ಮುರುಘಾಮಠದ ಸುರಕ್ಷತೆ ದೃಷ್ಟಿಯಿಂದ ಆವರಣದಲ್ಲಿ ಸಿಸಿಟಿವಿ ಅಳವಡಿಕೆ

By Ravi Janekal  |  First Published Oct 15, 2022, 2:25 PM IST

ಮುರುಘಾ ಮಠದಲ್ಲಿ ಅ.5ರಂದು 47 ಪೋಟೋ ಕಳ್ಳತನ ನಡೆದಿತ್ತು. ಮುರುಘಾಶ್ರೀ ಗಣ್ಯರ ಜತೆಗಿದ್ದ ಪೋಟೋ ಕಳ್ಳತನ ಹಿನ್ನೆಲೆ ಇಂದು ಮಠದ ಮುಖ್ಯ ದ್ವಾರ, ಆವರಣದಲ್ಲಿ ಬಳಿ ಸಿಸಿ ಕ್ಯಾಮೆರಾ(CC Camer) ಅಳವಡಿಸಲಾಗಿದೆ. ಗಲಾಟೆ, ಗದ್ದಲ, ಕಳ್ಳತನ ಸಾಧ್ಯತೆ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಅಳವಡಿಕೆ


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಅ.15) : ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ ದಿನ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಂತ್ರಸ್ತ ಬಾಲಕಿಯರ ಪೋಷಕರು ಇಂದು ಸಿಡಬ್ಲೂಸಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದರು. ಸಂತ್ರಸ್ತ ಬಾಲಕಿಯರ ಹೇಳಿಕೆ ಸಹ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ವರದಿ ಇಲ್ಲಿದೆ.

Latest Videos

undefined

ಮುರುಘಾ ಶ್ರೀಗೆ ಶುರುವಾದ ಮತ್ತೊಂದು ಸಂಕಷ್ಟ: 4 ಹೊಸ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ಮುರುಘಾ ಮಠ(Murugha Math)ದ ಅಡುಗೆ ಸಹಾಯಕಿ ತನ್ನ ಇಬ್ಬರು ಅಪ್ರಾಪ್ತ ಮಕ್ಕಳ ಮೇಲೆ ಮಠದಲ್ಲಿ ಲೈಂಗಿಕ ದೌರ್ಜನ್ಯ(Sexual assault) ನಡೆದಿದೆ ಎಂದು ದೂರು ದಾಖಲಿಸಿದ್ದಳು. ತನ್ನ 12-14 ವರ್ಷದ ಮಕ್ಕಳ ಜೊತೆಗೆ ಇತರೆ ಇಬ್ಬರು ಮಕ್ಕಳ ಮೇಲೂ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ಈ ಹಿನ್ನೆಲೆ ಇಂದು ಮೈಸೂರಿನಲ್ಲಿರುವ ದೂರುದಾರ ಮಹಿಳೆ & ಒಬ್ಬ ಸಂತ್ರಸ್ತ ಬಾಲಕಿಯನ್ನು ಚಿತ್ರದುರ್ಗ(Chitradurga)ಕ್ಕೆ ಕರೆತರುವ ಸಾಧ್ಯತೆಯಿದೆ.

 ಈಗಾಗಲೇ ಚಿತ್ರದುರ್ಗದಲ್ಲಿರುವ ಓರ್ವ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಅಧಿಕಾರಿಗಳು ಪಡೆದಿದ್ದಾರೆ. ಸಿಡಬ್ಲೂಸಿ(CWC)ಯಿಂದ ಸಂತ್ರಸ್ತ ಬಾಲಕಿಯ ಆಪ್ತ ಸಮಾಲೋಚನೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಬೇರೆ ಜಿಲ್ಲೆಯಲ್ಲಿರುವ ಮತ್ತೋರ್ವ ಸಂತ್ರಸ್ತ ಬಾಲಕಿಯನ್ನು ಕರೆಸುವಂತೆ ಸಿಡಬ್ಲೂಸಿಗೆ ಪೊಲೀಸರ ಮನವಿ ಮಾಡಿದ್ದಾರೆ ಎನ್ನಲಾಗಿದೆ. ತನಿಖಾಧಿಕಾರಿ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್(CPI Balachandra Naik) ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. 

ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿಯರನ್ನು ಕರೆತಂದರೆ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಯುವ ಸಾಧ್ಯತೆಯೂ ದಟ್ಟವಾಗಿದೆ. ಜೊತೆಗೆ ಮುರುಘಾಮಠಕ್ಕೆ ಕರೆತಂದು ಸ್ಥಳ ಮಹಜರು ಮಾಡಬಹುದು. ಇನ್ನು ತನ್ನ ಮಕ್ಕಳ ಜೊತೆಗೆ ಇನ್ನಿಬ್ಬರ ಮಕ್ಕಳ ಮೇಲೂ ದೌರ್ಜನ್ಯ ನಡೆದಿದೆ ಎಂಬುದಕ್ಕೆ ಆ ಮಕ್ಕಳ ಪೋಷಕರು ಅಡುಗೆ ಸಹಾಯಕಿ ನಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಲು ಯಾರು? ಎಂದು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಮುರುಘಾ ಮಠದಲ್ಲಿ ಅ.5ರಂದು 47 ಪೋಟೋ ಕಳ್ಳತನ ನಡೆದಿತ್ತು. ಮುರುಘಾಶ್ರೀ ಗಣ್ಯರ ಜತೆಗಿದ್ದ ಪೋಟೋ ಕಳ್ಳತನ ಹಿನ್ನೆಲೆ ಇಂದು ಮುರುಘಾಮಠದ ಬಳಿ ಸಿಸಿ ಕ್ಯಾಮೆರಾ(CC Camer) ಅಳವಡಿಕೆ ಕಾರ್ಯ ನಡೆಯಿತು. ಮಠದ ಮುಖ್ಯ ದ್ವಾರ, ಆವರಣದಲ್ಲಿ ಅಳವಡಿಸಲಾಯಿತು‌. ಮಠದ ಬಳಿ ಗಲಾಟೆ, ಗದ್ದಲ, ಕಳ್ಳತನ ಸಾಧ್ಯತೆ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಸಿಸಿಟಿವಿ ಅಳವಡಿಸಲಾಗಿದೆ. 

Murugha Mutt: ಪೀಠಾಧಿಪತಿ ಸ್ಥಾನದಿಂದ ಮುರುಘಾಶ್ರೀ ವಜಾಗೊಳಿಸಿ, ಸರ್ಕಾರಕ್ಕೆ ಮನವಿ

ಮುರುಘಾಮಠದಲ್ಲಿ ನಾಲ್ಕುವರೆ ವರ್ಷದ ಹೆಣ್ಣು ಮಗು ಪತ್ತೆ ಕೇಸ್ ವಿಚಾರವಾಗಿ ಬೀದಿಬದಿ ಮಕ್ಕಳು ಹಾಕಿ ಮಠಕ್ಕೆ ಒಪ್ಪಿಸಲು ಪತ್ರ ಬರೆದಿಡುತ್ತಿದ್ದ ಹಿನ್ನೆಲೆ ಮಠದ ಮುಖ್ಯ ದ್ವಾರದ ಬಳಿ ಈ ಮೊದಲೇ ತೊಟ್ಟಿಲು ನಿರ್ಮಾಣವಾಗಿತ್ತು. ಸುಮಾರು ವರ್ಷಗಳ ಹಿಂದೆಯೇ ತೊಟ್ಟಿಲು ನಿರ್ಮಿಸಲಾಗಿತ್ತು.

click me!