾರು ಮಳೆ ಬಿದ್ದ ಬೆನ್ನಲ್ಲೇ ಬಂಡೀಪುರಕ್ಕೆ ಮತ್ತೇ ಜೀವ ಕಲೆ ಬಂದಿದೆ. ಖಾಲಿಯಾಗಿದ್ದ ಕೆರೆಗಳಿಗೆ ಮಳೆಯಿಂದ ಕೆರೆ ಕಟ್ಟೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದಿದೆ.  ಕಾಡು ಪ್ರಾಣಿಗಳಿಗೆ ಉಂಟಾಗಬೇಕಿದ್ದ ಕುಡಿಯುವ ನೀರಿನ ಆತಂಕ ಸದ್ಯ ದೂರವಾಗಿದೆ. ಈ ಕುರಿತಾದ  ಒಂದು ಸ್ಟೋರಿ ಇಲ್ಲಿದೆ ನೋಡಿ.

Tap to resize

Latest Videos

undefined

ಕಣ್ಣಾಡಿಸಿದ ಕಡೆಯೆಲ್ಲಾ ಕಾಡು ಚಿಗುರೊಡೆದು ಹಸಿರಾಗ್ತಿರುವ ಕಾಡು, ಸ್ವಚ್ಛಂದವಾಗಿ ವಿಹರಿಸುತ್ತಿರುವ ಪ್ರಾಣಿ, ಪಕ್ಷಿಗಳು. ವಿಶ್ರಾಂತಿ ಪಡೆಯುತ್ತಿರುವ ಹುಲಿರಾಯ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ. ಹೌದು ಸಕಾಲಕ್ಕೆ ಮಳೆಯಾಗಿರಲಿಲ್ಲ ಕಾಡೆಲ್ಲಾ ಒಣಗಿ ಹೋಗಿತ್ತು. ಕೆರೆ ಕಟ್ಟೆಗಳೆಲ್ಲಾ ಒಣಗಿ ಜೀವ ಜಲ ಬತ್ತಿ ಹೋಗಿ ಕಾಡು ಪ್ರಾಣಿಗಳಿಗೆ ಸಂಕಷ್ಟ ಎದುರಾಗಿತ್ತು. ಪ್ರಮುಖವಾಗಿ ಅಧಿಕಾರಿಗಳಲ್ಲಿ  ಕಾಡ್ಗಿಜ್ಜಿನ ಭಯ ಆವರಿಸಿತ್ತು. ಸದ್ಯ ಪೂರ್ವ ಮುಂಗಾರು ಎಂಟ್ರಿ ಕೊಟ್ಟಿದ್ದು ಮೂಲೆಹೊಳೆ, ಬಂಡಿಪುರಕ್ಕೆ ಹೊಂದಿಕೊಂಡಂತೆ ಇರುವ ತಮಿಳುನಾಡಿನ  ಅಲ್ಲಲ್ಲಿ ಉತ್ತಮ ಮಳೆಯಾಗಿದೆ.

ಈ ಹಿನ್ನಲೆ ಬಂಡೀಪುರ ಅರಣ್ಯದಲ್ಲಿ ಚಿಗುರೊಡೆಯಲಾರಂಬಿಸಿದ್ದು  ಹಸಿರು ಮಯವಾಗ್ತಿದ್ದು, ಹುಲ್ಲು ಕೂಡ ಚಿಗುರುತ್ತಿದೆ. ಇದರಿಂದ ಪ್ರಾಣಿ ಪಕ್ಷಿಗಳು ಗಳು ಕೂಡ ಸಂತಸಗೊಂಡಿದ್ದು ಕಾಡು ಹಸಿರಿನಿಂದ ಕಂಗೊಳಿಸಲು ಪ್ರಾರಂಭವಾಗುತ್ತಿದ್ದೆ.. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ 400 ಕ್ಕೂ ಅಧಿಕ ಕೆರೆ ಕಟ್ಟೆಗಳಿವೆ. ಕಳೆದ ವರ್ಷ ಮಳೆಯ ಹಿನ್ನಲೆ, ಭಾಗಶಃ 90 ಪರ್ಸೆಂಟ್ ಕೆರೆ ಕಟ್ಟೆಗಳು ಬತ್ತಿ ಹೋಗಿತ್ತು. ಇದ್ದ ಬೆರೆಳೆಣಿಕೆಯಷ್ಟು ಸೋಲಾರ್ ಬೋರ್ ನಿಂದ ಕೆಲವು  ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ವನ್ನು ಅರಣ್ಯಾಧಿಕಾರಿಗಳು ಮಾಡಿದ್ರು ಆದ್ರೆ ಅದು ಅಷ್ಟರ ಮಟ್ಟಿಗೆ ಯಶಸ್ವಿ ಕೂಡ ಆಗಿರಲಿಲ್ಲ. ನೀರಿನ ಅಭಾವದಿಂದ ಕಾಡು ಪ್ರಾಣಿಗಳೆಲ್ಲಾ ಕಬಿನಿ ಹಿನ್ನೀರಿನ ಕಡೆ, ಇತ್ತ ತಮಿಳುನಾಡಿನ ಮಾಯಾರ್ ಕಡೆ ನೀರನ್ನು ಅರಸಿ ಬಂಡೀಪುರ ತೊರೆದಿದ್ವು.

ಚಿಕ್ಕಮಗಳೂರಿನಲ್ಲಿ ವರುಣದೇವನ ಕೃಪೆ: ಬಯಲುಸೀಮೆ, ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆ

ಆದ್ರೆ  ಮಳೆ ಉತ್ತಮವಾಗಿದ್ದು ಕೆರೆ ಕಟ್ಟೆಗಳು ತುಂಬುತ್ತಿದ್ದು ಜೀವ ಕಳೆ ಮರುಕಳಿಸುತ್ತಿದೆ. ಇದರಿಂದ ಪ್ರಾಣಿಗಳು ಮತ್ತೇ ಬಂಡೀಪುರಕ್ಕೆ ಆಗಮಿಸಿದ್ದು ಸಫಾರಿಗೆ ಹೋಗುವ ಪ್ರವಾಸಿಗರಿಗೆ ಕಾಡು ಪ್ರಾಣಿಗಳು ದರ್ಶನ ಕೊಡ್ತಿವೆ. ಒಟ್ನಲ್ಲಿ ಬಂಡೀಪುರದ  ಮೂಲೆಹೊಳೆ,ಕುಂದ ಕೆರೆ ಸೇರಿದಂತೆ ತಮಿಳುನಾಡು ಹಾಗೂ ಕೇರಳ ಗಡಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಇದರಿಂದ ಕಾಡ್ಗಿಚ್ಚು ಬೀಳುವ ಆತಂಕದಲ್ಲಿದ್ದ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.ಮಳೆಯಿಂದ ಬಂಡಿಪುರ ಕಾಡು ಕೆಲವೆ ದಿನಗಳಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವುದರ ಜೊತೆಗೆ ಪ್ರಾಣಿಗಳಿಗೆ ನೀರಿನ ಕೊರತೆ ಹಾಗು ಆಹಾರಕ್ಕು ಅನುಕೂಲವಾಗಿದೆ.

click me!