ಚಿಕ್ಕಮಗಳೂರಿನಲ್ಲಿ ವರುಣದೇವನ ಕೃಪೆ: ಬಯಲುಸೀಮೆ, ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆ

By Govindaraj S  |  First Published May 16, 2024, 8:00 PM IST

ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರಿಗೆ  ಮುಂಗಾರು ಪೂರ್ವ ಮಳೆ ಖುಷಿ ಏನೋ ತಂದಿದೆ. ಮಲೆನಾಡಿಗರು ಮಳೆ ಬಂತು ಅಂತ ಖುಷಿ ಪಡ್ಬೇಕೋ ಇಲ್ಲ ಮಳೆಯಿಂದ ಕೆಲ ಅವಾಂತರಗಳಿಗೂ ಸಾಕ್ಷಿ ಆಗಿದೆ. ಮಲೆನಾಡಿನಾದ್ಯಂತ ವರುಣದೇವ ಅನಾಹುತಗಳಿಗೆ ಸಾಕ್ಷಿಯಾಗ್ತಿದ್ದಾನೆ.
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ 16): ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರಿಗೆ  ಮುಂಗಾರು ಪೂರ್ವ ಮಳೆ ಖುಷಿ ಏನೋ ತಂದಿದೆ. ಮಲೆನಾಡಿಗರು ಮಳೆ ಬಂತು ಅಂತ ಖುಷಿ ಪಡ್ಬೇಕೋ ಇಲ್ಲ ಮಳೆಯಿಂದ ಕೆಲ ಅವಾಂತರಗಳಿಗೂ ಸಾಕ್ಷಿ ಆಗಿದೆ. ಮಲೆನಾಡಿನಾದ್ಯಂತ ವರುಣದೇವ ಅನಾಹುತಗಳಿಗೆ ಸಾಕ್ಷಿಯಾಗ್ತಿದ್ದಾನೆ.

Tap to resize

Latest Videos

ಮಳೆಯಿಂದ ಗೃಹಪಯೋಗಿ ವಸ್ತುಗಳಿಗೆ ಹಾನಿ: ಕಳೆದೊಂದು ವಾರದಿಂದ ಕಾಫಿನಾಡಲ್ಲಿ ಧಾರಾಕಾರಾವಾಗಿ ಸುರಿಯುತ್ತಿದೆ. ಮುಂಗಾರು ಪೂರ್ವ ಮಳೆರಾಯನ ಅರ್ಭಟಕ್ಕೆ ರೈತರಿಗೆ ಸಂತಸ ಮೂಡಿಸಿದೆ. ಮತ್ತೊಂದಡೆ  ಮಳೆ, ಗಾಳಿಯಿಂದ ಮನೆಯ ಮೇಲ್ಚಾವಣಿಯ ಹೆಂಚುಗಳು. ಸಿಮೆಂಟ್-ಕಬ್ಬಿಣದ ಶೀಟ್ ಗಳು. ಮನೆ ಮೇಲೆ ಮರ ಬಿದ್ದು ಗೃಹಪಯೋಗಿ ವಸ್ತುಗಳು ನಾಶವಾಗಿವೆ. ಗರ ಬಡಿದಂತ ಬರಕ್ಕೆ ತುತ್ತಾಗಿ ತಲೆ ಮೇಲೆ ಕೈಹೊದ್ದು ಕೂತಿದ್ದ ಕಾಫಿನಾಡಿಗರಿಗೆ ಮಳೆರಾಯ ಸುಖಃ-ದುಖಃ ಎರಡನ್ನೂ ನೀಡಿದ್ದಾನೆ. ಕೊಪ್ಪ-ಶೃಂಗೇರಿ-ಮೂಡಿಗೆರೆ-ಎನ್.ಆರ್.ಪುರದಲ್ಲಿ ನಿತ್ಯ ಸಂಜೆ ಮಳೆರಾಯ ಅಬ್ಬರಿಸಿ ಬೊಬ್ಬಿಡುತ್ತಿದ್ದಾನೆ. ಬಿರುಗಾಳಿ ಸಹಿತ ಕಳಸ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ತೆಂಗಿನ ಮರ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ. 

ಬಿಕಿನಿ ಧರಿಸಿ ಉಯ್ಯಾಲೆ ಆಡಿದ ಸಂಯುಕ್ತಾ ಹೆಗ್ಡೆ: ಬೇಸಿಗೆಯಲ್ಲಿ ಮತ್ತಷ್ಟು ಟೆಂಪರೇಚರ್ ಹೆಚ್ಚಿಸ್ಬೇಡಿ ಎಂದ ಪಡ್ಡೆಹೈಕ್ಳು!

ಮನೆ  ಮುಂಭಾಗದ ಮೇಲ್ಚಾವಣಿಯ ನೂರಾರು ಹೆಂಚುಗಳು ಬಿರುಗಾಳಿಗೆ ಬಲಿಯಾಗಿವೆ. ಕಲ್ಮಕ್ಕಿ, ನೆಲ್ಲಿಕೆರೆ, ಕೈಮರ ಗ್ರಾಮಗಳ ಹಲವು ಮನೆಗಳ ಮೇಲೆ ಬೃಹತ್ ಮರಗಳು ಬಿದ್ದು ಮನೆಗಳಿಗೆ ತೀವ್ರ ಹಾನಿಯಾಗಿದೆ, ಗೃಹಪಯೋಗಿ ವಸ್ತುಗಳು ನಾಶವಾಗಿವೆ. ಕುಗ್ರಾಮಗಳ ತಗ್ಗು ಪ್ರದೇಶಗಳಲ್ಲಿದ್ದ ಮನೆಗಳಿಗೆ ಕೆಸರು ಮಿಶ್ರಿತ ಮಳೆ ನೀರು ನುಗ್ಗಿ ಮನೆ ಸಂಪೂರ್ಣ ಕೆಸರುಮಯವಾಗಿವೆ.ಇತ್ತ ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದ ಸುತ್ತಮುತ್ತ ಭಾರೀ ಆಲಿಕಲ್ಲು ಮಳೆ ಆಗಿದೆ. ಮಳೆಜೊತೆಗೆ ಆಲಿಕಲ್ಲು ಬಿದ್ದ ಪರಿಣಾಮ ಹಸಿರು ಹುಲ್ಲಿನ ಮೇಲೆ ಮಲ್ಲಿಗೆ ಹೂವು ಸುರಿದಂತೆ ಭಾಸವಾಗಿದೆ. ಈ ದ್ರಶ್ಯವನ್ನು ಪ್ರವಾಸಿಗರ ಮೊಬೈಲ್ ನಲ್ಲಿ ಆಲಿ ಕಲ್ಲು ಮಳೆ ಆರ್ಭಟವನ್ನು  ಸೆರೆ ಹಿಡಿದ್ದಾರೆ.  

ಮಳೆ ಜೊತೆಗೆ ಬಿರುಗಾಳಿಯೇ ಆತಂಕ: ಕಾಫಿನಾಡಲ್ಲಿ ಮುಂಗಾರು ಪೂರ್ವ ವರುಣನ ಅಬ್ಬರಕ್ಕೆ ಮನೆಗಳಿಗೆ ಹಾನಿಯಾಗಿರುವುದಷ್ಟೆ ಅಲ್ಲದೆ ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ. ಎನ್.ಆರ್.ಪುರದಲ್ಲಿ ಸಿಡಿಲು ಬಿಡಿದು ಓರ್ವ ಸಾವನ್ನಪ್ಪಿದ್ರೆ, ಮೂಡಿಗೆರೆ-ಕೊಪ್ಪದಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮೀಣ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಅಲ್ಲಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಈವರೆಗೂ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 

ಮೀನಾ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ಪ್ರಾಸೀಕ್ಯೂಟರ್ ನೇಮಕ: ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಪರಮೇಶ್ವರ್

ಕಳೆದ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ವಿದ್ಯುತ್ ಕಂಬಗಳ ಮೇಲೆ ಮರದ ಕೊಂಬೆಗಳು ಬಿದ್ದು ವಿದ್ಯುತ್ ಕೂಡ ಇಲ್ಲದಂತಾಗಿದ್ದು ಕಾಫಿನಾಡ ಕುಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.ಒಟ್ಟಾರೆ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗೆ ನಾನಾ ರೀತಿ ಅವಾಂತರ ಸೃಷ್ಠಿಯಾಗೋದ್ರ ಜೊತೆ ಮೂವರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಮಳೆ ಜೊತೆ ಈ ಬಾರಿ ಬೀಸ್ತಿರೋ ರಣ ಬಿರುಗಾಳಿ ಕೂಡ ಜನರ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಐದಾರು ತಿಂಗಳಿಂದ ಹನಿ ನೀರಿಗೂ ಪರದಾಡ್ತಿದ್ದ ಜನ-ಜಾನುವಾರುಗಳ ಮೊಗದಲ್ಲಿ ಈ ಮಳೆ ಖುಷಿ ತಂದಿದೆ.

click me!